ವಿಧಾನ ಪರಿಷತ್ ಶಾಸಕರ ಕಚೇರಿಯಲ್ಲಿ ಸಂವಿಧಾನ ಪೀಠಿಕೆ, ಅಂಬೇಡ್ಕರ್ ಭಾವಚಿತ್ರ ಅನಾವರಣ
ಮಂಗಳೂರು: ಸಂವಿಧಾನವು ನಮ್ಮ ಜೀವನಾಡಿಯಾಗಿದೆ. ಸಂವಿಧಾನವೇ ಎಲ್ಲಾ ಜಾತಿ ಧರ್ಮಗಳಿಗಿಂತ ಮಿಗಿಲಾದ ಗ್ರಂಥವಾಗಿದೆ. ಅದನ್ನು ಪಾಲನೆ ಮಾಡುವುದು ಪ್ರತಿಯೋಬ್ಬ ನಾಗರಿಕ ಪ್ರಜೆಯ ಕರ್ತವ್ಯವಾಗಿದೆ ಎಂದು ರಾಜ್ಯ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಅಳವಡಿಸಿದ ಸಂವಿಧಾನ ಪೀಠಿಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಸಂವಿಧಾನಕ್ಕೆ ಗೌರವ ಮತ್ತು ಸಂವಿಧಾನದ ಬಗ್ಗೆ ತಿಳಿಯುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯು ತಿಳಿಯವಂತಹ ಮುಖ್ಯ ಕರ್ತವ್ಯವಾಗಿದೆ. ನಾವು ತಿಳಿದಂತಹ ವಿಷಯವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿರುವುದು ಕೂಡ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು
ಶಾಸಕರಾದ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್‌ಗಳಾದ ಭಾಸ್ಕರ ಕೆ., ಶಶಿಧರ್ ಹೆಗ್ಡೆ, ಸತೀಶ್ ಪೆಂಗಲ್, ಚೇತನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ವಿಕಾಸ್ ಶೆಟ್ಟಿ, ಆಲ್ಬೈನ್ ಡಿಕುನ್ಹ, ಸಿರಾಜ್ ಬಜ್ಪೆ, ಎನ್.ಪಿ. ಮನುರಾಜ್, ಇಮ್ರಾನ್ ಕುದ್ರೋಳಿ, ಅಡ್ವಕೇಟ್ ಜನಾರ್ದನ್, ಅಬ್ದುಲ್ ರಹಿಮಾನ್ ಪಡ್ಪು, ವಸಂತ್ ಶೆಟ್ಟಿ ವೀರನಗರ, ಜೇಮ್ಸ್ ಪ್ರವೀಣ್, ಶಾಂತಲಾ ಗಟ್ಟಿ, ಮೀನಾ ಟೆಲ್ಲಿಸ್, ಐಒರಾ ಟೆಲ್ಲಿಸ್ ಉಪಸ್ಥಿತರಿದ್ದರು.