ಶಾಸಕ ಜೆ.ಆರ್.ಲೋಬೊ ಮಹಾಕಾಳಿಪಡ್ಪು ಪೌರಕಾರ್ಮಿಕರ ವಸತಿಗೃಹ ವೀಕ್ಷಣೆ
ಮಂಗಳೂರು: ಜೆಪ್ಪು ಮಾಹಕಾಳಿಪಡ್ಪುವಿನಲ್ಲಿ ನಿರ್ಮಿಸುತ್ತಿರುವ 2.8 ಕೋಟಿ ರೂಪಾಯಿ ವೆಚ್ಚ ಪೌರಕಾರ್ಮಿಕರ ವಸತಿಗೃಹವನ್ನು ಶಾಸಕ ಜೆ.ಆರ್.ಲೋಬೊ ಅವರು ಪ್ರಗತಿ ಪರಿಶೀಲಿಸಿದರು.
ಅವರು ಈ ಸಂದರ್ಭದಲ್ಲಿ ಮಾತನಾಡಿ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಈಗಾಗಲೇ ಇದರ ಕೆಲಸ ಆರಂಭಿಸಿ ಆರುತಿಂಗಳಾಗಿದ್ದು ಅದರ ಕೆಲಸ ಏನೇನೂ ಸಾಲದು. ವಿಳಂಭವಾದಷ್ಟು ದುಬಾರಿಯಾಗುತ್ತದೆ. ಸಿಮೆಂಟ್, ಸ್ಟೀಲ್ ದರ ಏರಿಕೆಯಾಗುತ್ತದೆ ಎಂದ ಅವರು ಇದರ ಕೆಲಸವನ್ನು ಮಾಡುವವರಿಗೆ ಗುರಿನಿಗದಿಪಡಿಸುವಂತೆ ಸೂಚಿಸಿದರು.
ಇಲ್ಲಿ 32 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು 2018 ವೇಳೆಗೆ ಮುಗಿಸಬೇಕಾಗಿದೆ. ಆದ್ದರಿಂದ ವೇಗ ಹೆಚ್ಚಿಸಬೇಕು ಎಂದರು.
ಶಾಸಕರು ಜೆಪ್ಪು ಕುಡುಪಾಡಿಯ ಪಟ್ಣಪ್ರದೇಶದಲ್ಲಿ ನೇತ್ರಾವತಿ ನದಿಗೆ ಸೇರುವ ಬೃಹತ್ ತೋಡಿಗೆ ತಡೆಗೋಡೆ ನಿರ್ಮಿಸಲು 25 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಾಪೆರ್Çರೇಟರ್ ಶೈಲಜಾ, ದಿನೇಶ್ ಪಿ.ಎಸ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಮೊಹಮದ್ ನವಾಜ್, ವಿದ್ಯಾ, ಅಶೋಕ್ ಕುಡುಪಾಡಿ, ಇಂಜಿನಿಯರ್ ಗುರುರಾಜ್ ಮರಳಹಳ್ಳಿ, ರಘುಪಾಲ್, ಅಶೋಕ್ ಕುಮಾರ್, ಯಶವಂತ್ ಕಾಮತ್ ಮುಂತಾದವರಿದ್ದರು.