ಲಾರಿ ಕಳ್ಳತನದ ಆರೋಪಿ ಲಾರಿ ಸಮೇತ ವಶಕ್ಕೆ
ಮಂಗಳೂರು: ಬಾಡಿಗೆಗೆ ಹೋಗದೆ ಲಾರಿಯನ್ನು ಕಳ್ಳತನ ಮಾಡಿದ ಆರೋಪಿಯನ್ನು ಲಾರಿಯ ಸಮೇತ ಪೊಲೀಶರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ರಾಮನಗರ ಜಿಲ್ಲೆಯ ಮಹೇಶ್ ಕೆ ಎಸ್ (36) ಎಂದು ಗುರುತಿಸಲಾಗಿದೆ.
ಬೆಂಗಳೂರು ಮೂಲದ ಲಾರಿ ಮಾಲಕ ಹೆಂಜಾರಪ್ಪ ಸಿದ್ದಪ್ಪ ಎಂಬವರಿಗೆ ಸೇರಿದ ಲಾರಿಯಲ್ಲಿ ದಿನಾಂಕ 06.01.2019 ರಂದು ಚಾಲಕ ಕೆಲಸಕ್ಕೆ ಸೇರಿದ್ದ ಮಹೇಶ್ ಎಂಬಾತನು ಬೆಂಗಳೂರು ನಿಂದ ಲೋಡ್ ಪಡೆದು ಮಂಗಳೂರು ತಲುಪಿ ಅನ್ ಲೋಡ್ ಮಾಡಿದ್ದು, ಬಳಿಕ ಎಲ್ಲಿಗೂ ಬಾಡಿಗೆಗೆ ಹೋಗದೇ ಲಾರಿಯನ್ನು ಮಾರಟ ಮಾಡಲು ಪ್ರಯತ್ನಿಸಿದ್ದು, ನಾಲ್ಕು ದಿನಗಳು ಕಳೆದರೂ ಲಾರಿಯ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದ ಕಾರಣ ಲಾರಿಯ ಮಾಲಕನು ಮಂಗಳೂರಿಗೆ ಬಂದು ಹುಡುಕಾಡಿದಲ್ಲಿ ಲಾರಿ ಕಾಣದೇ ಇದ್ದಾಗ ಪಣಂಬೂರು ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪಣಂಬೂರು ಠಾಣಾ ಪೊಲೀಸರು ಆರೋಪಿ ತಲಾಶೆಯಲ್ಲಿರುವಾಗ ಈ ದಿನ ದಿನಾಂಕ; 20-01-2019 ಸುರತ್ಕಲ್ ನ ಮುಕ್ಕ ಟೋಲ್ ಗೇಟ್ ನ ಬಳಿ ಸಿಕ್ಕಿ ಬಿದ್ದಿರುತ್ತಾನೆ. ಲಾರಿಯನ್ನು ಪರಿಶೀಲಿಸಲಾಗಿ ಲಾರಿ ಹಿಂಬದಿಯ ಎರಡು ಟಯರ್ ಗಳು ಮತ್ತು ಟರ್ಪಾಲನ್ನು ಮಾರಾಟ ಮಾಡಿದ್ದು, ಲಾರಿಯನ್ನು ಮತ್ತರು ಟಯರ್ ಮಾರಾಟ ಮಾಡಿದ ಹಣದಲ್ಲಿ ಖರ್ಚಾಗಿ ಉಳಿದ ಭಾಗಶಃ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಬಂಧಿತನಿಂದ ರೂ 7 ಲಕ್ಷ ಮೌಲ್ಯದ ಲಾರಿ, ರೂ 5000 ಮೌಲ್ಯದ ಮೊಬೈಲ್ ಹಾಗೂ ನಗದು ರೂ 9000 ವಶಪಡಿಸಿಕೊಳ್ಳಲಾಗಿದೆ.
ಲಾರಿ ಸಮೇತ ಆರೋಪಿ ಯನ್ನು ವಶಕ್ಕೆ ಪಡೆಯುವಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕರಾದ ರಫೀಕ್ ಕೆ.ಎಂ, ಉಪ-ನಿರೀಕ್ಷಕರಾದ ಉಮೇಶ್ ಕುಮಾರ್ ಎಂ. ಎನ್, ಮಂಗಳೂರು ಉತ್ತರ ಉಪವಿಭಾಗ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿರುತ್ತಾರೆ.