ವೆಬ್ ಸೈಟ್ ಮೂಲಕ ಹೈಪೈ ವೇಶ್ಯಾವಾಟಿಕೆ: ಇಬ್ಬರ ಬಂಧನ – 3 ಮಹಿಳೆಯರ ರಕ್ಷಣೆ

Spread the love

ವೆಬ್ ಸೈಟ್ ಮೂಲಕ ಹೈಪೈ ವೇಶ್ಯಾವಾಟಿಕೆ: ಇಬ್ಬರ ಬಂಧನ – 3 ಮಹಿಳೆಯರ ರಕ್ಷಣೆ

ಮಂಗಳೂರು: ನಂತೂರು ಜಂಕ್ಷನ್ ಬಳಿ ಇರುವ ಅಪಾರ್ಟ್ ಮೆಂಟ್ ನಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಇಟ್ಟುಕೊಂಡು ಲೊಕ್ಯಾಂಟೋ ವೆಬ್ ಸೈಟ್ ಮೂಲಕ ಹೈಪೈ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಅಪಾರ್ಟ್ ಮೆಂಟ್ ಗೆ ದಾಳಿ ನಡೆಸಿದ ಎಕನಾಮಿಕ್ ಆಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಹಾಗೂ ನೊಂದ 3 ಮಹಿಳೆಯರನ್ನು ರಕ್ಷಿಸಲಾಗಿದೆ.

ಬಂಧಿತರನ್ನು ಬಂಟ್ವಾಳ ತಾಲೂರಿನ ಮೊಡಂಕಾಪು ನಿವಾಸಿ ಐವನ್ ಸಿರಿಲ್ ಪಿಂಟೊ ಯಾನೆ ಪವನ್ ( 35) , ಮಂಗಳೂರು ಯೆಯ್ಯಾಡಿಯ ಸತೀಶ್ ಆಚಾರ್ಯ (31) ಎಂದು ಗುರುತಿಸಲಾಗಿದೆ.

ಆರೋಪಿಗಳ ವಶದಲ್ಲಿದ್ದ 23,500 ರೂ. ಮತ್ತು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Spread the love