ವಾರಪತ್ರಿಕೆಯಲ್ಲಿ ಪೇಜಾವರ ಸ್ವಾಮಿಜಿ ವಿರುದ್ದ ಅವಹೇಳನಕಾರಿ ಬರಹ ; ದೂರು ದಾಖಲು
ಉಡುಪಿ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿಯ ವಿರುದ್ದ ಕಪೋಲಕಲ್ಪಿತ ಆಧಾರ ರಹಿ ದುರುದ್ದೇಶ ಪೂರಿತ ನಿಂದನಾತ್ಮಕ ಬರಹ ಪ್ರಕಟಿಸಿದ ವಾರಪತ್ರಿಕೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೇಜಾವರ ಮಠದ ಅಭಿಮಾನಿಗಳು ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಪ್ರೇಜಾವರ ಶ್ರೀ ಸಮಸ್ತ ಅಭಿಮಾನಿಗಳ ಪರವಾಗಿ ಅನ್ಸಾರ್ ಅಹಮ್ಮದ್ ಅವರು ದೂರು ನೀಡಿದ್ದು, ಬೆಂಗಳೂರಿನಿಂದ ಪ್ರಕಟವಾಗಿರುವ ವಾರಪತ್ರಿಕೆಯೊಂದು ತನ್ನ ಅಗಸ್ಟ್ 6 ರ ಸಂಚಿಕೆಯಲ್ಲಿ ಸ್ವಂತ ತಂಗಿಯನ್ನೂ ಬಿಡದ ಈತನಿಗೆ ಮೂರು ಮಕ್ಕಳಲ್ಲ ಎಂಬ ಶೀರೊನಾಮೆಯಡಿ ಪೇಜಾವರ ಸ್ವಾಮೀಜಿಯ ವಿರುದ್ದ ಕಪಲೋಕಲ್ಪಿತವಾದ ಮತ್ತು ದುರುದ್ದೇಶಪೂರಿತ ಬರಹ ಪ್ರಕಟವಾಗಿದೆ. ಇದರ ಮೂಲ ಉದ್ದೇಶ ಏನೆಂದರೆ ಸ್ವಾಮೀಜಿಯವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ಹೊಡೆಯುವ ಉದ್ದೇಶವಾಗಿದ್ದು, ಎಲ್ಲಾ ಧರ್ಮದಲ್ಲಿಯೂ ಇರುವ ಸ್ವಾಮೀಜಿಯವರ ಅಭಿಮಾನಿಗಳನ್ನು ಕೆರಳಿಸಿದೆ. ಇಂತಹ ಬರಹದಿಂದಾಗಿ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಳ್ಳೂವ ಸಾಧ್ಯತೆಯಿದ್ದು ಉಡುಪಿ ನಾಗರಿಕರ ಶಾಂತಿ-ಸೌಹಾರ್ದತೆಗೆ ಭಂಗ ತರಲಿದೆ.
ಪೋಲಿಸರು ಈ ಬಗ್ಗೆ ಪರಿಶೀಲಿಸಿ ಕೂಡಲೇ ಪತ್ರಿಕಾ ಸಂಪಾದಕರನ್ನು ಬಂಧಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿಬೇಕಾಗಿ ದೂರಿನಲ್ಲಿ ಕೋರಲಾಗಿದೆ.
Which weekly magazine is this?