ಶಿರೂರು ಸ್ವಾಮಿ ನಿಧನಕ್ಕೆ ಕಾಪು ಯುವಕಾಂಗ್ರೆಸ್ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಸಂತಾಪ

Spread the love

ಶಿರೂರು ಸ್ವಾಮಿ ನಿಧನಕ್ಕೆ ಕಾಪು ಯುವಕಾಂಗ್ರೆಸ್ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಸಂತಾಪ

ಉಡುಪಿ: ಸರಳ ಸಜ್ಜನಿಕೆಯ,ಮೂರು ಬಾರಿ, ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಿದ, ಶಿರೂರು ಮಠದ ಶ್ರೀ ಲಕ್ಷೀವರ ತೀರ್ಥ ಶ್ರೀಪಾದರ ಅಕಾಲಿಕ ಉಡುಪಿ ಜಿ್ಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಕಾಪು ವಿಧಾನಸಭಾ ಕ್ಷೇತ್ರ ಯುವಕಾಂಗ್ರೆಸ್ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಸಂತಾಪ ಸೂಚಿಸಿದ್ದಾರೆ.

ಸಂಗೀತ, ಸಾಹಿತ್ಯದಲ್ಲಿ ವಿಶೇಷ ಅಭಿಮಾನವನ್ನು ಹೊಂದಿದ್ದ ಶಿರೂರು ಶ್ರೀಗಳು ಸದಾ ಬಡವರ ಪರ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಉಡುಪಿಯಲ್ಲಿ ಹುಲಿವೇಷದಂತಹ ಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದರು. ಯುವಜನರು ಮಾಡುವ ಯಾವುದೇ ಕಾರ್ಯಕ್ರಮವಾಗಿ ಜಾತಿ ಭೇದವನ್ನು ಮರೆತು ತನ್ನಿಂದಾದ ಸಹಾಯವನ್ನು ಮಾಡಿ ಹುರಿದುಂಬಿಸುತ್ತಿದ್ದರು. ತನ್ನಲ್ಲಿ ಬರುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವ ಗುಣವನ್ನು ಹೊಂದಿದ ಕಾರಣ ಅವರನ್ನು ಜನಸಾಮಾನ್ಯರ ಸ್ವಾಮಿಯೇಂದೆ ಕರೆಯಲಾಗುತ್ತಿತ್ತು.

ಜನರ ಜೊತೆ ಸಾಮಾನ್ಯರಂತೆ ಬೆರೆಯುತ್ತಿದ್ದ ಹಾಗೂ ಶ್ರೀಕೃಷ್ಣನ ಸೇವೆಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love