ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರಶಸ್ತಿ ಪದಾನ ಸಮಾರಂಭ

Spread the love

ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರಶಸ್ತಿ ಪದಾನ ಸಮಾರಂಭ

ಈ ಬಾರಿಯ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ 2025 – ಫೆಬ್ರವರಿ ದಿನಾಂಕ 8 ಶನಿವಾರ ಸಂಜೆ 4 ಘಂಟೆಗೆ ಸರಿಯಾಗಿ ನಗರದ ಟಿವಿ ರಮಣ ಪೈ ಸಭಾಂಗಣ, ಕೊಡಿಯಾಲ್-ಬೈಲ್ ಇಲ್ಲಿ ವಿಜೃಂಭಣೆಯಿಂದ ನಡೆಯಲಿದೆ

ಈ ಅಂತರಾಜ್ಯ ಕೊಂಕಣಿ ನಾಟಕ ಮಹೋತ್ಸವದಲ್ಲಿ ಎರಡು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ. ಈ ಸುಸಂದರ್ಭದಲ್ಲಿ ಪ್ರತಿಷ್ಟಿತ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ” ಪ್ರಶಸ್ತಿ ಪ್ರದಾನವೂ ನಡೆಯಲಿದೆ.

ನೆರೆಯ ಮಹಾರಾಷ್ಟ್ರ ರಾಜ್ಯದ ಶ್ರೀ ಸುಧಾಕರ ಭಟ್ ಇವರ ನೇತೃದ ಪ್ರಸಿದ್ಧ ಕಲಾತಂಡ “ಆಮ್ಮಿ ರಂಗಕರ್ಮಿ, ಮುಂಬೈ” ಇವರು “ಪೋಸ್ಟ್ ಕಾರ್ಡ್” ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಕರ್ನಾಟಕ-ಕೇರಳ ರಾಜ್ಯಗಳನ್ನು ಪ್ರತಿನಿಧಿಸಿ, ಶ್ರೀ ಕಾಸರಗೋಡು ಚಿನ್ನಾ ಇವರ ನೇತೃತ್ವದ “ರಂಗ ಚಿನ್ನಾರಿ, ಕಾಸರಗೋಡು” ಇವರು ಅಭಿನಯಿಸುವ ಜನಪ್ರಿಯ “ಕರ್ಮಾಧೀನ” ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.

ಹಿರಿಯ ರಂಗಕರ್ಮಿ ಶ್ರೀ ಗುಲ್ವಾಡಿ ರಾಮದಾಸ್ ದತ್ತಾತ್ರೇಯ ಭಟ್ ಇವರು, ಈ ಬಾರಿಯ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪ್ರಶಸ್ತಿ” ಸ್ವೀಕರಿಸಲಿದ್ದಾರೆ.

ಹಿರಿಯ ಸಾಹಿತಿ- ಅನುವಾದಕರಾಗಿರುವ ಡಾ ಗೀತಾ ಶೆಣೈ ಇವರು ಈ ವರ್ಷದ “ಡಾ ಪಿ ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ” ಸ್ವೀಕರಿಸಲಿರುವರು.

ಕಲಾಸಕ್ತ ಕೊಂಕಣಿ ಬಾಂಧವರು ಈ ನಾಟಕ ಮಹೋತ್ಸವದಲ್ಲಿ ಭಾಗವಹಿಸಿ ಕೊಂಕಣಿ ರಂಗಕಲೆಯನ್ನು ಪ್ರೊತ್ಸಾಹಿಸ ಬೇಕಾಗಿ ವಿಶ್ವಕೊಂಕಣಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಶ್ವಸ್ಥ ಮಂಡಳಿಯವರು ವಿನಂತಿಸಿ ಕೊಂಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments