ಮಂಗಳೂರು: ಸಿಂಡ್ರೋಮ್’’ಗೆ ಚಿಕಿತ್ಸೆ ನೀಡಿದ ಕೆಎಂಸಿ ಹಾಸ್ಪಿಟಲ್ ಮಂಗಳೂರು, ಆಗಸ್ಟ್ 10, 2015: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‍ಪ್ರೈಸಸ್‍ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ಈಗ ಮತ್ತೊಂದು ವೈದ್ಯಕೀಯ ಮೈಲುಗಲ್ಲು ಸ್ಥಾಪಿಸಿದ್ದು, ದಿಢೀರ್ ಸಾವು ತಂದೊಡ್ಡುವಂಥ ಆ್ಯಂಡರ್‍ಸನ್ ಟಾವಿಲ್ ಸಿಂಡ್ರೋಮ್ ಎಂಬ ಅತ್ಯಂತ ವಿರಳವಾದ ಸ್ಥಿತಿಯಿಂದ ಬಳಲಿದ ಕುಟುಂಬಕ್ಕೆ ಚಿಕಿತ್ಸೆ ನೀಡಿದೆ.
ಕೆಎಂಸಿ ಆಸ್ಪತ್ರೆಯ ಅತ್ಯಂತ ಉನ್ನತ ಕಾರ್ಯಕ್ರಮತೆಯ ವೈದ್ಯರ ತಂಡ ಒಟ್ಟಾಗಿ ಈ ಅಪರೂಪದ ವಂಶವಾಹಿ ಸಂಬಂಧಿ ತೊಂದರೆಗೆ ಚಿಕಿತ್ಸೆ ನೀಡಿದ್ದು ಬಹುಶಃ ಇದು ಭಾರತದಲ್ಲಿ ವಂಶವಾಹಿ ಸಂಬಂಧದಲ್ಲಿ ನಿರೂಪಿತವಾದಂತಹ ಮೊಟ್ಟಮೊದಲ ಪ್ರಕರಣವಾಗಿರಬಹುದು. ಅನಿತಾ (27 ವರ್ಷ)ರನ್ನು ಕೆಎಂಸಿ ಆಸ್ಪತ್ರೆಯ ಕಾರ್ಡಿಯಾಕ್ ಎಲೆಕ್ಟ್ರೋ-ಫಿಜಿಯಾಲಾಜಿಸ್ಟ್ ಡಾ|| ಮನೀಶ್ ರೈ ಅವರು ರಕ್ತದೊತ್ತಡದ ಕುಸಿತದಿಂದ ಉಂಟಾಗುವ ತಾತ್ಕಾಲಿಕ ಪ್ರಜಾಞಶೂನ್ಯತೆ(ಸಿಂಕೋಪ್)ಗಾಗಿ ಪರೀಕ್ಷಿಸಿದರು.
ಆಕೆಯ ಕುಟುಂಬದಲ್ಲಿ ದಿಢೀರ್ ಸಾವಿನ ಇತಿಹಾಸವಿತ್ತು. ಆಕೆಯ ತಾಯಿ ಮತ್ತು ತಮ್ಮ ಎಳೆಯ ವಯಸ್ಸಿನಲ್ಲಿಯೇ ದಿಢೀರಾಗಿ ಸಾವನ್ನಪ್ಪಿದ್ದರು. ಹೃದಯ ಮಿಡಿತದ ತಪ್ಪಿದ ತಾಳದಿಂದ ಉಂಟಾಗುವ ಜನ್ಮಜಾತ ತೊಂದರೆ ಕುಟುಂಬದಲ್ಲಿ ಇಂಥ ದಿಢೀರ್ ಸಾವುಗಳು ಉಂಟಾಗುತ್ತವೆಂದು ಈ ಇತಿಹಾಸ ಸೂಚಿಸಿತ್ತು. ಆ್ಯಂಡರ್‍ಸನ್ ಟಾವಿಲ್ ಸಿಂಡ್ರೋಮ್ ಎಂಬ ವಿರಳವಾದ ವಂಶವಾಹಿ ಸಂಬಂಧಿ ತೊಂದರೆಯ ಲಕ್ಷಣಗಳನ್ನು ಆಕೆಯ ಇಸಿಜಿ ಫಲಿತಾಂಶಗಳು ಹೋಲುತ್ತಿದ್ದವು. ಮಣಿಪಾಲ್‍ನ ಮೆಡಿಕಲ್ ಜೆನಿಟಿಕ್ಸ್ ವಿಭಾಗದ ಡಾ|| ಗಿರೀಶ್ ಕಟ್ಟಾ ಅವರು ನಡೆಸಿದ ವಂಶವಾಹಿ ವಿಶ್ಲೇಷಣೆಯಲ್ಲಿ ಈ ತೊಂದರೆ ದೃಢಪಟ್ಟಿತ್ತು. ಈ ತೊಂದರೆ ಉಂಟು ಮಾಡುವ ವರ್ಣತಂತುವಿನಲ್ಲಿ ರೂಪಾಂತರ ಕಂಡುಬಂದಿರುವುದು ತಿಳಿದುಬಂದಿತ್ತು. ಈ ವಂಶವಾಹಿ ಸಂಬಂಧಿ ಸ್ಥಿತಿ ಅತ್ಯಂತ ವಿರಳವಾಗಿದ್ದು ವಿಶ್ವವ್ಯಾಪಿಯಾಗಿ ನೂರಕ್ಕೂ ಕಡಿಮೆ ಕುಟುಂಬಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ವಂಶವಾಹಿಗಳಲ್ಲಿ ನಿರೂಪಿತವಾದ ಮೊಟ್ಟಮೊದಲ ಆಯಂಡರ್‍ಸನ್ ಟಾವಿಲ್ ಪ್ರಕರಣ ಇದಾಗಿರಬಹುದು.
ರೋಗಿಗೆ ಟೊರಾಕೊಸ್ಕೋಪಿಕ್ ಲೆಫ್ಟ್ ಕಾರ್ಡಿಯಾಕ್ ಸಿಂಪಥೆಟಿಕ್ ಡಿನರ್ವೇಷನ್ ಎಂಬ ಅಪರೂಪದ ಶಸ್ತ್ರಕ್ರಿಯಾ ಕ್ರಮವನ್ನು ನಡೆಸಲಾಗಿದ್ದು ಆಕೆಯ ಹೃದಯದ ತಾಳವನ್ನು ನಿಯಂತ್ರಣಕ್ಕೆ ತರಲು ಯತ್ನಿಸಲಾಗಿತ್ತು. ಈ ಕ್ರಮದಲ್ಲಿ ಹೃದಯಕ್ಕೆ ರಕ್ತ ಪೂರೈಸುವ ನಾಳಗಳನ್ನು ಕತ್ತರಿಸಲಾಗುತ್ತದೆ. ಇದನ್ನು ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕೆಎಂಸಿ, ಮಂಗಳೂರಿನ ಶಸ್ತ್ರಕ್ರಿಯಾ ವಿಭಾಗದ ಪ್ರೊಫೆಸರ್ ಡಾ|| ಆಲ್ಫ್ರೆಡ್ ಅಗಸ್ಟೀನ್ ಅವರು ನಡೆಸಿದ್ದು ಅವರಿಗೆ ಅನುಭವಿ ಅರಿವಳಿಕೆ ತಜ್ಞರಾದ ಡಾ|| ಮಧುಸೂದನ್ ಮತ್ತು ಡಾ|| ರಾಮಮೂರ್ತಿ ಬೆಂಬಲ ನೀಡಿದರು.
ಈ ಕ್ರಮದಿಂದ ಆಕೆಯ ಹೃದಯ ಮಿಡಿತದ ತಾಳ ನಿಯಂತ್ರಣಕ್ಕೆ ಬಂದರೂ ಆಕೆಗೆ ಜೀವ ಬೆದರಿಕೆಯ ಅರ್ರಿದಮಿಯಾಸ್ ತೊಂದರೆ ಕಾಣಿಸಿಕೊಳ್ಳುವ ಅಲ್ಪ ಪ್ರಮಾಣದ ಸಾಧ್ಯತೆ ಇತ್ತು.
ಆಕೆಗೆ ಡಿಫೈಬ್ರಿಲೇಟರ್ ಎಂಬ ಪುಟ್ಟ ದುಂಡಗಿನ ಉಪಕರಣವನ್ನು ಎದೆಯ ಭಾಗದ ತ್ವಚೆಯ ಕೆಳಗೆ ಅಳವಡಿಸಲಾಗುವುದು. ಅರ್ರಿದಮಿಯಾ ಪ್ರಕರಣದ ಸಂದರ್ಭದಲ್ಲಿ ಈ ಡಿಫೈಬ್ರಿಲೇಟರ್ ಶಾಕ್ ನೀಡಿ ಅವರ ಜೀವವನ್ನು ಉಳಿಸುತ್ತದೆ. ದುರದೃಷ್ಟವಾಶಾತ್ ಆಕೆಯ ಆರು ಒಡಹುಟ್ಟಿದವರ ಪೈಕಿ ನಾಲ್ವರಿಗೆ ಇದೇ ಸ್ಥಿತಿ ಕಾಡುತ್ತಿದೆ. ಪ್ರಸ್ತುತ ಅವರೆಲ್ಲರೂ ವೈದ್ಯಕೀಯ ತಪಾಸಣೆಯಲ್ಲಿದ್ದರೂ ಮುಂಬರುವ ದಿನಗಳಲ್ಲಿ ಇದೇ ರೀತಿಯ ಕ್ರಮಗಳನ್ನು ಅವರಿಗೆ ಕೈಗೊಳ್ಳಬೇಕಾಗಬಹುದು.
`ಚಿಕಿತ್ಸೆ ಹೆಚ್ಚು ವೆಚ್ಚದ್ದಾಗಿದ್ದರೂ ಅದು ಏಕೈಕ ಭರವಸೆ ಆಗಿದೆ. ಸೂಕ್ತ ಚಿಕಿತ್ಸೆಯೊಂದಿಗೆ ಬಹುತೇಕ ಸಾಮಾನ್ಯ ಜೀವನಾವಧಿಯ ಅವಕಾಶವನ್ನು ನಾವು ನೀಡಬಹುದಾಗಿದೆ. ಈಗ ತೊಂದರೆಯ ಮಾದರಿಯ ಬಗ್ಗೆ ತಿ ದಿನ ದುರಂತಗಳನ್ನು ತಪ್ಪಿಸಬಹುದಾಗಿದೆ ಎಳಿದಿದ್ದು ಕುಟುಂಬ ಸದಸ್ಯರಿಗೆ ಶೀಘ್ರ ಪತ್ತೆ ಮಾಡಿ ಕುಟುಂಬದಲ್ಲಿ ಮುಂ ಂದು ಕೆಎಂಸಿ ಆಸ್ಪತ್ರೆಯ ಕಾರ್ಡಿಯಾ ಎಲೆಕ್ಟೊ ಫಿಜಿಯಾಲಾಜಿಸ್ಟ್ ಡಾ|| ಮನೀಶ್ ರೈ ಅವರು ಹೇಳಿದರು.
ತಾತ್ಕಾಲಿಕ ಪ್ರಜ್ಞಾ ಶೂನ್ಯತೆಗಳು ಅಷ್ಟೇನೂ ಹಾನಿಕಾರಕವಲ್ಲ. ಇವುಗಳ ಸೂಕ್ತ ಮೌಲ್ಯೀಕರಣ ಅಗತ್ಯ ಎಂಬುದನ್ನು ಈ ಪ್ರಕರಣ ಎತ್ತಿ ತೋರುತ್ತದೆ ಎಂದು ಡಾ|| ಪದ್ಮನಾಭ ಕಾಮತ್ ಹೇಳಿದರು.
ಕೆಎಂಸಿ ಆಸ್ಪತ್ರೆಯು ಇಂದು ವಿಶ್ವಮಟ್ಟದ ಚಿಕಿತ್ಸೆ ಪಡೆಯಲು ಯೋಗ್ಯವಾದ ಸ್ಥಳವಾಗಿದ್ದು ನಮ್ಮಲಿ ಕೇವಲ ಇತ್ತೀಚಿನ ಉಪಕರಣಗಳು ಮಾತ್ರವಲ್ಲದೆ ನಮ್ಮ ವೈದ್ಯರು ಇಂತಹ ತೀವ್ರ ರೀತಿಯ ಉಪಕರಣಗಳನ್ನು ತಯಾರಿಸಲು ಸಜ್ಜಾಗಿದ್ದು ಇದರೊಂದಿಗೆ ದೇಶದಲ್ಲಿ ನಾವು ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿದ್ದೇವೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಆನಂದ ವೇಣುಗೋಪಾಲ ಅವರು ಹೇಳಿದರು.
ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಕುರಿತು :
ಎಂಎಚ್‍ಇಪಿಎಲ್ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಂಗವಾಗಿದೆ. ಮುಂಚೂಣಿಯ ಆಸ್ಪತ್ರೆ ಜಾಲವನ್ನು ಮಣಿಪಾಲ್ ಹಾಸ್ಪಿಟಲ್ಸ್ ಹೆಸರಲ್ಲಿ ನಡೆಸುತ್ತಿದೆ. ಎಂಎಚ್‍ಇಯು ಭಾರತದ 6 ರಾಜ್ಯಗಳ 13 ಸ್ಥಳಗಳಲ್ಲಿ ಹಾಗೂ ಮಲೇಷಿಯಾದ ಕ್ಲಾಂಗ್‍ನಲ್ಲಿನ ಒಂದು ಆಸ್ಪತ್ರೆಯೂ ಸೇರಿದಂತೆ ಒಟ್ಟ 16 ಆಸ್ಪತ್ರೆಗಳಲ್ಲಿ ಸುಮಾರು 5200ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಪ್ರಾಥಮಿಕ ಹಂತದಿಂದ ನಾಲ್ಕನೇ ಉನ್ನತ ಹಂತದ ಆರೈಕೆವರೆಗಿನ ಎಲ್ಲಾ ಚಿಕಿತ್ಸೆಗಳನ್ನು ಈ ಆಸ್ಪತ್ರೆಗಳ ಜಾಲ ಪೂರೈಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಸಂಸ್ಥೆ 2000ಕ್ಕೂ ಹೆಚ್ಚಿನ ವೈದ್ಯರು ಮತ್ತು 6000ಕ್ಕೂ ಹೆಚ್ಚಿನ ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ತಂಡವನ್ನು ಅಭಿವೃದ್ಧಿಪಡಿಸಿದ್ದು ಇವರು ಬದ್ಧತೆವುಳ್ಳವರಾಗಿದ್ದು ವೈದ್ಯಕೀಯ ಉತ್ಕøಷ್ಟತೆ ಹಾಗೂ ರೋಗಿ ಕೇಂದ್ರೀಕೃತ ನೀತಿಯುತ ಅಭ್ಯಾಸಗಳ ಮೌಲ್ಯಗಳಿಗೆ ಬದ್ಧತೆ ಹೊಂದಿದ್ದಾರೆ. ಇದರೊಂದಿಗೆ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೋಗ್ಯ ಶುಶ್ರೂಷೆಯನ್ನು ಪೂರೈಸುತ್ತಿದ್ದಾರೆ.
ಮಣಿಪಾಲ್ ಹಾಸ್ಪಿಟಲ್ಸ್ ಕುರಿತು :
ಆರೋಗ್ಯ ಶುಶ್ರೂಷೆ ಕ್ಷೇತ್ರದಲ್ಲಿ ಆದ್ಯಪ್ರವರ್ತಕರಾದ ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲ್ಲಿ ಅತ್ಯಂತ ದೊಡ್ಡದಾದ ಆಸ್ಪತ್ರೆಗಳ ಜಾಲವಾಗಿದ್ದು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕೈಗೆಟಕುವ ರೀತಿಯಲ್ಲಿ ಮೂರನೇ ಉನ್ನತ ಹಂತದ ಬಹುವಿಶೇಷತೆಯ ಆರೋಗ್ಯ ಶುಶ್ರೂಷೆ ಚೌಕಟ್ಟನ್ನು ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಉದ್ದೇಶವಾಗಿದ್ದು ತನ್ನ ಎಲ್ಲಾ ಬಹುವಿಶೇಷತೆಯ ಪೂರೈಕೆ ಶ್ರೇಣಿಯ ಮೂಲಕ ಈ ಕ್ರಮವನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಜೊತೆಗೆ ಈ ಸೇವೆಯನ್ನು ಗೃಹ ಆರೈಕೆಗೆ ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಪ್ರಮುಖ ನಾಲ್ಕನೇ ಉನ್ನತ ಹಂತದ ಆರೈಕೆಯ ಸೌಲಭ್ಯವನ್ನು ಸಂಸ್ಥೆ ಹೊಂದಿದ್ದು 8 ಮೂರನೇ ಉನ್ನತ ಹಂತದ ಆರೈಕೆಯ, 7 ಎರಡನೇ ಹಂತದ ಆರೈಕೆಯ ಮತ್ತು 2 ಪ್ರಾಥಮಿಕ ಹಂತದ ಆರೈಕೆಯ ಕ್ಲಿನಿಕ್‍ಗಳನ್ನು ಭಾರತ ಮತ್ತು ವಿದೇಶದಾದ್ಯಂತ ಸಂಸ್ಥೆ ಹೊಂದಿದ್ದು ಮಣಿಪಾಲ್ ಹಾಸ್ಪಿಟಲ್ಸ್ ಯಶಸ್ವಿಯಾಗಿ 5,200ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ.
ಮಣಿಪಾಲ್ ಹಾಸ್ಪಿಟಲ್ಸ್ ಸಮಗ್ರ ಗುಣಪಡಿಸುವ ಮತ್ತು ರೋಗವನ್ನು ತಡೆಯುವ ಆರೈಕೆಯನ್ನು ವಿಶ್ವದ ಎಲ್ಲೆಡೆಯ ರೋಗಿಗಳಿಗೆ ನೀಡುತ್ತಿದೆ. ವೈದ್ಯಕೀಯ ಸಂಶೋಧನಾ ಚಟುವಟಿಕೆಗಳಲ್ಲಿ ನೀತಿಯ ಮಟ್ಟಕ್ಕಾಗಿ ಎಎಎಚ್‍ಆರ್‍ಪಿಪಿ ಸಂಸ್ಥೆ ಮಾನ್ಯತೆಯನ್ನು ಮಣಿಪಾಲ್ ಹಾಸ್ಪಿಟಲ್ಸ್‍ಗೆ ನೀಡಿದೆ. ಎನ್‍ಎಬಿಎಲ್, ಎನ್‍ಎಬಿಎಚ್ ಮತ್ತು ಐಎಸ್‍ಒ ಮಾನ್ಯತೆಗಳನ್ನೂ ಈ ಸಂಸ್ಥೆ ಪಡೆದಿರುತ್ತದೆ. ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಆಸ್ಪತ್ರೆ ಕಂಪನಿಯಾಗಿದ್ದು ಗ್ರಾಹಕ ಸಮೀಕ್ಷೆಯ ಪ್ರಕಾರ ಅತ್ಯಂತ ಹೆಚ್ಚು ರೋಗಿಗಳನ್ನು ಶಿಫಾರಸ್ಸು ಮಾಡಲಾಗುವ ಆಸ್ಪತ್ರೆಯಾಗಿದೆ