ಶೋಭಾ ಕರಂದ್ಲಾಜೆಯವರೇ, ಪರ ಪುರುಷನ ಹೆಸರಿನಲ್ಲಿ ಮತ ಕೇಳಬೇಕೇ?- ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್

Spread the love

ಶೋಭಾ ಕರಂದ್ಲಾಜೆಯವರೇ, ಪರ ಪುರುಷನ ಹೆಸರಿನಲ್ಲಿ ಮತ ಕೇಳಬೇಕೇ?- ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್

ಉಡುಪಿ: ರಾಜ ರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ದಿ.ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ತಮ್ಮ ಅಗಲಿದ ಪತಿಯ ಹೆಸರಿನಲ್ಲಿ ಮತ ಕೇಳಿದರೆ ಒಳ್ಳೆಯದಾಗದು ಅನ್ನುವ ಸಂಸದೆ ಶೋಭಾ ಕರಂದ್ಲಾಜೆ ಯವರ ಮಾತು ತೀರಾ ಅನಾಗರಿಕ ಹಾಗೂ ಹಾಸ್ಯಾಸ್ಪದ ವಾಗಿದೆಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ   ಗೀತಾ ವಾಗ್ಳೆ ಯವರು ಹೇಳಿದ್ದಾರೆ.

ಅನವರತ ಭಾರತೀಯ ಸಂಸ್ಕೃತಿಯ ಬಗ್ಗೆ ದೊಡ್ಡದಾಗಿ ಹೇಳಿಕೆಗಳನ್ನು ಹರಿಯಬಿಡುವ ಬಿಜೆಪಿ ಪಕ್ಷದ ಒಬ್ಬ ಸಂಸದೆಯಾಗಿ ಶೋಭಾ ಅವರ ಬಾಯಿಯಿಂದ ಇಂತಹಾ ಮಾತುಗಳು ಬರುವುದೆಂದರೆ ಆಕೆ ಖಂಡಿತವಾಗಿಯೂ ಒಬ್ಬ ಅಜ್ಞಾನಿಯೆಂದೇ ತಿಳಿಯಬೇಕಾಗಿದೆ. ಕುಸುಮಾ ಅವರು ಡಿ.ಕೆ.ರವಿಯವರ ಕೈಹಿಡಿದು ಸಪ್ತಪದಿ ತುಳಿದ ವರು.ಹಾಗಿರುವಾಗ ಆಕೆ ಅವರು ಹೆಸರಿನಲ್ಲಿ ತಪ್ಪೇನು? ತನ್ನ ಪತಿಯ ಅಗಲಿಕೆಯಿಂದ ಆಕೆಯ ಮನಸ್ಸಿಗೆ ಎಂತಹಾ ಆಘಾತವಾಗಿರಬಹುದೆಂಬ ಕಲ್ಪನೆಯಾದರೂ ತಮಗಿದೆಯೇ? ಇರುವುದಾದರೂ ಹೇಗೆ? ವೈವಾಹಿಕ ಜೀವನದ ಅನುಭವ ತಮಗಿದ್ದರೆ ತಾನೇ? ಎಂದು ಲೇವಡಿ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ಯವರೇ 2019ರಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡುವುದಕ್ಕೆ ತಮಗೆ ತಮ್ಮ ಪಕ್ಷದವರಿಂದಲೇ ತೀವ್ರ ವಿರೋಧಗಳು ಬಂದು ಅವರಿಂದಲೇ ಗೋ ಬ್ಯಾಕ್ ಚಳುವಳಿಗೆ ತುತ್ತಾದವರು ತಾವು.ಇಂತಹ ಸಂದರ್ಭದಲ್ಲಿ ಹೇಗೋ ಏನೋ ಕೆಲವರು ಕೃಪಾಕಟಾಕ್ಷ ದಿಂದಾಗಿ ಆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ತಮಗೆ ಸಿಕ್ಕಾಗ ತಾವು ಮಾಡಿದ್ದೇನು? ಪರಪುರುಷನೊಬ್ಬನ ಹೆಸರಿನಲ್ಲಿ ತಾವು ಮತ ಕೇಳಬಹುದು. ಅದು ತಮಗೆ ಒಳ್ಳೆಯದು. ಆದರೆ ಒಬ್ಬ ಮದುವೆಯಾದ ಹೆಣ್ಣು ತನ್ನ ಪತಿಯ ಹೆಸರಿನಲ್ಲಿ ಮತ ಕೇಳಿದರೆ ಒಳ್ಳೆಯದಾಗದು ಅನ್ನುವ ತಮ್ಮ ಮಾತಿನ ಅರ್ಥವೇನು? ತಾವು ಮೊದಲು ತಮ್ಮ ಕ್ಷೇತ್ರದ ಕಡೆಗೆ ತಮ್ಮ ಗಮನ ಕೊಡಿ. ಎಲ್ಲೆಲ್ಲಿಯ ಉಸಾಬರಿ ತಮಗ್ಯಾಕೆ? ಅನಗತ್ಯ ವಿಷಯಗಳಲ್ಲಿ ಯದ್ವಾತದ್ವಾ ನಾಲಿಗೆಯನ್ನು ಹರಿಯಬಿಡುವ ಗುತ್ತಿಗೆಯನ್ನು ತಾವು ಪಡೆದಿರುವಂತೆ ವರ್ತಿಸುತ್ತಿದ್ದೀರಿ .ಇದರ ಬದಲಾಗಿ ಉತ್ತರ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ,ಕೊಲೆ, ಗೂಂಡಾಗಿರಿಗಳ ಬಗ್ಗೆ ತಮ್ಮ ನಾಲಿಗೆ ಹರಿಯಲಿ ಎಂಬುದಾಗಿ ಗೀತಾ ವಾಗ್ಳೆ ಯವರು ಹೇಳಿದ್ದಾರೆ.


Spread the love