ಶಿವಾಜಿನಗರದ ಸಂತ ಮರಿಯ ಬಸಿಲಿಕಾ ಪುಣ್ಯಕ್ಷೇತ್ರ ವಾರ್ಷಿಕ ಹಬ್ಬಕ್ಕೆ ನವೇನಾ

Spread the love

ಶಿವಾಜಿನಗರದ ಸಂತ ಮರಿಯ ಬಸಿಲಿಕಾ ಪುಣ್ಯಕ್ಷೇತ್ರ ವಾರ್ಷಿಕ ಹಬ್ಬಕ್ಕೆ ನವೇನಾ

ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಮಾತೆ ಮರಿಯಮ್ಮನವರಿಗೆ ಗೌರವ ಸಲ್ಲಿಸಲು ಹಾಗೂ ಅವರ ಮಧ್ಯಸ್ಥಿಕೆಯನ್ನು ಕೋರಲು ಬೆಂಗಳೂರಿನ ಶಿವಾಜಿನಗರದ ಸಂತ ಮರಿಯ ಬಸಿಲಿಕಾ ಪುಣ್ಯಕ್ಷೇತ್ರಕ್ಕೆ ಬರುತ್ತಿದ್ದರು. ಪ್ರತಿ ವರ್ಷ ಆಗಸ್ಟ್ 29 ರಂದು ಧ್ವಜಾರೋಹಣದ ಮೂಲಕ ನವೇನಾ ದಿನಗಳ ನಂತರ ಸೆಪ್ಟೆಂಬರ್ 8ನೇ ತಾರೀಖಿನಂದು ಇಲ್ಲಿ ನಡೆಯುವ ವಾರ್ಷಿಕ ಹಬ್ಬಕ್ಕೆ ಸುಮಾರು ಒಂದು ಲಕ್ಷ ಜನ ಸೇರುವುದನ್ನು ನೋಡಬಹುದಾಗಿತ್ತು. ಎಲ್ಲಾ ಧರ್ಮಗಳ ಭಕ್ತಾಧಿಗಳು ಸಹೋದರ ಸಹೋದರಿಯರಂತೆ ಈ ವಾರ್ಷಿಕ ಹಬ್ಬದಲ್ಲಿ ಹೃದಯಾಂತರಾಳದಿಂದ ಪಾಲ್ಗೊಳ್ಳುತ್ತಿದ್ದರು. ಮಾತೆ ಮರಿಯಮ್ಮನವರ ಆಶೀರ್ವಾದವನ್ನು ಪಡೆಯಲು ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರಾದಿಯಾಗಿ ಎಲ್ಲರೂ ಸಹ ವಿಶ್ವಾಸದಿಂದ ಒಮ್ಮತದಿಂದ ಈ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು.

ಅದರೆ ಈ ವರ್ಷದ ಆಡಂಬರ, ಸಾಂಭ್ರಮಿಕ ಆಚರಣೆಯನ್ನು ಕೊರೋನಾ ಮಹಾಮಾರಿಯು ಕಿತ್ತುಕೊಂಡಿದೆ. ಎಂದಿನಂತೆ ವೈಭವದಿಂದ, ಸಂಭ್ರಮ ಸಡಗರದಿಂದ ಆಚರಿಸಲ್ಪಡುತ್ತಿದ್ದ ಮಾತೆ ಮರಿಯಮ್ಮನವರ ಹಬ್ಬವು ಈ ಬಾರಿ ಕೊರೋನಾ ಸಾಂಕ್ರಮಿಕ ರೋಗವು ದಿನೇ ದಿನೇ ಹೆಚ್ಚುತ್ತಿರುವುದರಿಂದ ಆದಷ್ಟು ಸರಳವಾಗಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಲ್ಲದೆ ಆಚರಿಸಲ್ಪಡುತ್ತಿದೆ. ಈ ಕಾರಣದಿಂದ ಈ ಬಾರಿಯ ಹಬ್ಬವನ್ನು ಪರ್ಯಾಯವಾಗಿ ಡಿಜಿಟಲ್ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆಚರಿಸಲಾಗುತ್ತದೆ.

ಸರ್ಕಾರಿ ಅಧಿಕಾರಿಗಳ ಸಲಹೆಯಂತೆ ಈ ಬಾರಿಯ ಹಬ್ಬವನ್ನು ಆದಷ್ಟು ಸರಳವಾಗಿ ಹಾಗೂ ಜನ ಗುಂಪು ಸೇರುವುದನ್ನು ತಡೆಯುವುದರ ಮೂಲಕ ಆಚರಿಸಬೇಕೇಂದು ನಿರ್ಧರಿಸಿದ್ದೇವೆ. ಸರ್ಕಾರದ ನಿರ್ದೇಶನಗಳಿಗೆ ಗೌರವ ಕೊಟ್ಟು ಹಾಗೂ ಪ್ರಜ್ಞಾವಂತ ನಾಗರೀಕರಾಗಿ ನವೇನಾ ದಿನಗಳ (ಆಗಸ್ಟ್ 29 ರಂದು ಪ್ರಾರಂಭವಗುವ) ಮತ್ತು ಹಬ್ಬದ ಕಾರ್ಯಕ್ರಮಗಳನ್ನು (ಸೆಪ್ಟೆಂಬರ್ 8) ಡಿಜಿಟಲ್ ಮಾಧ್ಯಮಗಳ ಮುಖಾಂತರ ನೇರಪ್ರಸಾರ ಮಾಡಲು ನಿರ್ಧರಿಸಿದ್ದೇವೆ.

ತಮ್ಮ ಮನೆಗಳಲ್ಲಿ ಕುಳಿತುಕೊಂಡು ಜಪಸರ, ಬಲಿಪೂಜೆ, ಆರಾಧನೆ ಮುಂತಾದ ಪ್ರಾರ್ಥನೆಗಳಲ್ಲಿ ಕುಟುಂಬ ಸಮೇತರಾಗಿ ಸಂತ ಮರಿಯಮ್ಮನವರ ಆಶೀರ್ವಾದಗಳನ್ನು ಪಡೆಯಲು, ಹಾಗೂ ಕೋವಿಡ್ ಮಹಾಮಾರಿಯನ್ನು ಈ ಭೂಮಿಯಿಂದ ಒರೆಸಿ ಹಾಕಲು ಈ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸಬೇಕೆಂದು ನಿಮ್ಮ ಪತ್ರಿಕೆ ಹಾಗೂ ಜಾಲತಾಣಗಳ ಮೂಲಕ ಭಕ್ತಾದಿಗಳನ್ನು ಕೇಳಿಕೊಳ್ಳುತ್ತಿದ್ದೇನೆ.

ನವೇನಾ ದಿನಗಳಲ್ಲಿ ಹಾಗೂ ಹಬ್ಬದ ದಿನ ನಾವೆಲ್ಲರೂ ಭಕ್ತಾಧಿಗಳಿಗಾಗಿ ಹಾಗೂ ಬೆಂಗಳೂರು ಮತ್ತು ಕರ್ನಾಟಕದಾದ್ಯಂತ ಇರುವ ಜನರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸುತ್ತೇವೆ.

ಹಬ್ಬದ ದೈನಂದಿನ ಕಾರ್ಯಕ್ರಮಗಳು ಹೀಗಿರಲಿವೆ:

ಬಲಿಪೂಜೆಗಳ ಸಮಯ:
ಬೆಳಿಗ್ಗೆ 6 ಗಂಟೆಗೆ – ಇಂಗ್ಲಿಷ್
ಬೆಳಿಗ್ಗೆ 7 ಗಂಟೆಗೆ – ಕನ್ನಡ
ಬೆಳಿಗ್ಗೆ 8 ಗಂಟೆಗೆ – ತಮಿಳು
ಬೆಳಿಗ್ಗೆ 9 ಗಂಟೆಗೆ – ಕೊಂಕಣಿ
ಬೆಳಿಗ್ಗೆ 10 ಗಂಟೆಗೆ – ಮಲಯಾಳಂ ಹಾಗೂ ಬೆಳಿಗ್ಗೆ 11 ಗಂಟೆಗೆ ವ್ಯಾದಿಸ್ತರಿಗೋಸ್ಕರ ವಿಶೇಷ ಬಲಿಪೂಜೆ

ಸಂಜೆಯ ಕಾರ್ಯಕ್ರಮಗಳು
ಸಂಜೆ 5 ಗಂಟೆಗೆ – ಜಪಸರ ಮತ್ತು ಮನವಿಮಾಲೆ
5:30 ಕ್ಕೆ ವಿವಿಧ ಭಾಷೆಗಳಲ್ಲಿ ಮಾತೆ ಮರಿಯಮ್ಮನವರ ಚಿಂತನೆ

ಕಾರ್ಯಕ್ರಮಗಳನ್ನು ಈ ಕೆಳಗಿನ ಜಾಲತಾಣಗಳಲ್ಲಿ ವೀಕ್ಷಿಸಬಹುದು:
ಅಧಿಕೃತ ಜಾಲತಾಣಗಳು:

www.stmarysbangalore.com

www.bangalorearchdiocese.org


Spread the love