ಶ್ರೀ ವೆಂಕಟ್ರಮಣ ದೇವರ ನೂತನ ಚಂದ್ರ ಮಂಡಲ ವಾಹನ ಹಸ್ತಾಂತರ

Spread the love

ಶ್ರೀ ವೆಂಕಟ್ರಮಣ ದೇವರ ನೂತನ ಚಂದ್ರ ಮಂಡಲ ವಾಹನ ಹಸ್ತಾಂತರ

ಮಂಗಳೂರು: ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಶ್ರೀ ದೇವರ ಉತ್ಸವವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ಚಂದ್ರ ಮಂಡಲ ವಾಹನದ ಹಸ್ತಾಂತರ ಕಾರ್ಯಕ್ರಮ ಇಂದು ಕುಂಭಾಶಿಯಲ್ಲಿರುವ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ನಡೆಯಿತು.

ಶ್ರೀ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು .

ಜನವರಿ 20 ಸೋಮವಾರ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಪಾದುಕಾ ಪುರಪ್ರವೇಶ , ನೂತನ ಚಂದ್ರ ಮಂಡಲ ವಾಹನ ಪುರಪ್ರವೇಶ , ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪುರಪ್ರವೇಶ ನಡೆಯಲಿದೆ .

ಶ್ರೀ ವೀರ ವೆಂಕಟೇಶ ದೇವರ ಉತ್ಸವ ಕಾರ್ಯಕ್ರಮ ಉದ್ಧಿಶ್ಯ ನೂತನವಾಗಿ ನಿರ್ಮಿಸಲಾದ ಚಂದ್ರಮಂಡಲ ವಾಹನದ ಪುರಪ್ರವೇಶ ಕಾರ್ಯಕ್ರಮ ಜೊತೆಗೆ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಲಾದ ಶ್ರೀ ಗುರು ಪಾದುಕಾ ಯಾತ್ರೆಯ ಪುರಪ್ರವೇಶ ಹಾಗೂ ಮಂಗಳೂರು ರಥೋತ್ಸವ ಪ್ರಯುಕ್ತ ಶ್ರೀ ದೇವಳಕ್ಕೆ ಆಗಮಿಸಲಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ಪುರಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದ್ದು ಅಂದು ರಾತ್ರಿ 7: ೦೦ ಗಂಟೆಗೆ ಸರಿಯಾಗಿ ಡೊಂಗರಕೇರಿಯಲ್ಲಿರುವ ಕೆನರಾ ಹೈ ಸ್ಕೂಲ್ ಬಳಿಯಿಂದ ಮೆರವಣಿಗೆ ಹೊರತು ಡೊಂಗರಕೇರಿ , ನ್ಯೂ ಚಿತ್ರಾ ಜಂಕ್ಷನ್ ಮೂಲಕ ಬಿ . ಎಂ . ಹೈಸ್ಕೂಲ್ ರಸ್ತೆ , ರಥಬೀದಿ ಮೂಲಕ ಶ್ರೀ ದೇವಳಕ್ಕೆ ಭವ್ಯ ಮೆರವಣಿಗೆ ತಲುಪಲಿರುವುದು . ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಪಾಲ್ಗೊಂಡು ಶ್ರೀ ಹರಿ ಗುರು ಕೃಪೆಗೆ ಪಾತ್ರರಾಗಬೇಕಾಗಿ ಎಂದು ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .

ಚಿತ್ರ : ಮಂಜು ನೀರೇಶ್ವಾಲ್ಯ


Spread the love
Subscribe
Notify of

0 Comments
Inline Feedbacks
View all comments