ವಿದ್ಯಾರ್ಥಿ ತುಳು ಸಮ್ಮೇಳನ : ಭಾಷೆ ,ಸಂಸ್ಕøತಿಗೆ ಪೂರಕವಾದ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನ
ಮಂಗಳೂರು: ತುಳು ಪರಿಷತ್ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದ ಎರಡನೇ ಸಮಾಲೋಚನಾ ಸಭೆ ನಗರದ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಿತು.
ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನಾ ಸಮಿತಿಯ ಅಧ್ಯಕ್ಷ ಡಾ. ಪ್ರಭಾಕರ್ ನೀರ್ಮಾರ್ಗ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಅವರು ಸಭಾ ಕಲಾಪವನ್ನು ನಡೆಸಿಕೊಟ್ಟರು. ಸಮ್ಮೇಳಣದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ವಿವಿಧ ಸ್ಪರ್ಧೆಗಳ ಬಗ್ಗೆ ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಸಭೆಗೆ ಮಾಹಿತಿ ನೀಡಿದರು.
ಪ್ರೌಢ ಶಾಲೆ , ಕಾಲೇಜು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮ್ಮೇಳನದ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿಚಾರವಾಗಿ ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ , ಉಪಾಧ್ಯಕ್ಷರಾದ ಪ್ರಶಾಂತ್ ಕಾರಂತ್ , ಧರಣೇಂದ್ರ ಕುಮಾರ್ , ಶಿವಾನಂದ ಕರ್ಕೇರಾ , ಶಭೋದಯ ಆಳ್ವಾ , ಡಾ. ವಾಸುದೇವ ಬೆಳ್ಳೆ ಸಭೆಗೆ ಮಾಹಿತಿ ನೀಡಿದರು.
ಸಮ್ಮೇಳನದ ಅಂಗವಾಗಿ ದಕ್ಷಿಣ ಕನ್ನಡ , ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ತುಳು ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಸುಮಾರು 14 ವಿವಿಧ ರೀತಿಯ ಸ್ಪರ್ಧೆಗಳನ್ನು ವಿವಿಧ ಕೇಂದ್ರಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು. ಸ್ಪರ್ಧೆಯನ್ನು ಆಯೋಜಿಸಲು ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.
ಸಮ್ಮೇಳನದ ವಿವಿಧ ಸ್ಪರ್ಧೆಗಳ ಸ್ವರೂಪದ ಬಗ್ಗೆ ನಡೆದ ಚರ್ಚೆಯಲ್ಲಿ ಡಾ.ಮೀನಾಕ್ಷಿ ರಾಮಚಂದ್ರ , ಪಲ್ಲವಿ ಕಾರಂತ್ , ಶ್ರೀಲತಾ ಉಳ್ಳಾಲ್ , ಜಿನೇಶ್ ಪ್ರಸಾದ್ , ವಸಂತ ಕೇದಿಗೆ , ಜಯಲಕ್ಷ್ಮೀ ಶೆಟ್ಟಿ , ಗೋಪಾಲ್ ಅಂಚನ್ , ಕೃಷ್ಣಮೂರ್ತಿ ಪಿ , ಚೇತನ್ ಮುಂಡಾಜೆ , ಚಂದ್ರಹಾಸ ಕಣಂತೂರು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಅಮಿತಾ ಆಳ್ವಾ , ಮಣಿ ಎಂ ರೈ , ದಿವಾಕರ್ ಪದ್ಮುಂಜ , ಇಸ್ಮಾಯಿಲ್ ಪೆರಿಂಜೆ , ಪ್ರಶಾಂತ್ ಹೊಸಂಗಡಿ , ಸುದರ್ಶನ್ ಪಿಲಿಂಬು , ಹರೀಶ್ ಅಮೈ ಭಾಗವಹಿಸಿದ್ದರು.