ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ವಂಚಿಸಿದ ವ್ಯಕ್ತಿಯ ಬಂಧನ
ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ನಗರದ ಸೈಬರ್ ಕ್ರೈಂ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪಂಜಾಬ್ ಮೂಲದ ಕುಲವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ.
ಜುಲೈ 21 ರಂದು ಮಂಗಳೂರು ಪಾಂಡೇಶ್ವರ ನಿವಾಸಿ ಕಿರಣ್ ತಿಲಗೋಳ್ ಎಂಬವರು ಸೈಬರ್ ಕ್ರೈಂ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಅವರಿಗೆ 2017 ನವೆಂಬರ್ 30ರಂದು ಅವರ ಜಿ ಮೇಲ್ ಗೆ ಇಮೇಯ್ಲ ಮೂಲಕ ವಿದೇಶದಲ್ಲಿ ಕೆಲಸ ನೀಡುವುದಾಗಿ ಸಂದೇಶ ಬಂದಿದ್ದು, ಸದ್ರಿ ಮೇಲ್ ಗೆ ಸಂಪರ್ಕಿಸಿದಾಗ ಕೆನಡದಲ್ಲಿ ಕೆಲಸ ನೀಡುವುದಾಗಿ ತಿಳಿಸಿದ್ದಾರೆ. ವಿದೇಶದಲ್ಲಿ ಕೆಲಸ ಲಭಿಸುವುದಾಗಿ ನಂಭಿದ್ದ ಅವರು ತನ್ನ ಇತರ ಗೆಳೆಯರಾದ 26 ಮಂದಿಗೂ ಕೆಲಸ ಸಿಗಬಹುದೆಂಬ ಉದ್ದೇಶದಿಂದ ಸಂಸ್ಥೆಗೆ ಫೋನ್ ಮೂಲಕ ಸಂಪರ್ಕಿಸಿದಾಗ ಎಲ್ಲರಿಗೂ ಕೆಲಸ ಕೊಡಿಸುವುದಾಗಿ ತಿಳಿಸಿದ್ದು, ಈ ಬಗ್ಗೆ ಅರ್ಜಿ ಶುಲ್ಕ, ಲಿಮಾ ಶುಲ್ಕ ಹಾಗೂ ಇತರ ಶುಲ್ಕ ನೀಡಬೇಕು ಎಂದು ತಿಳಿಸಿದಂತೆ ಫಿರ್ಯಾದಿದಾರರು ಹಾಗೂ ಅವರ ಹಣ ಹಾಗೂ ಅವರ ಸ್ನೇಹಿತರ ಹಣ ಸೇರಿಸಿ ಒಟ್ಟು ರೂ 596150 ಹಣವನ್ನು ನೆಫ್ಟ್ ಮೂಲಕ ಸಲ್ಲಿಸದ್ದರು. ಅದರ ಬಳಿಕ ಸಂಸ್ಥೆಯಿಂದ ಯಾವ ಕರೆಗೂ ಸ್ಪಂದಿಸದೇ ಇದ್ದಾಗ ಮೋಸಹೋಗಿರುವುದು ಗೊತ್ತಾಗಿ ದೂರನ್ನು ದಾಖಲಿಸಿದ್ದಾರೆ.
ಈ ಬಗ್ಗೆ ತನಿಖೆ ಆರಂಭಿಸಿದ ಪೋಲಿಸರು ವಲ್ಡ್ ಸ್ಟಾರ್ ಪ್ಲೇಸ್ ಮೆಂಟ್ ಸರ್ವಿಸ್ ಪಂಜಾಬ್ ಸಂಸ್ಥೆಯ ಕುಲವಿಂದರ್ ಕುಮಾರ್ ಎಂಬುದು ತಿಳೀದು ಬಂದಿದ್ದು, ಅದರಂತೆ ಆರೋಪಿಯ ಪತ್ತೆಗೆ ಪ್ರಯತ್ನ ಮುಂದುವರೆಯಿತು. ಬಳಿಕ ಪ್ರಕರಣದ ಆರೋಪಿ ಗೋವಾದ ಕಲ್ಲಂಗೋಟ್ ಪರಿಸರದಲ್ಲಿರುವುದು ಮಾಹಿತಿ ತಿಳಿದು ಅಲ್ಲಿ ಹೋಗಿ ಹುಡುಕಿದಾಗ ಆರೋಪಿ ಟೂರಿಸ್ಟ್ ಆಗಿ ಸುತ್ತಾಡುತ್ತಿದ್ದು ಆತನ್ನನ್ನು ಪೋಲಿಸರು ಬಂಧಿಸಿದ್ದಾರೆ.