ಶಿರ್ವ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ದ : ವಿನಯ್ ಕುಮಾರ್ ಸೊರಕೆ

Spread the love

ಶಿರ್ವ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ದ : ವಿನಯ್ ಕುಮಾರ್ ಸೊರಕೆ

ಉಡುಪಿ: ಶಿರ್ವದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ 25 ಕೋಟಿ ರೂ ಅನುದಾನದಲ್ಲಿ ಹಲವು ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕಾಪು ಕ್ಷೇತ್ರದ ಇತಿಹಾಸದಲ್ಲೇ ಗ್ರಾಮವೊಂದಕ್ಕೆ ಒಂದು ವರ್ಷದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿಗೆ ಚಾಲನೆ ದೊರೆತಿರುವುದ ಇದೇ ಮೊದಲು ಎಂದು ಕಾಪು ಶಾಸಕ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಶಿರ್ವದಲ್ಲಿ ಹಲವು ಕಾಮಗಾರಿಗಳೀಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಶಿರ್ವ ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳ ಪೈಕಿ ಮಂಚೂಣಿಯಲ್ಲಿದ್ದು, ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗೆ ತಾನು ಬದ್ದ. ಜನತೆಯ ಉತ್ತಮ ಜೀವನಕ್ಕೆ ತಕ್ಕುದಾದಂತೆ ರಸ್ತೆ, ಒಳಚರಂಡಿ, ಕಸವಿಲೇವಾರಿ, ಕುಡಿಯುವ ನೀರು ಇತ್ಯಾದಿ ಮೂಲ ಸೌಕರ್ಯಗಳಿಗೆ ಪೂರ್ಣ ರೀತಿಯ ಅನುದಾನ ಬಳಕೆ ಮಾಡಲಾಗುವುದು ಎಂದರು.

image001foundation-stone-vinay-kumar-sorake image002foundation-stone-vinay-kumar-sorake image003foundation-stone-vinay-kumar-sorake image004foundation-stone-vinay-kumar-sorake image005foundation-stone-vinay-kumar-sorake image006foundation-stone-vinay-kumar-sorake image007foundation-stone-vinay-kumar-sorake image008foundation-stone-vinay-kumar-sorake image009foundation-stone-vinay-kumar-sorake image010foundation-stone-vinay-kumar-sorake

ರೂ 11.50 ಕೋಟಿ ವೆಚ್ಚದಲ್ಲಿ ಸೂಡ ಕ್ರಾಸ್ -ಶಿರ್ವ-ಕಟ್ಟಿಂಗೇರಿ ತನಕ 13.40 ಕಿಮಿ ತನಕ ರಸ್ತೆ ವಿಸ್ತರಣೆ, ರೂ 115 ಲಕ್ಷ ವೆಚ್ಚದಲ್ಲಿ ಶಿರ್ವ – ಕುತ್ಯಾರು ರಸ್ತೆ, ರೂ 70 ಲಕ್ಷ ವೆಚ್ಚದಲ್ಲಿ ಶಿರ್ವ ನ್ಯಾರ್ಮ ಸೇತುವೆ, ರೂ 10 ಲಕ್ಷ ವೆಚ್ಚದಲ್ಲಿ ಶಿರ್ವ ಮುಗೇರ್ಕಳ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ತಾಪಂ ಸದಸ್ಯೆ ಗೀತಾ ವಾಗ್ಳೆ, ಮುದರಂಗಡಿ ತಾಪಂ ಸದಸ್ಯ ಮೈಕಲ್ ಡಿಸೋಜ, ಬೆಳ್ಳೆ ತಾಪಂ ಸದಸ್ಯೆ ಸುಜಾತಾ ಸುವರ್ಣ, ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜಾ ಪೂಜಾರ್ತಿ, ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಜನಿ ಹೆಗ್ಡೆ, ಪಂಚಾಯತ್ ಸದಸ್ಯ ಮೆಲ್ವಿನ್ ಡಿಸೋಜ, ಪಡುಬೆಳ್ಳೆ ಹರೀಶ್ ಶೆಟ್ಟಿ, ರಾಮರಾಯ ಪಾಟ್ಕರ್ ಇನ್ನಿತರರು ಉಪಸ್ಥಿತರಿದ್ದರು.


Spread the love