ವಿಮಲಾ ವಿ. ಪೈ ಜೀವನ ಸಿದ್ಧಿ ಪ್ರಶಸ್ತಿ ವಿಜೇತ ಡಾ. ತಾನಾಜಿ ಹಳರಣಕರ, ಗೋವಾ ನಿಧನ

Spread the love

ವಿಮಲಾ ವಿ. ಪೈ ಜೀವನ ಸಿದ್ಧಿ ಪ್ರಶಸ್ತಿ ವಿಜೇತ ಡಾ. ತಾನಾಜಿ ಹಳರಣಕರ, ಗೋವಾ ನಿಧನ

ಗೋವಾದ ಖ್ಯಾತ ವಿದ್ಯಾ ತಜ್ಞ ಮತ್ತು ಕೊಂಕಣಿ ಚಳವಳಿಯ ನೇತಾರ ಹಾಗೂ 2017 ಇಸವಿ ಪ್ರತಿಷ್ಠಿತ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನಸಿದ್ಧಿ ಪ್ರಶಸ್ತಿ ವಿಜೇತ ಡಾ. ತಾನಾಜಿ ಹಳರಣಕರ ಇವರು ಆಲ್ಟೊ, ಪಣಜಿ ಗೋವಾದ ತಮ್ಮ ನಿವಾಸದಲ್ಲಿ ದಿ. 19-10-2020 ರಂದು ನಿಧನರಾದರು. ಇವರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿರುವರು.

ಇವರು 1994-1995 ರಲ್ಲಿ ಮಂಗಳೂರಲ್ಲಿ ಜರುಗಿದ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನ ಸಂಘಟಿಸುವಲ್ಲಿ ಗೋವಾದಲ್ಲಿ ಸಹಾಯ ಹಸ್ತವನ್ನು ನೀಡಿದ್ದರು. ಹಾಗೂ 2002 ರಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಜರುಗಿದ ಅಖಿಲ ಭಾರತ ಕೊಂಕಣಿ ಅಧಿವೇಶನ ಅಧ್ಯಕ್ಷರಾಗಿದ್ದರು. ಅಲ್ಲದೆ ಅಪಾರ ಸಾಹಿತ್ಯ ರಚನೆ ಮಾಡಿರುವ ಇವರು ವಿಶ್ವ ಕೊಂಕಣಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಕಾಡೆಮಿ ವತಿಯಿಂದ ಪ್ರಕಟಿಸಲ್ಪಟ್ಟ “ವಿಶ್ವ ಕೊಂಕಣಿ ಪರಿಚಯ ಕೋ±”À ಭಾಗ -1 ಮತ್ತು ಭಾಗ 2 ಪುಸ್ತಕದ ಸಂಪಾದಕರೂ ಆಗಿದ್ದಾರೆ. ಇವರ ಅಗಲಿಕೆ ಕೊಂಕಣಿ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಅಗಲಿದ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ಪ್ರಾರ್ಥಿಸಿ ಕೊಂಕಣಿ ಭಾಸÀ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ, ಚೆಯರ್‍ಮೆನ ಡಾ. ಪಿ. ದಯಾನಂದ ಪೈ ಉಪಾಧ್ಯಕ್ಷರುಗಳಾದ ಶ್ರೀ ಕುಡ್ಪಿ ಜಗದೀಶ ಶೆಣೈ, ಶ್ರೀ ಗಿಲ್ಬರ್ಟ್ ಡಿಸೋಜಾ ಮತ್ತು ಶ್ರೀ ವೆಂಕಟೇಶ ಎನ್. ಬಾಳಿಗಾ, ಕೋಶಾಧಿಕಾರಿ ಶ್ರೀ ಬಿ. ಆರ್. ಭಟ್, ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಕಾರ್ಯದರ್ಶಿ ಶ್ರೀ ಪ್ರದೀಪ ಜಿ. ಪೈ, ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಸಿ.ಎ. ಶ್ರೀ ನಂದಗೋಪಾಲ ಶೆಣೈ, ಶ್ರೀ ಬಿ. ಪ್ರಭಾಕರ ಪ್ರಭು ಹಾಗೂ ಶ್ರೀ ವಿಲಿಯಂ ಡಿಸೋಜಾ, ಶ್ರೀ ಎಂ. ಆರ್. ಕಾಮತ್, ಸಿ.ಎ. ಶ್ರೀ ಗಿರಿಧರ ಕಾಮತ, ಶಾಲೆಯಲ್ಲಿ ಕೊಂಕಣಿ ಶಿಕ್ಷಣದ ಮುಖ್ಯಸ್ಥ ಡಾ. ಕೆ. ಮೋಹನ ಪೈ, ಅಖಿಲ ಭಾರತ ಕೊಂಕಣಿ ಪರಿಷದ್ ಮಾಜಿ ಅಧ್ಯಕ್ಷ ಶ್ರೀ ಕೆ. ಗೋಕುಲದಾಸ ಪ್ರಭು, ಹಾಗೂ ಇತರ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love