ವೀರ ರಾಣಿ ಅಬ್ಬಕ್ಕ ಉತ್ಸವ ಜನಪದ ದಿಬ್ಬಣಕ್ಕೆ ಚಾಲನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಡೊಳ್ಳು ಭಾರಿಸುವುದರ ಮೂಲಕ 2019ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಜನಪದ ದಿಬ್ಬಣಕ್ಕೆ ಇಂದು ಅಪರಾಹ್ನ 4.10 ಗಂಟೆಗೆ ಚಾಲನೆ ನೀಡಿದರು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು.
ಉಸ್ತುವಾರಿ ಸಚಿವರು ಮಾತನಾಡಿ, ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಬಹುದಿನಗಳಿಂದ ಸಿದ್ಧತೆ ನಡೆಸಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹಾರೈಸಿದರು.
ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ ಮತ್ತು ಚೆಂಡೆ, ಕೊಡೆ, ಕೀಲುಕುದುರೆ, ದಫ್, ಕೊರಗರ ಗಜ ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಪೂಜಾ ಕುಣಿತ, ಕಂಗೀಲು, ಯಕ್ಷಗಾನ ವೇóಷಗಳಿಂದ ಮೆರವಣಿಗೆ ಕಳೆಗಟ್ಟಿತು.
ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದಲ್ಲಿ ಆಯೋಜಿಸಲಾದ ಮೆರವಣಿಗೆ ತಂಡ ಭಾರತ್ ಪ್ರೌಢಶಾಲೆ ಉಳ್ಳಾಲದಿಂದ ಆರಂಭಗೊಂಡ ಮೆರವಣಿಗೆ ಉಳ್ಳಾಲ ಬೀಚ್‍ವರೆಗೆ ಸಾಗಿತು.