ಲಾಕ್ ಡೌನ್ ಉಲ್ಲಂಘಿಸಿ ಕೋಳಿ ಅಂಕ, ಅಮಾಸೆಬೈಲು ಪೊಲೀಸರಿಂದ ದಾಳಿ
ಕುಂದಾಪುರ: ಕೊರೋನಾ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ದಾಳಿ ನಡೆಸಿದ್ದಾರೆ.
ಮೇ 1ರಂದು ಹೊಸಂಗಡಿ ಬಾನಿಮನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಕೋಳಿ ಅಂಕದ ಆಟ ನಡೆಸುತ್ತಿರುವುದಾಗಿ ಅಮಾಸೆಬೈಲು ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಅವರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿದಾಗ ಆರೋಪಿಗಳಾದ ಹೊಸಂಗಡಿ ನಿವಾಸಿ ಶಂಕರ (40), ಅಶೋಕ (33), ಸಿದ್ದಾಪುರ ನಿವಾಸಿ ಸುಧಾಕರ ಪೂಜಾರಿ, ಶರತ್ ಶೆಟ್ಟಿ, ಸಂತೋಷ್ ಶೆಟ್ಟಿ ಹೊಸಂಗಡಿ, ವಿಕ್ರಮ್ ಶೆಟ್ಟಿ ಮಚ್ಚಟ್ಟು, ದೇವಿ ಪ್ರಸಾದ್ ಶೆಟ್ಟಿ ದಾಳಿಯ ವೇಳೆ ಒಡಿಹೋಗಿದ್ದಾರೆ.
ದಾಳಿಯ ವೇಳೆ ವಿವಿಧ ಜಾತಿ ಹಾಗೂ ಬಣ್ಣದ 07 ಹುಂಜ ಕೋಳಿಗಳನ್ನು (ಅಂದಾಜು ಮೌಲ್ಯ 2800/-), ಕೋಳಿ ಅಂಕಕ್ಕೆ ಪಣವಾಗಿಟ್ಟ ಹಣ 850 /- ರೂಪಾಯಿ ಬಾಳುಕತ್ತಿ-2, ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ: 93,87, ಕೆ.ಪಿ.ಆಕ್ಟ್, :ಮತ್ತು ಕಲಂ :269 ಜೊತೆಗೆ 149 ಐಪಿಸಿ,& ಕಲಂ 51 (B) Disaster Management Act 2005 ರಂತೆ ಪ್ರಕರಣ ದಾಖಲಾಗಿದೆ.