ಲೇಡಿಗೋಶನ್ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಬೀದಿ ವ್ಯಾಪಾರಿಗಳಿಂದ ವಿರೋಧ
ಮಂಗಳೂರು: ಲೇಡಿ ಗೋಶನ್ ಆಸ್ಪತ್ರೆ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣದ ವಿರುದ್ಧ ಬೀದಿ ವ್ಯಾಪಾರಿಗಳು ಮೇ 6 ರಂದು ಪ್ರತಿಭಟನೆ ನಡೆಸಿದರು.
ನಗರದಲ್ಲಿನ ಕೇಂದ್ರ ಮಾರುಕಟ್ಟೆ ಏಪ್ರಿಲ್ 4ರಿಂದ ಎಪಿ ಎಮ್ ಸಿ ಸ್ಥಳಾಂತರಗೊಂಡಿದ್ದು ಹೋಲ್ ಸೇಲ್ ವ್ಯಾಪಾರಿಗಳು ವರ್ತಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಏಪ್ರಿಲ್ 7ರಂದು ಮಹಾನಗರ ಪಾಲಿಕೆ ಕೇಂದ್ರ ಮಾರುಕಟ್ಟೆಯನ್ನು ನೆಲಸಮ ಮಾಡಲು ಸೂಚಿಸಿದ್ದು ಇದನ್ನು ವಿರೋಧಿಸಿ ವರ್ತಕರು ಹೈಕೋರ್ಟ್ ಮೊರೆ ಹೋಗಿದ್ದರು
ಮೇ 5 ರಂದು ಹಿರಿಯ ವಕೀಲ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ, ವಕೀಲ ಲತೀಫ್ ಬಡಗನೂರ್, ಅಕ್ಬರ್ ಪಾಷಾ ಅವರು ಏಕ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಿಟ್ ಅರ್ಜಿದಾರರ ಪರವಾಗಿ ವಾದಿಸಿದರು. ನ್ಯಾಯಾಲಯವು ಆದೇಶವನ್ನು ಅಂಗೀಕರಿಸಿದ್ದು ಮತ್ತು ನಗರ ಮಾರುಕಟ್ಟೆ ಕಟ್ಟಡವನ್ನು ನೆಲಸಮ ಮಾಡದಂತೆ ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದೆ.
ಮೇ 6 ರಂದು ಬೀದಿ ಬದಿ ವ್ಯಾಪಾರಿಗಳು ಲೇಡಿ ಗೊಶನ್ ಬಳಿ 10 ಅಡಿ ರಸ್ತೆ ಅತಿಕ್ರಮಣ ಮಾಡುವ ಮೂಲಕ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸಿದರು. ಬೀದಿ ಬದಿ ವ್ಯಾಪಾರಿಗಳು ತಮ್ಮ ಜೀವನೋಪಾಯವನ್ನು ಸಂಪಾದಿಸುವಾಗ, ಮಹಾನಗರಪಾಲಿಕೆ ದಾಳಿ ನಡೆಸುತ್ತಿದೆ ಮತ್ತು ತಮ್ಮ ವ್ಯವಹಾರ ಮಾಡಲು ಅವಕಾಶ ನೀಡುತ್ತಿಲ್ಲ. ಈಗ ಎಂಸಿಸಿ ರಸ್ತೆ ಅತಿಕ್ರಮಿಸಿ ತಾತ್ಕಾಲಿಕ ಮಾರುಕಟ್ಟೆಯನ್ನು ಏಕೆ ನಿರ್ಮಿಸುತ್ತಿದೆ? ಎಂದು ವ್ಯಾಪಾರಿಗಳು ಪ್ರಶ್ನಿಸಿದರು.