ಶರಣ್ ಪಂಪ್ವೆಲ್ ಗೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ದ ಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಆಗ್ರಹ

Spread the love

ಶರಣ್ ಪಂಪ್ವೆಲ್ ಗೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ದ ಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಆಗ್ರಹ

ಹಿಂದೂ ಸಂಘಟನೆಯ ಪ್ರಮುಖ ಶರಣ್ ಪಂಪ್ ವೆಲ್ ಅವರ ಹೆಸರು ಉಲ್ಕೇಖಿಸಿ ಕೋಮು ಗಲಭೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಾಯ್ಸ್ ಮೆಸೇಜ್ ಹರಿಯ ಬಿಟ್ಟ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷನ ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಶೀಘ್ರವಾಗಿ ಕೈಗೊಳ್ಳಲು ಬಂಟ್ವಾಳ ‌ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತಿನ್ ಕುಮಾರ್ ಅವರಿಗೆ ತಿಳಿಸಿದ್ದಾರೆ.

ಶಾಂತಿಯುತ ಬಂಟ್ವಾಳ ವನ್ನು ಮತ್ತೆ ಕೋಮು ಸಂಘರ್ಷಕ್ಕೆ ಗುರಿಮಾಡುವ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತ ಮಾಜಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಯತ್ನಿಸಿದ್ದಾನೆ. ಈತ ಒಬ್ಬ ರೌಡಿಶೀಟರ್ ಆಗಿದ್ದು, ಈ ವಿಚಾರವಾಗಿ ಮತ್ತೆ ಬಿಸಿರೋಡಿನಲ್ಲಿ ಶಾಂತಿ ಕದಡುವ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ‌ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಈತನ‌ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಎಸ್.ಪಿ.ಅವರಿಗೆ ತಿಳಿಸಿದ್ದಾರೆ ಎಂದು ಅವರು ಪ್ರಕಟನೆಯ ಮೂಲಕ ತಿಳಿಸಿದ್ದಾರೆ


Spread the love