ವಿಶೇಷ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮಸಿದ ಬಿಜೆಪಿ ನಗರ ಯುವಮೋರ್ಚಾ

Spread the love

ವಿಶೇಷ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ ಸಂಭ್ರಮಸಿದ ಬಿಜೆಪಿ ನಗರ ಯುವಮೋರ್ಚಾ 

ಉಡುಪಿ: ಭಾರತೀಯ ಜನತಾ ಪಾರ್ಟಿ ಮತ್ತು ಉಡುಪಿ ನಗರ ಯುವ ಮೋರ್ಚಾ ಜಂಟಿ ಆಶ್ರಯದಲ್ಲಿ  ಸ್ವಾತಂತ್ರ್ಯೋವದ ಅಂಗವಾಗಿ  ಮಂಗಳವಾರ ಕಾತ್ಯಾಯಿನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ನಮನ 2017’ ಸಾಂಸ್ಕೃತಿಕ ಸೌರಭ ಹಾಗೂ ವಿಶೇಷ ಮಕ್ಕಳೊಂದಿಗೆ ಸಾಮೂಹಿಕ ಸಹ ಭೋಜನ ಕಾರ್ಯಕ್ರಮ ಜರುಗಿತು.

 ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಗಾಂಧಿಜೀ ಯವರು ಅಹಿಂಸೆಯ  ಚಳುವಳಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದಿದ್ದಾರೆ. ಅಂತಯೇ ಪ್ರಧಾನಿ ಮೋದಿಯವರು ಮುಂದಿನ ಕನಸಿನ ಭಾರತ ಪರಿಕಲ್ಪನೆಯನ್ನು  ಸಹಕಾರಗೊಳ್ಳಿಸಲ್ಲು ನಾವೆಲ್ಲ ಪ್ರಯತ್ನಿಸ ಬೇಕಾಗಿದೆ.ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ರಾಜ್ಯದಲ್ಲಿ  ಪಕ್ಷವನ್ನು ದೃಢ ಪಡಿಸಲು ಬೂತ್ ಮಟ್ಟದಿಂದ ಪ್ರತಿಯೊಬ್ಬ  ಸದಸ್ಯರು ಕೆಲಸ ಮಾಡಬೇಕಾಗಿದೆ ಕಟ್ಟು ನಿಟ್ಟಿನ ಆದೇಶವನ್ನು ನೀಡಿದ್ದಾರೆ ಎಂದರು.

ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ ‘ಚೀನಾ ಹಾಗೂ ಪಾಕಿಸ್ತಾನ ಭಾರತದ ಶತ್ರು ರಾಷ್ಟ್ರವಾಗಿದೆ’.  ಈ ಎರಡು ಶತ್ರು ರಾಷ್ಟ್ರಗಳು ಇಂದು ಭಾರತವನ್ನು ಅತಿಕ್ರಮವಾಗಿ  ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಷಡ್ಯಂತರ ರಚಿಸುತ್ತಿರುವ ಚೀನ ದೇಶಕ್ಕೆ ತಕ್ಕ ಪಾಠ ಕಲಿಸ ಬೇಕಾಗಿದೆ.  ಭಾರತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಚೀನಿಯರ ವಸ್ತುಗಳನ್ನು ನಾವೆಲ್ಲ ಬಹಿಷ್ಕರಿಸುವ ಮೂಲಕ ಶತ್ರು ರಾಷ್ಟ್ರಗಳಿಗೆ ಬಿಸಿ ಮುಟ್ಟಿಸ ಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಗರ ಯುವ ಮೋರ್ಚಾ ಸದಸ್ಯರು ಹಾಗೂ ಇತರ ಬಿಜೆಪಿ ಪದಾಧಿಕಾರಿಗಳು ವಿಶೇಷ ಮಕ್ಕಳ ಜೊತೆ ಸಾಮೂಹಿಕ ಸಹಭೋಜನ ಮಾಡಿದರು.

ಬಿಜೆಪಿ ನಗರ ಯುವ ಮೋರ್ಚ ಅಧ್ಯಕ್ಷ ಅಕ್ಷಿತ್ ಶೆಟ್ಟಿ  ಹೆರ್ಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ಉಪಾಧ್ಯಕ್ಷೆ ಕೆ.ಶೀಲ ಶೆಟ್ಟಿ,  ಯಶ್ಪಾಲ್ ಸುವರ್ಣ,  ರಂಜಿತ್ ಸಾಲಿಯನ್,ಯುವ ಮೋರ್ಚಾಧ್ಯಕ್ಷ ಶ್ರೀಶಾ ನಾಯಕ್, ನಗರಾಧ್ಯಕ್ಷ ಪ್ರಕರ್ ಪೂಜಾರಿ, ದಿನಕರ್ ಹೆರ್ಗ, ಉದಯ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.

 


Spread the love