ಶಾಸಕ ಭರತ್ ಶೆಟ್ಟಿ ನಡವಳಿಕೆ ಜಿಲ್ಲೆಗೆ ಕಪ್ಪು ಚುಕ್ಕೆ- ಯು.ಟಿ ಖಾದರ್ ಅಸಮಾಧಾನ
ಮಂಗಳೂರು: ಕೊರೋನಾ ಪಾಸಿಟಿವ್ ಮೃತ ಮಹಿಳೆಯ ಶವ ಸಂಸ್ಕಾರ ವಿಚಾರದಲ್ಲಿ ಶಾಸಕ ಡಾ|ಭರತ್ ಶೆಟ್ಟಿ ನಡೆದುಕೊಂಡ ರೀತಿ ಜಿಲ್ಲೆಗೆ ಕಪ್ಪು ಚುಕ್ಕೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಅವರು ಮೃತ ವ್ಯಕ್ತಿಯೊಂದಿಗೆ ಕಟೋರ ವರ್ತನೆ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಈ ಪೈಶಾಚಿಕ ಕೃತ್ಯ ಖೇದಕರ ಸಂಗತಿ. ಯಾವ ರೀತಿಯಲ್ಲಿ ಮನುಷ್ಯ ಸಾಯುತ್ತಾನೆ ನಾಳೆ ನಮ್ಮ ಪರಿಸ್ಥಿತಿ ಏನು? ರೋಗ ಮಾನವ ನಿರ್ಮಿತವಲ್ಲ. ಯಾವ ಧರ್ಮದಲ್ಲೂ ಮೃತ ಶರೀರದೊಂದಿಗೆ ಅಮಾನವೀಯ ಕೃತ್ಯ ದ ಉಲ್ಲೇಖವಿಲ್ಲ.ಭರತ್ ಶಟ್ಟಿ ನಡುವಳಿಕೆ ಜಿಲ್ಲೆಗೆ ಕಪ್ಪುಚುಕ್ಕೆ ಇದ್ದಂತೆ ಶಾಸಕ ಯು.ಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೋನಾ ಪಾಸಿಟಿವ್ ರೋಗಿಯ ಮೃತದೇಹದ ಅಂತ್ಯಸಂಸ್ಕಾರ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ದೇಶದ ಎಲ್ಲಾ ಜನತೆ ಕಳೆದ ಒಂದು ವರೆ ತಿಂಗಳಿನಿಂದ ಲಾಕ್ ಡೌನ್ ಗೆ ಸಹಕರಿಸುತ್ತಿದೆ ಆದರೆ ಜನರಿಗೆ ಏನು ಬೇಕು ಎನ್ನುವ ಬಗ್ಗೆ ಸರಕಾರದ ಬಳಿ ಯಾವುದೇ ರೀತಿಯ ಸ್ಪಷ್ಟವಾದ ಯೋಜನೆ ಇಲ್ಲ ಎಂದು ಅವರು ಹೇಳಿದರು.