ವೀಕ್ಷಕರ ಮನ ಗೆದ್ದ ರಾಸ್ ಅಲ್‌ಖೈಮಾ – ರಾಜ್ಯೋತ್ಸವ ಕಪ್ 2024 ಕ್ರಿಕೆಟ್ ಪಂದ್ಯಾಟ

Spread the love

ವೀಕ್ಷಕರ ಮನ ಗೆದ್ದ ರಾಸ್ ಅಲ್‌ಖೈಮಾ – ರಾಜ್ಯೋತ್ಸವ ಕಪ್ 2024 ಕ್ರಿಕೆಟ್ ಪಂದ್ಯಾಟ

ಅರಬ್ ಸಂಯುಕ್ತ ಸಂಸ್ಥಾನದ ರಾಸ್‌ಅಲ್ ಖೈಮಾ ವಿಭಾಗದಲ್ಲಿ ಕಾರ್ಯೋನ್ಮುಖವಾಗಿರುವ ರಾಸ್‌ಅಲ್‌ಖೈಮಾ ಕರ್ನಾಟಕ ಸಂಘದ ಆಶ್ರಯದಲ್ಲಿ 2024 ಅಕ್ಟೋಬರ್ 13ನೇ ತಾರೀಕಿನಂದು”ರಾಕ್ ರಾಜ್ಯೋತ್ಸವ ಕಪ್ 2024″ ಕ್ರಿಕೆಟ್ ಕಫ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. 7 ತಂಡಗಳು ಭಾಗವಹಿಸಿದ್ದು ಅಂತಿಮ ಫೈನಲ್ಸ್ನಲ್ಲಿ ರಾಕ್ ಬುಲ್ಸ್ ತಂಡ ವಿಜೇತರಾಗಿ ಹೊರಹೊಮ್ಮಿ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತ್ತು.

ಯುನೈಟೆಡ್ ವಾರಿಯರ್ಸ್ ಕುಡ್ಲ ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತ್ತು. ಆಪಾರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಪಲ್ಗೋಡಿದ್ದರು. ಪಂದ್ಯಾವಳಿಯ ಪ್ರಾಯೋಜಕರಾಗಿ ರಾಸ್‌ಅಲ್ ಖೈಮಾ ಮಸಾಲಾ ರೆಸ್ಟೋರೆಂಟ್ ಶ್ರೀ ಶರದ್ ಶೆಟ್ಟಿ, ಶ್ರೀಜುಲಿಯನ್, ಅನಿಕಾ ಮೆಡಿಕಲ್ ಸೆಂಟರ್ ನ ಡಾ ಕವಿತಾ ರಾವ್, ಅಲ್ ಜಬಲ್ ರೇಡಿಯೇಟರ್ಸ್ ಮತ್ತು ಕೂಲಿಂಗ್ ಸಿಸ್ಟಂಸ್ ನ ನವೀನ್‌ಕುಮಾರ್ ಸಂಪೂರ್ಣ ಬೆಂಬಲ ನೀಡಿದ್ದರು.

ರಾಸ್ ಅಲ್‌ಖೈಮಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಹೆಗ್ಡೆ ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಹಲವು ದಿನಗಳ ಪೂರ್ವ ತಯಾರಿಯೊಂದಿಗೆ ನಡೆದ ರಾಕ್ ರಾಜ್ಯೋತ್ಸವ ಕಪ್ 2024 ಯಶಸ್ವಿಯಾಗಿ ನಡೆಯಿತು.


Spread the love
Subscribe
Notify of

0 Comments
Inline Feedbacks
View all comments