ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

Spread the love

ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಲಾಕ್ಡೌನ್ ನಿಂದಾಗಿ ಸಭೆ ಸಮಾರಂಭ, ಮದುವೆ ನಡೆಸಿರುವುದರಿಂದ ಹೂವು ಬೆಳೆದವರು ನಷ್ಟ ಅನುಭವಿಸಿದ್ದಾರೆ 11,687 ಹೆಕ್ಟೆರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟ ಆಗದೆ ರೈತರಿಗೆ ನಷ್ಟವಾಗಿದೆ. ಹಾಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೇ ಕುಳಿತಿರುವ ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರು, ಅಗಸರಿಗೆ 5 ಸಾವಿರ ರೂ. ಪರಿಹಾರ ಸರ್ಕಾರ ಘೋಷಣೆ ಮಾಡಿದೆ. ಅಂದಾಜು 60,000 ಅಗಸರು, 2,30,000 ಕ್ಷೌರಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಒಟ್ಟು 7,75000 ಜನ ಇದ್ದಾರೆ .

ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆ ಹಾಗೂ ಉದ್ಯಮಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಚಾರ್ಜ್ ನಲ್ಲಿ 2 ತಿಂಗಳ ಬಿಲ್ ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿ ಬಡ್ಡಿ ರಹಿತವಾಗಿ 2 ತಿಂಗಳಿಗೆ ಮುಂದೂಡಲಾಗಿದೆ. ನೇಕಾರರಿಗೆ 109 ಕೋಟಿ ಸಾಲಮನ್ನ ಘೋಷಿಸಲಾಗಿದೆ. ಮೊದಲು 29 ಕೋಟಿ ಮನ್ನ ಮಾಡಲಾಗಿತ್ತು ಉಳಿದ ಹಣವನ್ನ ಸರ್ಕಾರ ಕೂಡಲೇ ಬಿಡುಗಡೆ ಮಾಡಲಾಗುತ್ತದೆ.

1 ಲಕ್ಷದ ಒಳಗಿನ ಸಾಲ ಕಟ್ಟಿದ ನೇಕಾರರಿಗೆ ಕಟ್ಟಿದ ಹಣವನ್ನ ವಾಪಸ್ ಕೊಡಲು ಸರ್ಕಾರ ತೀರ್ಮಾನಿಸಿದೆ. ನೇಕಾರ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ಹಣ ಅವರ ಖಾತೆಗೆ ಹಾಕಲಾಗುವುದು.


Spread the love