ಶಾಲಾ ವಠಾರದಲ್ಲಿ ಮಕ್ಕಳಿಗೆ  ಸಮಸ್ಯೆಗಳಿದ್ದರೂ, ದೂರವಾಣಿ ಮೂಲಕ ಗಮನಕ್ಕೆ ತಂದರೆ ಸಾಕು  ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ – ಅಬ್ಬುಲ್ ರವೂಫ್

Spread the love

 ಶಾಲಾ ವಠಾರದಲ್ಲಿ ಮಕ್ಕಳಿಗೆ  ಸಮಸ್ಯೆಗಳಿದ್ದರೂ, ದೂರವಾಣಿ ಮೂಲಕ ಗಮನಕ್ಕೆ ತಂದರೆ ಸಾಕು  ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ – ಅಬ್ಬುಲ್ ರವೂಫ್
 

ಮಂಗಳೂರು: ಮಂಗಳೂರು ನಗರದ ಇಲ್ಲಿಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅತ್ತಾವರ ದಲ್ಲಿ ಚೈಲ್ಡ್‍ಲೈನ್ ವತಿಯಿಂದ ತೆರೆದ ಮನೆ ಕಾರ್ಯಕ್ರಮವನ್ನು ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.

ನಂತರಈ ಕಾರ್ಯಕ್ರಮವನ್ನು ಬಿತ್ತಿ ಪತ್ರವನ್ನು ಉದ್ಘಾಟಿಸಲಾಯಿತು. ನಂತರ ಕಾರ್ಯಕ್ರಮದ ಪ್ರಾಸ್ತವಿಕತೆಯನ್ನು ನಗರ ಸಂಯೋಜಕರಾದ ಲವಿಟಾ ಡಿ ಸೋಜರವರು ಮಾತನಾಡುತ್ತಾ ಚೈಲ್ಡ್‍ಲೈನ್ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ಮಂತ್ರಾಲಯದ ಯೋಜನೆಯಾಗಿದ್ದು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಹಾಗೂ ಪೋಷಣೆಗೆ ಇರುವ ,24 ಗಂಟೆಯ ತುರ್ತು ಸೇವೆಯಾಗಿದೆ ಮಕ್ಕಳ ಹಕ್ಕುಗಳಿಗೆ ತೊಂದರೆಯಾದರೆ ಕೂಡಲೇ 1098 ಕ್ಕೆ ಮಾಹಿತಿ ನೀಡಿ ಎಂಬುದಾಗಿ ತಿಳಿಸಿದರು.

ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಜನಪ್ರತಿನಿಧಿಯವರಾದ  ಅಬ್ದುಲ್ ರವೂಫ್ ರವರು ಮಕ್ಕಳ ಸಮಸ್ಯೆಗಳ ಬಗ್ಗೆ ಮಕ್ಕಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚಿಸಿದರು. ಮಕ್ಕಳ ಸಮಸ್ಯೆಗಳಾದ ಶಾಲಾ ಆವರಣದಲ್ಲಿ ಕೊಳಕು ನೀರಿನ ಗುಂಡಿಯನ್ನು ಮುಚ್ಚುವುದು.ಶಾಲಾ ಮುಂಭಾಗದಲ್ಲಿ ಅಟೋ ನಿಲುಗಡೆಯಾಗುತ್ತಿರುವುದು,ಶಾಲಾ ಕೌಂಪೌಂಡು ಒಂದು ಬದಿ ತುಂಡಾಗಿ ಬಿದ್ದಿರುವುದು, ಮುಂತಾದ ಮಕ್ಕಳ ಪ್ರಶ್ನೆಗಳಿಗೆ ಆದಷ್ಟು ಶ್ರೀಘ್ರವಾಗಿ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿರುತ್ತಾರೆ.ಹಾಗೂ ತನ್ನ ವ್ಯಾಪ್ತಿಗೆ ಬರುವ ಯಾವುದೇ ಸಮಸ್ಯೆಗಳನ್ನು ತನ್ನ ಗಮನಕ್ಕೆ ತಂದರೆ ಆದಷ್ಟು ಶ್ರೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿರುತ್ತಾರೆ.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿಯವರಾದ ಶ್ರೀಮತಿ ಜ್ಯೋತಿರವರು ಮಾತನಾಡುತ್ತಾ ಡೆಂಗ್ಯೂ ಮತ್ತು ಮಲೇರಿಯದಂತಹ ಮಾರಕ ರೋಗಗಳು ನಮ್ಮ ಸುತ್ತ ಮುತ್ತಲಿನ ಪರಿಸರವು ಕೊಳಚೆಯುಕ್ತವಾಗಿದ್ದರೆ ಅಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಅದು ಮನುಷ್ಯನಿಗೆ ಕಚ್ಚಿ ರೋಗಗಳು ಬರುತ್ತವೆ. ಅದಕ್ಕೆ ಆದಷ್ಟು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು. ಸಂಜೆ ಹೊತ್ತು ಮನೆಯ ಕಿಟಕಿಗಳನ್ನು ಭದ್ರಪಡಿಸಬೇಕು.ಯಾರಿಗಾದರೂ ಜ್ವರ ಕಂಡುಬಂದಲ್ಲಿ ವೈದ್ಯರಲ್ಲಿ ಪರೀಕ್ಷಿಸಿಯೇ ಚಿಕಿತ್ಸೆಯನ್ನು ಪಡೆಯಬೇಕು.ರೋಗ ಗುಣಮುಖವಾಗುವವರೆಗೆ ಚಿಕಿತ್ಸೆಯನ್ನು ಮುಂದುವರಿಸಬೇಕು ಎಂದು ಕಿವಿ ಮಾತನ್ನು ಹೇಳಿರುತ್ತಾರೆ.

ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯವರಾದ ಪ್ಲಾವಿಯ ಯಂ.ತಾವ್ರೋ ವೇದಿಕೆಯಲ್ಲಿ ಆಸೀನರಾಗಿರುವ ಅತಿಥಿಗಳಿಗೆ ಸ್ವಾಗತವನ್ನು ನೀಡಿದರು. ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಹೇಮಾವತಿಯವರು ಧನ್ಯವಾದವನ್ನು ನೀಡಿದರು ,ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೇವತಿ ಹೊಸಬೆಟ್ಟು ಇವರು ನೇರವೇರಿಸಿದರು. ಕಾರ್ಯಕ್ರಮದಲ್ಲಿ ಚೈಲ್ಡ್‍ಲೈನ್ ಕಾರ್ಯಕರ್ತರಾದ ,ಜಯಂತಿ ಕೋಕಳ, ಮತ್ತು ಅಂಗನವಾಡಿ ಶಿಕ್ಷಕರು ಹಾಜರಾಗಿದ್ದರು ಮತ್ತು ಮಕ್ಕಳು ಪೋಷಕರು ಭಾಗವಹಿಸಿದ್ದರು.


Spread the love