ಶಾಂತಿ ಮತ್ತು ಮಾನವೀಯತೆ ಅಭಿಯಾನ ಅಂಗವಾಗಿ ತಾಲೂಕು ಮಟ್ಟದ ಭಾಷಣ ಸ್ಪರ್ಧೆ
ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ‘ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಅಂಗವಾಗಿ, ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. “ಶಾಂತಿ ಮತ್ತು ಮಾನವೀಯತೆ-ನನ್ನ ದೇಶ, ನನ್ನ ಪಾತ್ರ” ಎಂಬ ವಿಷಯದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸ ಬಹುದಾಗಿದೆ.
ರೂ. 3000, ರೂ. 2000 ಹಾಗೂ ರೂ. 1000 ಕ್ರಮವಾಗಿ ಮೊದಲ, ಎರಡನೇಯ ಮತ್ತು ಮೂgನೇಯ ನಗದು ಬಹುಮಾನವಿದ್ದು, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಒಂದು ಶಾಲೆಯಿಂದ ಗರಿಷ್ಠ ಎರಡು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕನ್ನಡ ಅಥವಾ ಇಂಗ್ಲಿಷ್ ಭಾಷೆಯ ಭಾಷಣವು 5 ನಿಮಿಷಗಳಿಗೆ ಮೀರಬಾರದು. ಆಸಕ್ತರು ಸೆ. 5ರ ಒಳಗಾಗಿ ದೂರವಾಣಿ ಸಂಖ್ಯೆ 7676413059, 9845665198 (ಮಂಗಳೂರು ತಾ.) 9535248886, 9141500811 (ಬಂಟ್ವಾಳ ತಾ.) 9141742546, 7829745406 (ಪುತ್ತೂರು ತಾ.) 9611586611, 9480155548 (ಬೆಳ್ತಂಗಡಿ ತಾ.) ಹಾಗೂ 9449221457, 9900417292 (ಸುಳ್ಯ ತಾ.)ಗೆ ಕರೆಮಾಡಿ ಹೆಸರು ನೊಂದಾಯಿಸಬಹುದು.
ಸೆ. 14ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಥಳ ಮತ್ತು ಸಮಯವನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಮುಂಚಿತವಾಗಿ ತಿಳಿಸಲಾಗುವುದು. ಸ್ಪರ್ಧೆಗೆ ಬರುವ ವಿದ್ಯಾರ್ಥಿಗಳು ಮತ್ತವರ ಶಿಕ್ಷಕ/ಶಿಕ್ಷಕಿಯರಿಗೆ ಪ್ರಯಾಣ ವೆಚ್ಚ ನೀಡಲಾವುದು. ಸ್ಪರ್ಧೆಯಲ್ಲಿ ಭಾಗಹಿಸುವ ವಿದ್ಯಾರ್ಥಿಗಳ ಹೆಸರನ್ನು ಸಹಿ ಮತ್ತು ಶಾಲಾ ಮೊಹರಿನೊಂದಿಗೆ ಶಾಲಾ ಮುಖ್ಯೋಪಾಧ್ಯಾರು ದೃಡೀಕರಿಸಿರಬೇಕು ಎಂದು ಅಭಿಯಾನÀ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.