ಸಂಘಪರಿವಾರ ಪ್ರೇರಿತ ಹೀನ ಕೃತ್ಯಗಳನ್ನು ಸದೆಬಡಿದ ಪೊಲೀಸ್ ಕ್ರಮ ಅಭಿನಂದನಾರ್ಹ: ಸುಹೈಲ್ ಕಂದಕ್

Spread the love

ಸಂಘಪರಿವಾರ ಪ್ರೇರಿತ ಹೀನ ಕೃತ್ಯಗಳನ್ನು ಸದೆಬಡಿದ ಪೊಲೀಸ್ ಕ್ರಮ ಅಭಿನಂದನಾರ್ಹ: ಸುಹೈಲ್ ಕಂದಕ್

ಮಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪ್ರಿಯ ಆಡಳಿತಕ್ಕೆ ಜನತೆ ಮತ್ತೊಮ್ಮೆ ಅಧಿಕಾರ ನೀಡುತ್ತಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ, ಬಿಜೆಪಿ ಮತ್ತು ಸಂಘಪರಿವಾರ ಧಾರ್ಮಿಕ ಸೌಹಾರ್ದತೆಯನ್ನು ಕೆಡಿಸಿ ಲಾಭ ಪಡೆಯುವ ಕೀಳು ಮಟ್ಟದ ಕಾರ್ಯಗಳನ್ನು ಮಾಡುತ್ತಿವೆ, ಚಾಮರಾಜನಗರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಸ್ವತಃ ದೇವಾಲಯದ ಧ್ವಜವನ್ನು ಸುಟ್ಟು ಕೋಮುಗಲಭೆ ನಡೆಸಲು ನಡೆಸಿದ ಹುನ್ನಾರವನ್ನು ಯಶಸ್ವಿಯಾಗಿ ಭೇದಿಸಿದ ಪೋಲೀಸರ ಸಮಯೋಚಿತ ಕ್ರಮ ಅಭಿನಂಧನಾರ್ಹ ಎಂದು ಸುಹೈಲ್ ಕಂದಕ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರಿ ಶಕ್ತಿಗಳು ಚಲೋ ನಡೆಸಿ ಸಾಮರಸ್ಯವನ್ನು ಕೆಡಿಸುವ ಯತ್ನ ನಡೆಸಿ ಹೀನಾಯವಾಗಿ ವಿಫಲವಾಗಿ ಈಗ ಬೇರೆ ರೀತಿಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ, ಜಿಲ್ಲೆಯ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವ ನೆಪದಲ್ಲಿ ಅವರ ನೈತಿಕ ಸ್ಥೈರ್ಯವನ್ನು ಅಡಗಿಸುವ ಯತ್ನವನ್ನು ಸಂಘಪರಿವಾರಿ ಶಕ್ತಿಗಳು ಮಾಡುತ್ತಿವೆ, ಪುತ್ತೂರು ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ನಿಷ್ಠಾವಂತ ಅಧಿಕಾರಿ ಅಬ್ದುಲ್ ಖಾದರ್ ಖದರಿಗೆ ಬೆದರಿರುವ ಹೇಡಿ ಸಂಘಪರಿವಾರಿ ಶಕ್ತಿಗಳು ಪ್ರತಿಭಟನೆಯ ನೆಪದಲ್ಲಿ ಅವರ ತೇಜೋವದೆಗೆ ಇಳಿದಿವೆ, ಪ್ರತಿಭಟನೆ ಸಂಧರ್ಭದಲ್ಲಿ ಜಗದೀಶ್ ಕಾರಂತ ಕೋಮುಗಲಭೆಯನ್ನು ನೆನಪಿಸುತ್ತಾನೆ, ಆದರೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಬೆಂಬಲ ಯಾವತ್ತೂ ಅಬ್ದುಲ್ ಖಾದರ್ ರಂತಹ ನಿಷ್ಠಾವಂತ ಅಧಿಕಾರಿಗಳಿಗೆ ಇದೆ.

ಸಂಘಪರಿವಾರಿ ಶಕ್ತಿಗಳು ಮುಂದಿನ ದಿನಗಳಲ್ಲಿ ಕೋಮು ಸಾಮರಸ್ಯವನ್ನು ಕೆಡಿಸುವ ಉದ್ದೇಶದಿಂದ ಮಸೀದಿ ಮಂದಿರಗಳನ್ನು ಅಪವಿತ್ರಗೊಳಿಸುವುದು , ಪಾಕಿಸ್ತಾನದ ಧ್ವಜ ಆರೋಹಣ ಮಾಡುವುದು , ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮ ನಿಂದನೆ ಮಾಡುವುದು ಮುಂತಾದ ಕೃತ್ಯಗಳಿಗೆ ಇಳಿಯುವ ಸಾಧ್ಯತೆಗಳು ಹೆಚ್ಚು ಆದರಿಂದ ರಾಜ್ಯದ ಪ್ರಜ್ಞಾವಂತ ನಾಗರಿಕರು ಇಂತಹ ವಿಚ್ಛಿದ್ರಕಾರಿ ಶಕ್ತಿಗಳ ಯಾವುದೇ ಕುತಂತ್ರಗಳಿಗೆ ಮಾರು ಹೋಗದೆ ತಮ್ಮ ಸಂಯಮವನ್ನು ಕಾಪಾಡಿಕೊಂಡು ರಾಜ್ಯದ ಕೋಮು ಸಾಮರಸ್ಯವನ್ನು ಉಳಿಸಬೇಕು ಎಂದು ಸುಹೈಲ್ ಕಂದಕ್ ಮಾಧ್ಯಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


Spread the love