ಲಾಕ್ ಡೌನ್ ; ಮಾ29 ರಿಂದ ಉಡುಪಿ ಜಿಲ್ಲೆಯಲ್ಲಿ ಬೆ 7 ರಿಂದ 11 ರವರೆಗೆ ಮಾತ್ರ ದಿನಸಿ ಖರೀದಿಸಲು ಸಮಯ ನಿಗದಿ
ಉಡುಪಿ: ಕೊರೋನಾ ವೈರಸ್ ಸೋಂಕುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್ ಡೌನ್ ಹೇರಿದ್ದು ಉಡುಪಿ ಜಿಲ್ಲೆಯಲ್ಲೂ ಕೂಡ ಕಟ್ಟುನಿಟ್ಟಿನಲ್ಲಿ ಜಾರಿಗೆಗೊಳಿಸಲಾಗುತ್ತಿದ್ದ ಅದರಂತೆ ಮಾರ್ಚ್ 29ರಿಂದ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಮಾತ್ರ ದಿನ ಬಳಕೆ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು ಸಾರ್ವಜನಿಕರು ತಮಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಖರೀದಿಸಲು ಅವಕಾಶ ನೀಡಿಲಾಗಿದ್ದು ಬೆಳಿಗ್ಗೆ 7 ರಿಂದ 11 ಘಂಟೆಯವರೆಗೆ ಸಮಯ ನಿಗದಿಪಡಿಸಲಾಗಿದ್ದು ಅವಶ್ಯಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಈ ಸಮಯದಲ್ಲಿ ಮಾತ್ರ ತೆರಯಲು ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ತಮಗೆ ಅಗತ್ಯವಿರುವ ದಿನಸಿ/ತರಕಾರಿ/ಹಾಲು/ಹಣ್ಣು ಹಂಪಲು/ಮಾಂಸ/ ಮೀನು ಮುಂತಾದ ಅವಶ್ಯಕ ಸಾಮಾಗ್ರಿಗಳನ್ನಿ ಈ ಅವಧಿಯ್ಲಲಿ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಈ ಅಂಗಡಿಗಳನ್ನು ಮುಚ್ಚಬೇಕು ಹಾಗೂ ಈ ನಿರ್ಬಂಧ ಮೆಡಿಕಲ್ ಶಾಪ್ ಗಳಲ್ಲಿ ಅನ್ವಯಿಸುವುದಿಲ್ಲ.
ರಸ್ತೆಗಳಲ್ಲಿ ಅನಗತ್ಯವಾಗಿ ಜನರು ಸಂಚರಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.