ವಿದ್ಯಾರ್ಥಿಗಳು ಪಾಲಿಸುತ್ತಿರುವ ಸ್ವಚ್ಚತೆಯನ್ನು ನಿರಂತರವಾಗಿ ಮುಂದುವರೆಸಿ: ರೋಹಿಣಿ
ಉಳ್ಳಾಲ: ನಮ್ಮ ಸ್ವಂತ ಯಶಸ್ಸಿನಿಂದ ನಾವು ಇನ್ನೊಬ್ಬರಿಗೆ ಸ್ಪೂತೀಯಾಗಬೇಕು, ಇದರಿಂದ ಸಮಾಜ ಸುಂದರವಾಗಿರುತ್ತದೆ, ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸ್ವಚ್ಚತೆಯ ಬಗ್ಗೆ ಬಹಳಷ್ಟು ತಿಳಿದು ಕೊಂಡಿದ್ದಾರೆ ನೀವು ಪಾಲಿಸುತ್ತಿರುವ ಸ್ವಚ್ಚತೆಯನ್ನು ನಿರಂತರವಾಗಿ ಮುಂದುವರೆಸಿ ಎಂದು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಹೇಳಿದರು.
ಅವರು ಹಳೆಕೋಟೆ ಶಾಲೆಯಲ್ಲಿ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹಾ ಮಾತನಾಡಿ, ಪ್ರಸಕ್ತ ತ್ಯಾಜ್ಯ ಸಂಪೂರ್ಣ ನಿವಾರಣೆ ಮತ್ತು ಸ್ವಚ್ಛತೆ ಕಾಪಾಡುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ತ್ಯಾಜ್ಯ ಸಂಗ್ರಹ ಮಾಡಿ ಸ್ವಚ್ಛತೆ ಕಾಪಾಡಿರುವುದನ್ನು ನೋಡಿ ಸಂತಸವಾಗಿದೆ. ಪರಿಸರವನ್ನು ಸುಂದರವಾಗಿಡುವುದರಲ್ಲಿ ವಿದ್ಯಾರ್ಥಿಗಳ ಕಾಳಜಿ ಬಹಳಷ್ಟಿದೆ. ಇದೇ ರೀತಿಯ ಸ್ವಚ್ಛತೆ ಮುಂದುವರಿಯಬೇಕು , ಉಳ್ಳಾಲ ಸ್ಚಚ್ಛವಾಗಿರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ಹಾರೈಸಿದರು.
ಉಳ್ಳಾಲ ನಗರ ಸಭೆ ಪೌರಾಯುಕ್ತೆ ವಾಣಿ ವಿ.ಆಳ್ವ, ಹಳೆಕೋಟೆ ಮಸ್ಜಿದುಲ್ ಕರೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್, ಮೊಹಮ್ಮದ್, ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಲ್ತಾಫ್, ಕೋಶಾಧಿಕಾರಿ ಕರೀಂ, ಸಮಿತಿ ಸದಸ್ಯ ರಹೀಂ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯೋಪದ್ಯಾಯರಾದ ಕೆಎಂಕೆ ಮಂಜನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.