ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ – ಹಿಮ ವರ್ಷ ಕೃತಿಗಳ ಬಿಡುಗಡೆ

Spread the love

ಶ್ರೀನಿವಾಸ ಜೋಕಟ್ಟೆ ಅವರ ಅಪರಿಚಿತ ವಾಸ್ತವ – ಹಿಮ ವರ್ಷ ಕೃತಿಗಳ ಬಿಡುಗಡೆ

ಮುಂಬಯಿ: ಮುಂಬಯಿಯ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಎರಡು ಲೇಖನ ಸಂಕಲನಗಳ 25ನೇ ಕೃತಿ `ಅಪರಿಚಿತ ವಾಸ್ತವ’ ಮತ್ತು 26ನೇ ಕೃತಿ `ಹಿಮ ವರ್ಷ’ ಇಂದಿಲ್ಲಿ ಭಾನುವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹÀದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, `ಸಾಫಲ್ಯ’ ಕನ್ನಡ ತ್ರೈಮಾಸಿಕದ ಸಂಪಾದಕ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿüಯಾಗಿ ನಾಡಿನ ಹೆಸರಾಂತ ಚಿಂತಕ ಸಾಹಿತಿ ನಾಡಿನ ಹೆಸರಾಂತ ಕವಿ, ಕಲಾವಿದ ನಟೇಶ್ ಪೆÇಲೆಪಲ್ಲಿ ಅಹೋರಾತ್ರ, ಗೌರವ ಅತಿಥಿüಯಾಗಿ ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಾಳ್ ಹಾಗೂ ಜಯಲಕ್ಷಿ ್ಮೀ ಜೋಕಟ್ಟೆ ಉಪಸ್ಥಿತರಿದ್ದರು.

ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮಾತನಾಡಿ ಜೋಕಟ್ಟೆ ಸಹೃದಯಿ ಪತ್ರಕರ್ತರಾಗಿದ್ದು ಕಳೆದ 35ವರ್ಷಗಳಿಂದ ಬರಹದಲ್ಲಿ ತೊಡಗಿಸಿ ಕೊಂಡವರು. ಬಹಳ ಸರಳವಾದ ಭಾಷೆಯಲ್ಲಿ ಅವರ ಬರಹ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ. ಭಿನ್ನವಾದ ಸಕಾರಾತ್ಮಕ ಸಂಕಲ ರಚಿಸುವ ಇವರ ಕೃತಿಗಳಲ್ಲಿ ಸಾಮಾಜಿಕ ಜಾಗೃತಿ ತುಂಬಿದೆ ಎಂದರು.

ಮುಂಬಯಿ ಜೀವನದ ಕುರಿತು 25 ಪುಸ್ತಕಗಳನ್ನು ಬರೆದ ಜೋಕಟ್ಟೆ ಅವರು ನಿಗಮ ವ್ಯಕ್ತಿತ್ವವುಳ್ಳವರು. ಸಾಹಿತಿಯಾದ ವ್ಯಕ್ತಿ ಯಾವ ಪಂಗಡಕ್ಕೆ ಸೀಮಿತವಾಗಲ್ಲ. ಜೋಕಟ್ಟೆ ಅವರ ನಡತೆ ವಿನಮ್ರವಾಗಿದ್ದು ಸಮಾಜಪರ ಚಿಂತನ ಮಾಡುವವರು ಸ್ನೇಹಪರ ವ್ಯಕ್ತಿ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಜೀವಿಯೆಂದರೆ ನಮ್ಮ ಜೋಕಟ್ಟೆ. ಓದುಗನಿಗೆ ಬರೆಯುವ ದೇವರು ಇದ್ದಹಾಗೆ. ಸಾಹಿತಿಯಾದವನು ಜವಾಬ್ದಾರಿಯುತ ವ್ಯಕ್ತಿಯಾಗಿ ಬರೆಯಲು ಕಡೆ ಗಮನ ವಹಿಸುವುದು ಸೂಕ್ತ. ಆ ನೆಲೆಯಲ್ಲಿ ಜೋಕಟ್ಟೆ ನಿಶ್ಚಿತವಾಗಿ ಕೆಲಸ ಮಾಡಿದ್ದಾರೆ ಎಂದÀು ನಟೇಶ್ ಪೆÇಲೆಪಲ್ಲಿ ಅಹೋರಾತ್ರ ತಿಳಿಸಿದರು.

ಜೋಕಟ್ಟೆ ಅವರು ಪತ್ರಕರ್ತನಾಗಿ ಒಬ್ಬ ಸಾಹಿತಿಯಾಗಿಬಹಳ ಬದ್ಧತೆಯಿಂದ ಬರೆಯಬಹುದು. ಜೋಕಟ್ಟೆ ಅವರ ಸಾಹಿತ್ಯ ಕೃಷಿ ನೋಡಿದಾಗ ಅವರ ಪ್ರವಾಸ ಸಾಹಿತ್ಯ ರಚನೆ ಗುರುತರವಾದದು. ಜೋಕಟ್ಟೆ ಅವರ ಸಾಹಿತ್ಯ ಸೇವೆ ಕನ್ನಡಕ್ಕೆ ಹಿಗೆಯೇ ಸದಾ ಸಲ್ಲುವಂತೆಯಾಗಲಿಯೆಂದು ಪಾಲೆತ್ತಾಡಿ ಶುಭ ಹಾರೈಸಿದರು.

ಅಚ್ಯುತಾನಂದ ಮಂಡ್ಯ ಅವರ ಶ್ರೀರಾಮ ಪ್ರಕಾಶನ ಪ್ರಕಟಿತ `ಅಪರಿಚಿತ ವಾಸ್ತವ’ ಕೃತಿಯನ್ನು ಪ್ರಸಿದ್ಧ ರಂಗಕರ್ಮಿ ಮಂಜುನಾಥಯ್ಯ ಹಾಗೂ ಬೆಳಗಾವಿ ಅಲ್ಲಿನ ಆದಿತ್ಯ ಪಬ್ಲಿಕೇಶನ್ಸ್ ಪ್ರಕಟಿಸಿರುವ `ಹಿಮ ವರ್ಷ’ ಸಂಕಲನವನ್ನು ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಪರಿಚಯಿಸಿದರು.

ಒಳ್ಳೆಯ ಗ್ರಹಿಕೆ, ಓದು, ಪದಗಳ ಹಿಡಿತ ಪತ್ರಕರ್ತನ ಅವಶ್ಯವಾಗಿದೆ. ಭಾಷೆ ಶಬ್ಧಗಳ ಹಿಡಿತ ಪತ್ರಕರ್ತನ ಅಸ್ತ್ರವಾಗಿದೆ. ಇದು ಜೋಕಟ್ಟೆ ಅವರ ಸಾಧನೆಯಲ್ಲಿ ಅಡಕವಾಗಿವೆ. ಆಳವಾದ ಅಭ್ಯಾಸವೇ ಜೋಕಟ್ಟೆ ಅವರ ಸಂಕಲನಕ್ಕೆ ಪೂರಕವಾಗಿವೆ ಎಂದÀು ಕೃತಿ ಪರಿಚಯಿಸಿ ಮಂಜುನಾಥಯ್ಯ ಅಭಿಪ್ರಾಯ ಪಟ್ಟರು.

ಹಿಮ ವರ್ಷ ಸಂಕಲನ ವಿಶ್ಲೇಷಿಸಿ ಹರೀಶ್ ಹೆಜ್ಮಾಡಿ ನುಡಿದರು.

ಕೃತಿಕರ್ತ ಶ್ರೀನಿವಾಸ ಜೋಕಟ್ಟೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಕರ್ನಾಟಕ ಮಲ್ಲಕ್ಕೆ 25 ವರ್ಷ ತುಂಬಿದ ಸಂತೋಷದ ಶುಭ ಸಂದರ್ಭದಲ್ಲಿ ನನ್ನ ಈ 25ನೆಯ ಈ ಕೃತಿಯನ್ನು ಹೊರ ತರುತಿರುವುದು ತುಂಬಾ ಅಭಿಮಾನ ವಡುವೆಗಳಿಗೆ ನನ್ನ ಪಾಲಿಗೆ ದಕ್ಕಿದೆ. ಜೋಕಟ್ಟೆ ಅವರು ತಮ್ಮ ಕೃತಿ ಬಿಡುಗಡೆಯ ಕಾರ್ಯಕ್ರಮಕ್ಕೆ ಬಂದ ಅತಿಥಿsಗಳಿಗೆ ಹಾಗೂ ಎಲ್ಲಾ ಸಾಹಿತ್ಯ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ವ್ಯಕ್ತ ಪಡಿಸಿದರು.

ನಿಖಿತಾ ಸದಾನಂದ ಅವಿೂನ್ ಪ್ರಾರ್ಥನೆಯನ್ನಾಡಿದರು. ಶ್ರೀನಿವಾಸ ಜೋಕಟ್ಟೆ ಹಾಗೂ ಜಯಲಕ್ಷಿ ್ಮೀ ಜೋಕಟ್ಟೆ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ರಂಗ ನಿರ್ದೇಶಕ, ಕವಿ ಸಾ.ದಯಾ (ದಯಾನಂದ ಸಾಲ್ಯಾನ್) ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

ಆರ್ಚಕ ಶ್ರೀನಿವಾಸ ಉಡುಪ, ಡಾ| ಸುನೀತಾ ಎಂ.ಶೆಟ್ಟಿ, ಬಿ.ಎಸ್ ಕುರ್ಕಾಲ್, ಡಾ| ವ್ಯಾಸರಾಯ ನಿಂಜೂರು, ಹೆಚ್.ಬಿ.ಎಲ್ ರಾವ್, ಸುಬ್ರಾಯ ಭಟ್, ರವಿ.ರಾ ಅಂಚನ್, ಎಕ್ಕಾರು ದಯಾಮಣನಿ ಎನ್.ಶೆಟ್ಟಿ, ಡಾ| ಕರುಣಾಕರ್ ಎನ್.ಶೆಟ್ಟಿ, ಅಶೋಕ್ ಎಸ್.ಸುವರ್ಣ, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಮೋಹನ್ ಮಾರ್ನಾಡ್, ರಮೇಶ್ ಶಿವಪುರ, ಜಿ.ಟಿ ಆಚಾರ್ಯ, ಡಾ| ಭರತ್‍ಕುಮಾರ್ ಪೆÇಲಿಪು, ಓಂದಾಸ್ ಕಣ್ಣಂಗಾರ್, ರಮೇಶ್ ಬಿರ್ತಿ, ದುರ್ಗಪ್ಪ ಯು.ಕೋಟಿಯವರ್, ಪದ್ಮನಾಭ ಸಸಿಹಿತ್ಲು, ವಾಸುದೇವ ಮಾರ್ನಾಡ್, ತೋನ್ಸೆ ಸಂಜೀವ ಪೂಜಾರಿ, ಜಯಕರ ಡಿ.ಪೂಜಾರಿ, ಸುಶೀಲಾ ಎಸ್.ದೇವಾಡಿಗ, ಅನಿತಾ ಪಿ.ಪೂಜಾರಿ ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ರು ಉಪಸ್ಥಿತರಿದ್ದು ಜೋಕಟ್ಟೆ ಅವರನ್ನು ಅಭಿನಂದಿಸಿದರು.


Spread the love