ವಾಹನ ಚಾಲಕರಲ್ಲಿ ತಾಳ್ಮೆ, ಜಾಗರುಕತೆ , ಪ್ರಾಮಾಣಿಕತೆಯಿರಲಿ: ಮೊ. ಡೆನಿಸ್ ಮೋರಸ್ ಪ್ರಭು
ಮಂಗಳೂರು: ಸಂತ ಕ್ರಿಸ್ಟೋಫರ್ ಅಸೋಸಿಯೇಷನ್ ಮಂಗಳೂರು ರಿ. ಇದರ ವತಿಯಿಂದ ಚರ್ಚ್ನಲ್ಲಿ ಪೂಜೆ ವಿಧಾನ ನಡೆಸಿ ವಠಾರದಲ್ಲಿ ವಾಹನಗಳಿಗೆ ಆಶೀರ್ವಾದ ಗೈದು ಆನಂತರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸುವ ಕಾರ್ಯಕ್ರಮ ರೊಸಾರಿಯೊ ಕಲ್ಚರಲ್ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮೊ. ಡೆನಿಸ್ ಮೋರಸ್ ಪ್ರಭುರವರು ಮಾತನಾಡಿ ಸಂಘದ ಸದಸ್ಯರು ವಾಹನ ಚಾಲಕರಾಗಿದ್ದು ತಾಳ್ಮೆ,ಜಾಗರುಕತೆ , ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದು ಇದು ನಮ್ಮ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಸಂತೋಷದಾಯಕದ ವಿಷಯವಾಗಿದೆ. ತಮ್ಮ ಈ ದುಡಿಮೆಯಿಂದ ಇಂದು ತಮ್ಮ ಮಕ್ಕಳು ಶಿಕ್ಷಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಗೈದಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ವಿಧಾನಪರಿಷತ್ತಿನ ಸದಸ್ಯರಾದ ಐವನ್ ಡಿಸೋಜರವರು ಎಸೋಸಿಯೇಶನ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯು ಸರಕಾರದ ಸೌಲತ್ತುಗಳನ್ನು ಪಡೆಯಲು ಕರೆ ಕೊಟ್ಟರು.
ಇನ್ನೊರ್ವ ಅತಿಥಿಗಳಾದ ಪಾಂಡೆಶ್ವರ ಪೊಲೀಸ್ ಠಾಣೆಯ ಇಂಟೆಲಿಜೆನ್ಸ್ ವಿಭಾಗದ ಪೊಲೀಸ್ ಎ. ಎಸ್. ಐ. ಲಿನೆಟ್ ಕ್ಯಾಸ್ತಲಿನೊ ಅವರು ಮಾತನಾಡಿ ಸಂಸ್ಥೆಯು ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಹಾಸ್ಟೆಲ್ ನಲ್ಲಿ ಸಹಬಾಳ್ವೆಯಿಂದ ವಾಸಿಸುತ್ತಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರು. ಇಂದು ಈ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸರಕಾರಿ ಕೆಲಸಕ್ಕೆ ಸೇರಿಕೊಳ್ಳಲು ಆಸಕ್ತಿ ವಹಿಸಲು ಕರೆ ಕೊಟ್ಟರು.
ಸಂಘದ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಸ್ವಾಗತಿಸಿ ಕಾರ್ಯದರ್ಶಿ ನೈಝಿಲ್ ಪಿರೇರ ಧನ್ಯವಾದಗೈದರು.
ವೇದಿಕೆಯಲ್ಲಿ ಗೌರವ ಅಧ್ಯಕ್ಷರಾದ ಸುಶೀಲ್ ನೊರೊನ್ಹ, ಆಧ್ಯಾತ್ಮಿಕ ನಿರ್ದೇಶಕರಾದ ವಂ.ಜೆ.ಬಿ.ಕ್ರಾಸ್ತ ಉಪಸ್ಥಿತರಿದ್ದು ಶ್ರೀಮತಿ ಲೀನಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.