ವಿಎಚ್ ಪಿ ಬಜರಂಗದಳ ವತಿಯಿಂದ ಚೀನಾ ವಸ್ತುಗಳನ್ನು ಸುಟ್ಟು ಪ್ರತಿಭಟನೆ
ಮಂಗಳೂರು: ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ರಾಷ್ಟ್ರವ್ಯಾಪಿ ಆಂದೋಲನದ ಪ್ರಯುಕ್ತ ಚೀನಿ ವಸ್ತುಗಳನ್ನು ಸುಡುವುದರ ಮೂಲಕ ನಗರದ ಕದ್ರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಶ್ವ ಹಿಂದು ಪರಿಷತ್ ನಾಯಕ ಎಂ ಬಿ ಪುರಾಣಿಕ್ ಮಾತನಾಡಿ ಭಾರತಕ್ಕೆ ಕಡಿಮೆ ಬೆಲೆಯ ವಸ್ತುಗಳನ್ನು ರಫ್ತು ಮಾಡುವುದರ ಮೂಲಕ ತಮ್ಮ ಆರ್ಥಿಕತೆಯನ್ನು ಚೀನಾ ಬಲಗೊಳಿಸಿಕೊಳ್ಳುತ್ತಿದೆ ಎನ್ನುವುದನ್ನು ನಾವು ಆರ್ಥ ಮಾಡಿಕೊಳ್ಳಬೇಕಾಗಿದೆ. ಚೀನಾ ಭಾರತದ ಮೇಲೆ ಧಾಳಿ ನಡೆಸುವುದಕ್ಕಾಗಿ ಪಾಕಿಸ್ತಾನದೊಂದಿಗೆ ಕೈಜೋಡಿಸಿದ್ದು ಯಾವುದೇ ಕಾರಣಕ್ಕೂ ಅದನ್ನು ನಂಬುವ ಪರಿಸ್ಥಿತಿಯಲ್ಲಿಲ್ಲ. ನಾವು ಚೀನಾ ವಸ್ತುಗಳನ್ನು ಖರೀದಿಸಿ ಚೀನಾವನ್ನು ಆರ್ಥಿಕವಾಗಿ ಬಲಿಷ್ಟ ರಾಷ್ಟ್ರವಾಗಲು ಸಹಕರಿಸುತ್ತಿದ್ದೇವೆ. ಒಮ್ಮೆ ಭಾರತೀಯರು ಚೀನಾ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಿದ್ದಲ್ಲಿ ತನ್ನಿಂದ ತಾನೇ ಆರ್ಥಿಕವಾಗ ಚೀನಾ ಕುಸಿಯುತ್ತದೆ. ಇಂದು ಪ್ರತಿಯೊಬ್ಬರು ಚೀನಾ ವಸ್ತುಗಳಾದ ಟಿವಿ ಮೊಬೈಲ್ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಹಿಷ್ಟರಿಸುವ ಪ್ರತಿಜ್ಞೆ ಮಾಡಬೇಕು ಎಂದರು.
ಬಜರಂಗದಳದ ನಾಯಕ ಶರಣ್ ಪಂಪ್ ವೆಲ್, ಜಗದೀಶ್ ಶೇಣವ, ಭುಜಂಗ ಕುಲಾಲ್ ಹಾಗೂ ಇತರರು ಉಪಸ್ಥಿತರಿದ್ದರು.