ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು

Spread the love

ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು

ಮಂಗಳೂರು: ಕೋಚಿಂಗ್ ಪಡೆಯಲು ಬಂದಿದ್ದ ವಿದ್ಯಾರ್ಥಿನಿ, ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ (22) ಎಂಬಾಕೆಯನ್ನು ಕೊಲೆಗೈದ ವಿಜಯಪುರ ಜಿಲ್ಲೆಯ ಸಿಂಧಗಿಯ ಸಂದೀಪ್ ರಾಥೋಡ್ (24) ಎಂಬಾತನನ್ನು ಪೊಲೀಸರು ರವಿವಾರ ಮಂಗಳೂರಿಗೆ ಕರೆ ತಂದು ಕೊಲೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ.

ಬಳಿಕ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಂಧಗಿ ಪೊಲೀಸರ ಸಹಕಾರಲ್ಲಿ ಮಂಗಳೂರು ಪೊಲೀಸರು ಆರೋಪಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಆರೋಪಿ ಸಂದೀಪ್ ರಾಠೋಡ್ ಮತ್ತು ಅಂಜನಾ ವಸಿಷ್ಠ ಎಂಬ ಯುವತಿ ಸುಮಾರು ಒಂದು ವರ್ಷದಿಂದ ಫೇಸ್ ಬುಕ್ ಮುಖಾಂತರ ಪರಿಚಿತರಾಗಿದ್ದು, ಆಗಾಗ ಬೇರೆ ಬೇರೆ ಕಡೆಗಳಲ್ಲಿ ಭೇಟಿ ಮಾಡಿ ಒಂದು ದಿನ ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿ ಅಂಜನಾಳಿಗೆ ತಾಳಿ ಕಟ್ಟಿದ್ದು, ಈ ಬಗ್ಗೆ ಯಾರಿಗೂ ತಿಳಿಯದೇ ಇದ್ದು, ನಂತರ ಇಬ್ಬರು ಲಾಡ್ಜ್ ಗಳಲ್ಲಿ ರೂಮ್ ಮಾಡಿ ಉಳಕೊಂಡು ದೈಹಿಕ ಸಂಪರ್ಕ ಹೊಂದಿದ್ದು, ನಂತರ ಅಂಜನಾಳ ಮನೆಯಲ್ಲಿ ಅವರ ಮನೆಯವರು ಅಂಜನಾಳಿಗೆ ಮದುವೆ ಮಾಡಲು ಹುಡುಗನನ್ನು ನಿಶ್ಚಯಿಸಿದ್ದು, ಅದಕ್ಕೆ ಅಂಜನಾಳು ಕೂಡಾ ಒಪ್ಪಿಕೊಂಡಿರುತ್ತಾಳೆ. ಈ ವಿಚಾರವನ್ನು ಅಂಜನಾಳು ಸಂದೀಪ್ ರಾಠೋಡ್ ನಿಗೆ ಹೇಳಿದಾಗ, ಸಂದೀಪ್ ರಾಠೋಡ್ ನು ಅಂಜನಾಳಿಗೆ ಮಂಗಳೂರಿನ ರೂಮಿಗೆ ಬರುವಂತೆ ತಿಳಿಸಿರುತ್ತಾನೆ. ಜೂನ್ 6ರಂದು ಅಂಜನಾಳು ಬೆಳಿಗ್ಗೆ ರೂಮಿಗೆ ಬಂದಿದ್ದು, ಆ ಸಮಯ ಸಂದೀಪ್ ರಾಠೋಡ್ ಹಾಗೂ ಅಂಜನಾಳ ಮಧ್ಯೆ ಜಗಳವಾಗಿ ಅಂಜನಾಳು ಸಂದೀಪ್ ರಾಠೋಡ್ ನನ್ನು ನಿರಾಕರಿಸಿದ್ದು, ಅದೇ ಧ್ವೇಷದಿಂದ ಆರೋಪಿ ಸಂದೀಪ್ ರಾಠೋಡ್ ನು ಬಾಡಿಗೆ ರೂಮಿನೊಳಗಡೆ ಗೆ ಅಂಜನಾಳನ್ನು ಎಳೆದು ರೂಮಿನಲ್ಲಿದ್ದ ಮಂಚದ ಮೇಲೆ ದೂಡಿ ಹಾಕಿ ಅಂಜನಾಳ ಕುತ್ತಿಗೆಯನ್ನು ಮಂಚದ ತಲೆಯ ಭಾಗದ ಕಬ್ಬಿಣದ ಸರಳಿನ ಎಡೆಗೆ ಸಿಲುಕಿಸಿ, ಅಲ್ಲಿಯೇ ಪಕ್ಕದಲ್ಲಿ ಗೋಡೆಗೆ ಅಳವಡಿಸಿದ್ದ ಟಿ.ವಿ ಕೇಬಲ್ ನ್ನು ಅಂಜನಾಳ ಕುತ್ತಿಗೆಗೆ ಸುತ್ತಿ ಗಟ್ಟಿಯಾಗಿ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐಪಿಎಸ್, ಉಪ ಪೊಲೀಸ್ ಆಯುಕ್ತರು (ಕಾ&ಸು) ರವರಾದ ಹನುಮಂತರಾಯ ಐ.ಪಿ.ಎಸ್ , ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರಾದ ಲಕ್ಷ್ಮಿ ಗಣೇಶ್, ಕೆ.ಎಸ್.ಪಿ.ಎಸ್, ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸುಧೀರ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್ ಕುಮಾರ್ ಆರಾಧ್ಯ ಆದೇಶದಂತೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಜೇಂದ್ರ ಬಿ, ಹಾಗೂ ದಕ್ಷಿಣ ಠಾಣೆಯ ಸಿಬ್ಬಂಧಿಗಳಾದ ಭೀಮಪ್ಪ, ಹರೀಶ್, ಅಂಜನಪ್ಪ ರವರು ಆರೋಪಿ ಪತ್ತೆಗೆ ಹಾಗೂ ತನಿಖೆಗೆ ಸಹಕರಿಸಿರುತ್ತಾರೆ.


Spread the love