ಶಂಕರಪುರ: ಟಿಪ್ಪರ್, ಕಾರು ಡಿಕ್ಕಿ- ಪಲ್ಟಿಯಾದ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತ್ಯು

Spread the love

ಶಂಕರಪುರ: ಟಿಪ್ಪರ್, ಕಾರು ಡಿಕ್ಕಿ- ಪಲ್ಟಿಯಾದ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತ್ಯು

ಉಡುಪಿ: ಟಿಪ್ಪರ್ ಹಾಗೂ ಕಾರು ಪರಸ್ಪರ ಡಿಕ್ಕಿಹೊಡೆದು ಬಳಿಕ ಟಿಪ್ಪರ್ ಪಲ್ಟಿಯಾಗಿ ಅದರಡಿಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ಕಾಪು ತಾಲೂಕಿನ ಶಂಕರಪುರ ದುರ್ಗಾ ನಗರ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತ ಚಾಲಕ ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ (55) ಎಂದು ಗುರುತಿಸಲಾಗಿದೆ

ಪ್ರಾಥಮಿಕ ಮೂಲಗಳ ಪ್ರಕಾರ ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಶಂಕರಪುರ ದುರ್ಗಾ ನಗರ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟಿಪ್ಪರ್ ಮಗುಚಿಬಿದ್ದಿದ್ದು ಈ ವೇಳೆ ಟಿಪ್ಪರ್ ನಿಂದ ಹೊರಕ್ಕೆ ಹಾರಲು ಚಾಲಕ ಪ್ರಯತ್ನಿಸಿದ್ದು ದುರಾದೃಷ್ಟವಶಾತ್ ಟಿಪ್ಪರ್ ನ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅತೀ ವೇಗದ ಚಾಲನ ಅಪಘಾತಕ್ಕೆ ಕಾರಣವೆನ್ನಲಾಗಿದ್ದು ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಕೂಡ ಗಾಯಗಳಾಗಿವೆ. ಅಪಘಾತದಿಂದ ಎರಡೂ ವಾಹನಗಳೂ ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ.

ಶಿರ್ವ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments