Spread the love
ಲಂಚ ವಸೂಲಿ – ಎ.ಎಸ್.ಐ ಸೇರಿ ಇಬ್ಬರನ್ನು ಅಮಾನತು ಮಾಡಿದ ಬಳ್ಳಾರಿ ಎಸ್ಪಿ ನಿಂಬರಗಿ
ಬಳ್ಳಾರಿ: ಹೈವೆ ಪ್ಯಾಟ್ರೋಲಿಂಗ್ ಸಮಯದಲ್ಲಿ ವಾಹನ ಸವಾರರಿಂದ ಲಂಚ ವಸೂಲಿ ಆರೋಪದ ಮೇರೆಗೆ ಕುರುಗೋಡು ಠಾಣೆಯ ಎಎಸ್ ಐ ಫಾರೂಕ್ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕ ಇಕ್ಬಾಲ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಆದೇಶೀಸಿದ್ದಾರೆ.
ಕೆಲವು ದಿನಗಳ ಹಿಂದೆ ಈ ಇಬ್ಬರು ನಗರದ ಸಿರುಗುಪ್ಪ ರಸ್ತೆಯಲ್ಲಿ ತಪಾಸಣೆ ನೆಪದಲ್ಲಿ ವಾಹನ ಸವಾರರಿಂದ ಹಣ ಪಡೆಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಈ ಕುರಿತು ತನಿಖೆ ನಡೆಸಿದ ಎಸ್ಪಿ ನಿಂಬರಗಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು ತನಿಖೆಯನ್ನು ಮುಂದುವರೆಸಿದ್ದಾರೆ.
Spread the love