ಲವ್ ಜಿಹಾದ್ ವಿರುದ್ದ ಜಿಲ್ಲೆಯಾದ್ಯಂತ 15ದಿನಗಳ ಜನಜಾಗೃತಿ

Spread the love

ಲವ್ ಜಿಹಾದ್ ವಿರುದ್ದ ಜಿಲ್ಲೆಯಾದ್ಯಂತ 15ದಿನಗಳ ಜನಜಾಗೃತಿ

ಮಂಗಳೂರು: ಲವ್ ಜಿಹಾದ್ ವಿರುದ್ದ ಹಿಂದೂ ಸಮಾಜದಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ಜನವರಿ 3 ರಿಂದ 15ದಿನಗಳ ಕಾಲ ಜಿಲ್ಲೆಯಾದ್ಯಂತ ಜನಜಾಗೃತಿ ಹಮ್ಮಿಕೊಳ್ಳಲಾಗಿದೆ.

 

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಅವರು ಜನವರಿ 2 ರಂದು ನಗರದ ಪಿವಿಎಸ್ ಬಳಿಯ ಶ್ರೀ ಲಕ್ಷ್ಮೀನಾರಯಣಿ ದೇವಸ್ಥಾನದಲ್ಲಿ ಜನಜಾಗೃತಿ ಅಭಿಯಾನ ಆರಂಭಗೊಳ್ಳಲಿದ್ದು, ನಗರದ ೆಲ್ಲಾ ಕಾಲೇಜು, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದಲ್ಲಿರುವ ಯುವತಿಯರಿಗೆ, ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚಿ ಲವ್ ಜಿಹಾದ್ ಷಡ್ಯಂತ್ರವನ್ನು ತಿಳಿಸಲಾಗುವುದು. ವಿಹಿಂಪ, ಬಜರಂಗದಳ, ದುರ್ಗಾವಾಹಿನಿ ಘಟಕಗಳ ಮೂಲಕ ವಾರ್ಡ್, ಗ್ರಾಮಗಳಲ್ಲಿ ಸಭೆ ನಡೆಸಿ ಜನಜಾಗೃತಿ ಕಾರ್ಯಕ್ರಮ ಮಾಡಲಾಗುವುದು. ಜಾತಿ ಸಂಘಟನೆಗಳ ಮುಖಂಡರ ಸಭೆ ಕರೆದು ಲವ್ ಜಿಹಾದ್ ವಿರುದ್ದ ಅರಿವು ಮೂಡಿಸಲಾಗುವುದು.

ಲವ್ ಜಿಹಾದ್ ಗೆ ವ್ಯವಸ್ಥಿತ ಜಾಲಕ್ಕೆ ದಕ, ಕಾಸರಗೋಡು, ಉಡುಪಿ ಭಾಗದ ಹಿಂದು ಯುವತಿಯರು ಬಲಿಯಾಗುತ್ತಿದ್ದು, ಪ್ರೀತಿ, ಪ್ರೇಮ, ಮೋಸ, ಆಮಿಷದ ಬಲೆಗೆ ಸಿಲುಕಿ ಹಲವಾರು ಹೆಣ್ಮಕ್ಕಳು ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ. ಧರ್ಮಾಂಧತೆಯನ್ನು ತಲೆಗೆ ತುಂಬಿ ದೇಶ ವಿರೋಧಿ ಚಟುವಟಿಕೆಗೆ ಬಳಸಿಕೊಂಡು ಹಿಂದೂ ಧರ್ಮವನ್ನು ನಾಶ ಮಾಡುವ ವ್ಯವಸ್ಥಿತ ಹುನ್ನಾರ ಇದಾಗಿದೆ.

ನಿಜವಾದ ಪ್ರೀತಿಗೆ ನಮ್ಮ ವಿರೋಧ ಇಲ್ಲ ಯಾರೇ ಆಗಲಿ ಪ್ರೀತಿಸಿ ಮದುವೆಯಾಗಿ ಸಮಾಜದ ಮುಂದೆ ಜೀವನ ನಡೆಸಿದರೆ ನಮ್ಮ ವಿರೋಧವಿಲ್ಲ. ದುರುದ್ದೇಶದಿಂದ ಹಿಂದೂ ಹುಡುಗಿಯರನ್ನು ಪ್ರಿತಿಸಿ ಇಸ್ಲಾಂಗೆ ಮತಾಂತರಗೊಳಿಸಿ, ಭಯೋತ್ಪಾದನೆ, ಡ್ರಗ್ಸ್ ಮಾಫಿಯಾಕ್ಕೆ ಬಳಸಿಕೊಂಡ ಉದಾಹರಣೆಗಳಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಹಲವಾರು ಯುವತಿಯರು ಲವ್ ಜಿಹಾದ್ ದಾಳಕ್ಕೆ ಬಲಿಯಾಗಿ ನಾಪತ್ತೆಯಾಗಿ ವಿದೇಶದಲ್ಲಿ ಪತ್ತೆಯಾಗುತ್ತಿದ್ದಾರೆ. ಸಾಕಷ್ಟು ತಾಳ್ಮೆಯನ್ನು ಹಿಂದೂ ಸಮಾಜ ವಹಿಸಿದ್ದು, ಈಗ ಲವ್ ಜಿಹಾದ್ ಪ್ರಕರಣಗಳ ಸಂಖ್ಯೆ ಮಿತಿಮೀರಿದೆ. ಈ ಹಿನ್ನಲೆಯಲ್ಲಿ ಲವ್ ಜಿಹಾದ್ ತಡೆಗಟ್ಟಲು ಹೋರಾಟ ನಡೆಸಲೇಬೇಕಾಗಿದೆ ಎಂದರು.

ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ಗೋಪಾಲ್ ಕುತ್ತಾರ್, ಭುಜಂಗ ಕುಲಾಲ್, ಸುರೇಖಾ ರಾಜ್ ಉಪಸ್ಥಿತರಿದ್ದರು.


Spread the love