ಲಾಕ್ ಡೌನ್ ವೇಳೆ ಲಿಫ್ಟ್ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ – ಆರೋಪಿಯನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು

Spread the love

ಲಾಕ್ ಡೌನ್ ವೇಳೆ ಲಿಫ್ಟ್ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ – ಆರೋಪಿಯನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು

ಉಡುಪಿ : ಲಾಕ್ ಡೌನ್ ವೇಳೆಯಲ್ಲಿ ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ನಿವಾಸಿ ಹೊನ್ನಪ್ಪ (34) ಎಂದು ಗುರುತಿಸಲಾಗಿದೆ. ಪ್ರಸ್ತುತ ಈತ ಐರೋಡಿ ಗ್ರಾಮದ ಹಲ್ಸೆಬೆಟ್ಟು ಎಂಬಲ್ಲಿ ವಾಸವಾಗಿದ್ದಾನೆ.

ಮಹಿಳೆಯೋರ್ವರು ಕೆಲಸ ಮುಗಿಸಿ ಮನೆಗೆ ತೆರಳುಲು ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಬಂದು ಡ್ರಾಪ್ ನೀಡುವುದಾಗಿ ನಂಬಿಸಿ ಈತ ಕರೆದುಕೊಂಡು ಹೋಗಿದ್ದಾನೆ. ಬ್ರಹ್ಮಾವರದಿಂದ ಉಡುಪಿ ಸಂತೆಕಟ್ಟೆಗೆ ಬಿಡುವಂತೆ ಮಹಿಳೆ ತಿಳಿಸಿದ್ದು. ದಿನಸಿ ಕಿಟ್ ಹಿಡಿದುಕೊಂಡಿದ್ದ ಮಹಿಳೆ, ಆರೋಪಿಯ ಮೋಟಾರ್ ಸೈಕಲ್ ನ ಹಿಂಬದಿ ಕುಳಿತಿದ್ದರು. ಮಧ್ಯ ದಾರಿಯಲ್ಲೇ ಬೇರೆ ದಾರಿಯಲ್ಲಿ ವೇಗವಾಗಿ ಆರೋಪಿ ಬೈಕ್ ಚಲಾಯಿಸಿಕೊಂಡು ಹೋಗಿ ಬಳಿಕ ಹಾಡಿಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಮಹಿಳೆ ಆರೋಪಿಸಿದ್ದರು. ಪೊಲೀಸರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಕೊಲೆ ಮಾಡುತ್ತೇನೆಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಕೊಲೆ ಮಾಡಲು ಕಲ್ಲು ಹುಡುಕಲು ಹೋದ ಸಂದರ್ಭದಲ್ಲಿ ಮಹಿಳೆ ತಪ್ಪಿಸಿಕೊಂಡಿದ್ದು, ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರನ್ನು ಸ್ವೀಕರಿಸಿದ ಬ್ರಹ್ಮಾವರ ಪಿ ಎಸ್ ಐ ರಾಘವೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಸಿಸಿ ಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆತ ಉಪಯೋಗಿಸಿದ ಕೆ ಎ18 ಕ್ಯೂ 3094 ಬಜಾಜ್ ಪ್ಲಾಟಿನ ಬೈಕ್ ಪತ್ತೆ ಹಚ್ಚಿದ್ದು ಅದರ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಈತನು 20 ವರ್ಷದಿಂದ ಮಾಬುಕಳ ದ ಸ್ಥಳದಲ್ಲಿ ವಾಸವಾಗಿದ್ದು, ಪ್ರಸ್ತುತ ಸಂತೆಕಟ್ಟೆ ಯಲ್ಲಿರುವ ಬೇಕರಿಯೊಂದರಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ.

ಆರೋಪಿಯನ್ನು ಬಂಧಿಸಿರುವ ಬ್ರಹ್ಮಾವರ ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.


Spread the love