ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಕೇರಳ ನೆರೆ ಪರಿಹಾರ ನಿಧಿಗೆ 10 ಲಕ್ಷ ದೇಣಿಗೆ
ಮಂಗಳೂರು : ತಿರುಮಲ ತಿರುಪತಿಯಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ 10 ಲಕ್ಷ ದೇಣಿಗೆಯನ್ನು ಕೇರಳ ರಾಜ್ಯ ನೆರೆ ಪರಿಹಾರ ನಿಧಿಗೆ ನೀಡಿದರು .
ಕೇರಳ ರಾಜ್ಯ ಸರ್ಕಾರದ ವಿತ್ತ ಸಚಿವರಾದ ಥೋಮಸ್ ಐಸಾಕ್ ರವರು ತಿರುಮಲ ಶ್ರೀ ಕಾಶಿ ಮಠಕ್ಕೆ ಭೇಟಿ ನೀಡಿ ಶ್ರೀಗಳವರ ಆಶೀರ್ವಾದ ಪಡಕೊಂಡರು , ಬಳಿಕ ಈ ಕೆಲ ತಿಂಗಳ ಹಿಂದೆ ಕೇರಳ ರಾಜ್ಯದಲ್ಲಿ ನೆರೆ ಯಿಂದ ಪೀಡಿತರಾದ ಬಗ್ಗೆ ಶ್ರೀಗಳವರಿಗೆ ವಿವರಿಸಿದರು , ಶ್ರೀ ಕಾಶೀ ಮಠ ಸಂಸ್ಥಾನ ಹಾಗೂ ಜಿ . ಯಸ್ . ಬಿ . ಸ್ವಯಂಸೇವಕರು ನೆರೆ ಪರಿಹಾರ ನೀಡುವ ಸಂದರ್ಭದಲ್ಲಿ ಯಾವುದೇ ರೀತಿಯ ಜಾತಿ – ಮತ ಭೇದವಿಲ್ಲದೆ ಸಮಾನ ರೀತಿಯಲ್ಲಿ ಸಹಾಯ ಹಸ್ತ ನೀಡಿರುವಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು . ಕೇರಳದ ಗೌಡ ಸಾರಸ್ವತ ಸಮಾಜದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಶ್ರೀಗಳವರು ಬರ ಪರಿಹಾರ ನೀಡಲು ಮುತುವರ್ಜಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮುಂಬೈ ಜಿ ಎಸ್ ಬಿ ಸೇವಾ ಮಂಡಲದ ಆರ್ . ಜಿ . ಭಟ್ , ಭುವನೇಂದ್ರ ವೃಕ್ಷ ವಾಟಿಕೆ ಭಾಗಮಂಡಲದ ಪದಾಧಿಕಾರಿ ಜಿ . ಗುರುಪ್ರಸಾದ್ ಕಾಮತ್ , ಬಂಟ್ವಾಳದ ಉದ್ಯಮಿ ಬಿ . ವಿಜಯಾನಂದ ಶೆಣೈ , ಕೊಚ್ಚಿಯ ವಿಶ್ವನಾಥ್ ಭಟ್ ಹಾಗೂ ತಿರುಮಲ ಶ್ರೀ ಕಾಶೀ ಮಠದ ಕಾರ್ಯದರ್ಶಿ ಕಾಪು ನಾರಾಯಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು .