ಶಂಕರನಾರಾಯಣ ; ಲಾಕ್ ಡೌನ್ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ – ಪ್ರಕರಣ ದಾಖಲು
ಕುಂದಾಪುರ: ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಅನುಮತಿ ಇಲ್ಲದೇ ಮೆಹಂದಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 25ರಂದು ರಾತ್ರಿ 09:30 ಗಂಟೆಯಿಂದ 10:30 ಗಂಟೆವರೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಜನ್ಸಾಲೆ ಶಿವರಾಮ ಕುಲಾಲ್ ಎಂಬುವವರ ಮನೆಯಲ್ಲಿ ಅವರ ಮಗ ಮಂಜುನಾಥ ಕುಲಾಲ್ರವರ ವಿವಾಹ ಪೂರ್ವ ಮೆಹಂದಿ ಕಾರ್ಯಕ್ರಮನ್ನು ಶಿವರಾಮ ಕುಲಾಲ್ ಮತ್ತು ಅವರ ಮನೆಯವರು ಸೇರಿ ನಡೆಸಿದ್ದು ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 20 ಜನ ಸೇರಿ ಮೆಹಂದಿ ಕಾರ್ಯಕ್ರಮ ನಡೆಸಿರುತ್ತಾರೆ.
ಆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕೋವಿಡ್- 19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಮಾಡಿರುವ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದೇ ಸಾಂಕ್ರಾಮಿಕ ರೋಗವಾದ ಕೋವಿಡ್ -19 ಸೊಂಕು ಉಡುಪಿಯಲ್ಲಿ ಕಾಣಿಸಿಕೊಂಡಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ್ಯಾಂತ ಲಾಕ್ ಡೌನ್ ಇದ್ದು ಉಡುಪಿಯ ಜಿಲ್ಲಾಧಿಕಾರಿಗಳು ಕಲಂ: 144 (3) ಸಿ.ಆರ್.ಪಿ.ಸಿ ನೇದರಂತೆ ನಿರ್ಭಂಧ ವಿದಿಸಿದ್ದರೂ ಕೂಡ ಆರೋಪಿಗಳು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ಉಡುಪಿ ಜಿಲ್ಲಾಧಿಕಾರಿಗಳು ಮಾಡಿರುವ ಆದೇಶವನ್ನು ಉಲ್ಲಂಘಿಸಿರುತ್ತಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.