ಶಾಸಕರನ್ನು ಏಕವಚನದಲ್ಲಿ ಕರೆಯುವುದು ಸಿದ್ದರಾಮಯ್ಯ ಗೌರವಕ್ಕೆ ತಕ್ಕುದಾದಲ್ಲ – ಹಾಲಾಡಿ ಶ್ರೀನಿವಾಸ ಶೆಟ್ಟಿ

Spread the love

ಶಾಸಕರನ್ನು ಏಕವಚನದಲ್ಲಿ ಕರೆಯುವುದು ಸಿದ್ದರಾಮಯ್ಯ ಗೌರವಕ್ಕೆ ತಕ್ಕುದಾದಲ್ಲ – ಹಾಲಾಡಿ ಶ್ರೀನಿವಾಸ ಶೆಟ್ಟಿ

ಉಡುಪಿ: ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಲಾಡಿ ಶ್ರೀನಿವಾಸ ಶೆಟ್ಟಿ ಯಾರೂ ಎನ್ನುವುದೇ ಗೊತ್ತಿಲ್ಲ ಎಂದು ಏಕವಚನದಲ್ಲಿ ಮಾತನಾಡುವುದರ ಮೂಲಕ ಬಹಳ ಹಗುರವಾಗಿ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿದ್ದುಕೊಂಡು ಒರ್ವ ಶಾಸಕನ ಬಗ್ಗೆ ಏಕವಚನದಲ್ಲಿ ಮಾತನಾಡುವಷ್ಟು ಸಲುಗೆ ನಮಗೆ ಅವರೊಂದಿಗಿಲ್ಲ. ಸಲುಗೆ ಇದ್ದವರ ಜೊತೆ ಬೇಕಾದರೆ ಅವರು ಮಾತನಾಡಲಿ ನಮ್ಮ ಅಭ್ಯಂತರವೇನು ಇಲ್ಲ. ಅವರು ಯಾವ ಉದ್ದೇಶದಿಂದ ಹಾಗೆ ಮಾತನಾಡಿದರು ಎಂಬುದು ನನಗೆ ತಿಳಿದಿಲ್ಲ ಅದನ್ನು ಅವರಲ್ಲೇ ಕೇಳಬೇಕು. ಹಾಗೆ ಮಾತನಾಡಿರುವುದು ಅವರ ಗೌರವಕ್ಕೆ ತಕ್ಕುದಾದಲ್ಲ ನಾನು ಅಂತಹ ಸಂಸ್ಕೃತಿಯನ್ನು ಬೆಳೆಸಿಕೊಂಡಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೈಂದೂರಿನ ನಾಗೂರಿನಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಖವನ್ನೇ ನೋಡಿಲ್ಲ ಎಂದು ಏಕವಚನದಲ್ಲಿ ಮಾತನಾಡಿದ್ದಕ್ಕೆ ಶುಕ್ರವಾರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಯಾರು ಎನ್ನುವುದು ತಿಳಿದೆ ಇಲ್ಲ ಎನ್ನುವ ಸಿದ್ದರಾಮಯ್ಯನವರು ಬಾರ್ಕೂರು ಸಂಸ್ಥಾನದ ಕಾರ್ಯಕ್ರಮದಲ್ಲಿ ಅವರೊಂದಿಗಿದ್ದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ನನ್ನನ್ನು ಪರಿಚಯಿಸಿ ಹಾಲಾಡಿಯವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದಾಗ ಬನ್ನಿ ಶೆಟ್ರೆ ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಎರಡನೇಯ ಬಾರಿ ವಿಶೇಷ ಅನುದಾನ ಕೇಳುವ ನಿಟ್ಟಿನಲ್ಲಿ ಅವರ ಕಚೇರಿಗೆ ನಾನು ಹೋಗಿದ್ದೆ. ಆಗ ಅಲ್ಲಿ ಮಾಜಿ ಮಂತ್ರಿಗಳಾದ ಅಭಯಚಂದ್ರ ಜೈನ್ ಹಾಗೂ ವಿನಯ್ ಕುಮಾರ್ ಸೊರಕೆ ಇದ್ದು ಅವರು ನನ್ನನ್ನು ನೋಡಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಂದರು ಎಂದಾಗ ನಾನು ಅವರಿಗೆ ನಾನು ಕ್ಷೇತ್ರಕ್ಕೆ ಅನುದಾನವನ್ನು ಕೇಳಿ ಮನವಿ ಪತ್ರವನ್ನು ಕೊಟ್ಟಾಗ, ಶ್ರೀನಿವಾಸ ಶೆಟ್ಟಿಯವರೇ ನೀವು ನಮ್ಮ ಪಕ್ಷಕ್ಕೆ ಬನ್ನಿ ಎಂದಿದದಲ್ಲದೆ ವಿನಯ್ ಕುಮಾರ್ ಸೊರಕೆಯವರೇ ನೀವು ಏನು ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳೀದ್ದರು. ಆಗ ನಾನು ನಿಮ್ಮ ಪಕ್ಷಕ್ಕೆ ಬರುವುದಿಲ್ಲ ಕ್ಷೇತ್ರಕ್ಕೆ ಅನುದಾನ ಕೊಡಿ ಇಲ್ಲಾಂದ್ರೆ ಬಿಡಿ ಎಂದು ಹೇಳಿ ಬಂದಿದ್ದೆ.

ಮೂರನೇಯದಾಗಿ ಉಡುಪಿಯಲ್ಲಿ ಜಿ ಶಂಕರ್ ನೇತೃತ್ವದಲ್ಲಿ ಮೊಗವೀರ ಸಮಾವೇಶ ನಡೆದಿದ್ದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಆಗ ನಾನು ವೇದಿಕೆಯಲ್ಲಿ ಒಂದು ಬದಿಯಲ್ಲಿ ಕೂತಿದ್ದೆ ಅವರ ಪಕ್ಕದಲ್ಲಿ ಉಸ್ಸುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೂತಿದ್ದು ಅವರನ್ನು ಎಬ್ಬಿಸಿ ಶೆಟ್ರೆ ಇಲ್ಲಿ ಬನ್ನಿ ಎಂದು ಅವರ ಪಕ್ಕದಲ್ಲಿ ಕೂರಿಸಿಕೊಂಡಿದ್ದರು ಹಾಗದರೆ ಇದೆಲ್ಲಾ ಪರಿಚಯವಿಲ್ಲದೆ ಮಾಡಿದ್ದರೇ ಸಿದ್ದರಾಮಯ್ಯನವರು ಎಂದು ಹಾಲಾಡಿ ಪ್ರಶ್ನಿಸಿದರು. ಇದರ ಬಗ್ಗೆ ಮಾಜಿ ಮುಖ್ಯಮಂತ್ರಿಗಳೇ ವಿಮರ್ಸೆ ಮಾಡಿಕೊಳ್ಳಬೇಕಾಗಿದೆ ಎಂದರು.


Spread the love
1 Comment
Inline Feedbacks
View all comments
drona
6 years ago

Some politicians are very rude. DK and Udipi politicians know how to respect. Can not say so much about Abhaya who has misbehaved publicly in the past.