ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್
ಉಡುಪಿ : ಶ್ರೀ ಕೃಷ್ಟ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಕಾರ್ಯಕ್ರಮ ಸಂಬಂಧ ಉಡುಪಿ ನಗರದಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದ ಹಾಗೆ ನೋಡಿಕೊಳ್ಳಲು ಜಿಲ್ಲಾ ಪೊಲೀಸ್ ವತಿಯಿಂದ ವ್ಯಾಪಕ ಬಂದೋಬಸ್ತ್ ಹಾಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಶಾ ಜೇಮ್ಸ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಬಂದೋಬಸ್ತ್ಗೆ ಒಟ್ಟು ಓರ್ವ ಡಿ.ವೈ.ಎಸ್.ಪಿ, 4 ಪೊಲೀಸ್ ನಿರೀಕ್ಷಕರು, 13 ಪೊಲೀಸ್ ಸಬ್ಇನ್ಸ್ಪೆಕ್ಟರ್ಸ್, 39 ಸಹಾಯಕ ಪೊಲೀಸ್ ಸಬ್ಇನ್ಸ್ಪೆಕ್ಟರ್ಸ್, 236 ಪೊಲೀಸ್ ಸಿಬ್ಬಂದಿ, 40 ಹೋಂ ಗಾರ್ಡ್, 1 ಕ್ವಿಕ್ ರಿಯ್ಯಾಕ್ಷನ್ ಟೀಮ್ (ಕ್ಯೂ.ಆರ್.ಟಿ.), 1 ವಿದ್ವಂಸಕ ಕೃತ್ಯ ತಪಾಸಣಾ ತಂಡ, 3 ಜಿಲ್ಲಾ ಸಶಸ್ತ್ರ ಪಡೆಯ ತುಕಡಿ ಹಾಗೂ 2ಕೆ.ಎಸ್.ಆರ್.ಪಿ. ತುಕಡಿಗಳನ್ನು ಬಳಸಿಕೊಳ್ಳಲಾಗಿದೆ.
ದೇವಸ್ಥಾನ, ಕಾರ್ಯಕ್ರಮಗಳ ಸ್ಥಳ, ಅನ್ನಸಂತರ್ಪಣೆ, ಮೊಸರುಕುಡಿಕೆ ಮೆರವಣಿಗೆ ಸ್ಥಳ ಮುಂತಾದ ಸ್ಥಳಗಳಲ್ಲಿ ಬಂದೋಬಸ್ತ್ ಬಗ್ಗೆ ಅಧಿಕಾರಿ / ಸಿಬ್ಬಂದಿಯವರನ್ನು ನಿಯುಕ್ತಿಗೊಳಿಸಿದ್ದು, ಸಂಚಾರ ನಿಯಂತ್ರಣಕ್ಕೆ ಸಂಚಾರ ವಿಭಾಗದ ಅಧಿಕಾರಿ / ಸಿಬ್ಬಂದಿಯವರನ್ನು ಬಳಸಿಕೊಳ್ಳಲಾಗಿದೆ. ದ್ವಿಚಕ್ರ ಮೊಬೈಲ್ ರೌಂಡ್ಸ್ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ಆಯಕಟ್ಟಿನ 5 ಕಡೆಗಳಲ್ಲಿ ವೀಡೀಯೋಗೃಫಿ ನಡೆಸಲಾಗುವುದು ಹಾಗೂ 2 ವೀಡೀಯೋಗೃಫಿಯನ್ನು ಮೊಸರುಕುಡಿಕೆ ಮೆರವಣಿಗೆಯಲ್ಲಿ ಬಳಸಿಕೊಳ್ಳಲಾಗುವುದು. ಸಿಸಿ ಕೆಮರಾ ವೀಕ್ಷಣೆಗೆ ಸಿಬ್ಬಂದಿಯವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀ ಕೃಷ್ಟ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಕಾರ್ಯಕ್ರಮ ಸಂಬಂಧ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತಾದಿಯವರು ತಮ್ಮ ವಾಹನಗಳನ್ನು ರಾಯಲ್ ಗಾರ್ಡನ್, ಕಲ್ಸಂಕದಲ್ಲಿ ವಾಹನ ನಿಲುಗಡೆ ಮಾಡುವುದು. ಚಿನ್ನಾಭರಣವನ್ನು ಹಾಗೂ ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು. ಯಾವುದೇ ವದಂತಿಗಳಿಗೆ ಕಿವಿಗೊಡಬಾರದಾಗಿ ಸೂಚಿಸಿದ್ದಾರೆ.