ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವುದಾಗಿ ವಂಚನೆ – ಆರೋಪಿ ಸೆರೆ

Spread the love

ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವುದಾಗಿ ವಂಚನೆ – ಆರೋಪಿ ಸೆರೆ

ಮಂಗಳೂರು:  ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 133/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ ಮತ್ತು 308(2), 318(2), 336(3),112 ಬಿ.ಎನ್.ಎಸ್ ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ವಾಟ್ಸ್ ಆಫ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ 46,00,000/- ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿಯಾಗಿ ದೂರು ನೀಡಿದಂತೆ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೊಳ್ಳಲಾಗಿರುತ್ತದೆ.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪಿರ್ಯಾದಿದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ ರೂ 10,00,000/- ಹಣ ವರ್ಗಾವಣೆಯಾಗಿದ್ದು, ನಂತರದಲ್ಲಿ ಸದ್ರಿ ಬ್ಯಾಂಕ್ ಖಾತೆಯಿಂದ ಕೇರಳ ಮೂಲದ ಆಯಿಷಾ ಹಾದಿಯಾ ತಂದೆ: ಆಶ್ರಫ್ ಪಿ.ಟಿ ವಿಳಾಸ: ಚಂದುಪರಪತ್, ಕೊಡುವಲ್ಲಿಅಂಚೆ, ಕ್ಯಾಲಿಕಟ್, ಕೇರಳ ರಾಜ್ಯ ಎಂಬಾತಳ ಬ್ಯಾಂಕ್ ಖಾತೆಗೆ ರೂ,5,00,000/- ರೂ ಹಣ ಬಂದಿದ್ದು, ಈ ಬಗ್ಗೆ ತನಿಖೆ ಕೈಗೊಂಡಾಗ ಆಯಿಷಾ ಹಾದಿಯಾ ರವರ ಗಂಡ ಜುನೈದ ಎ ಕೆ (32) ತಂದೆ: ಅಬ್ದುಲ್ ಖಾದರ ವಾಸ: ಅಚನ್ ಕಂಡಿಯಿಲ್ ಮಡವೂರು ಕುನ್ನಮಂಗಲಂ ಪೇರಿಂಗಲಂ ಕೋಝೀಕೋಡ್ ಕೇರಳ-673571, ಹಣವನ್ನು ವಿಥ್ ಡ್ರಾ ಮಾಡಿಸಿಕೊಂಡು ದುಬೈನಲ್ಲಿರುವ ಬಾಬು ಎಂಬಾಯನ ನಿರ್ದೇಶನದಂತೆ ಹಣವನ್ನು ಇಬ್ಬರು ಸೇರಿ ವಿಥ್ ಡ್ರಾ ಮಾಡಿ ಮನೀಬ್ ಎಂಬಾತನಿಗೆ ನೀಡಿ, ಪ್ರತಿಯಾಗಿ ರೂ 5,000 ರೂಗಳನ್ನು ಕಮಿಷನ್ ಪಡೆದಿರುವದಾಗಿದೆ, ಸದ್ರಿ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಜುನೈದ ಎ ಕೆ ಎಂಬಾತನನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಜರುಗಿಸಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸದ್ರಿ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರಾದ  ಅನುಪಮ್ ಅಗರವಾಲ್ ಐಪಿಎಸ್, ಡಿಸಿಪಿ (ಕಾಮತ್ತುಸು)  ಸಿದ್ದಾರ್ಥ ಗೋಯಲ್, ಡಿಸಿಪಿ (ಅ&ಸಂ)   ರವಿಶಂಕರ್ ರವರ ಮಾರ್ಗದರ್ಶನದಂತೆ, ಸೆನ್ ಠಾಣಾಧಿಕಾರಿಯಾದ ಎಸಿಪಿ  ರವೀಶ್ ನಾಯಕ, ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ   ಸತೀಶ್ ಎಂ ಪಿ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಮೋಹನ್ ರವರ ನೇತೃತ್ವದಲ್ಲಿ ಸದ್ರಿ ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ತನಿಖೆ ಮುಂದುವರೆದಿರುತ್ತದೆ.


Spread the love
Subscribe
Notify of

0 Comments
Inline Feedbacks
View all comments