ಸಂಸ್ಕಾರಗಳ ಉಳಿವಿಗೆ ಮುಂಬಯಿ ಪ್ರಮುಖ ನೆಲೆಯಾಗಿದೆ : ಸುಬ್ರಹ್ಮಣ್ಯ ಸ್ವಾಮೀಜಿ

Spread the love

ಸಂಸ್ಕಾರಗಳ ಉಳಿವಿಗೆ ಮುಂಬಯಿ ಪ್ರಮುಖ ನೆಲೆಯಾಗಿದೆ : ಸುಬ್ರಹ್ಮಣ್ಯ ಸ್ವಾಮೀಜಿ

ಮುಂಬಯಿ: ನಮ್ಮಲ್ಲಿನ ಸಂಸ್ಕಾರ ಹೊಡೆಯದಿದ್ದರೆ ಬದುಕು ಎಂದಿಗೂ ಕಷ್ಟವಾಗದು. ಸಂಸ್ಕಾರಯುತ ಬದುಕಲ್ಲಿ ಮನೆ ಮನಗಳು ಹಿತವಾಗಿರುತ್ತವೆ. ಇಂದು ಊರಲ್ಲಿ ಸಂಸ್ಕಾರ ಉಳಿವು ಕಷ್ಟಕರವಾಗಿದ್ದರೂ ಸಂಸ್ಕೃತಿ ಉಳಿವಿನ ತವಕ ಇಂದು ಪರವೂರಿನ ಬಂಧುಗಳಲ್ಲಿದೆ. ಸಮಾಗಮ ಸಂಸ್ಕೃತಿಗೆ ದಕ್ಷಿಣ ಕನ್ನಡ ಜನತೆ ಸಂಸ್ಕಾರವುಳ್ಳವರು. ನಾವು ಸಂಸ್ಕಾರಗಳನ್ನು ಹೋದಲ್ಲಿ ಕೊಂಡೊಯ್ದು ಬೆಳೆಸಬಹುದು ಎನ್ನುವುದಕ್ಕೆ ಇದೇ ಯೋಜನೆ ನಿದರ್ಶನವಾಗಿದೆ. ಇಂತಕ ಯಾಂತ್ರೀಕ ಜೀವನದಲ್ಲೂ ಪರವೂರಿನಲ್ಲಿ ಸಂಸ್ಕೃತಿ-ಧರ್ಮ ಕಟ್ಟಿ ಬೆಳೆಸುವುದು ಸ್ತುತ್ಯರ್ಹ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃ ಷ್ಣ ಪಬ್ಲಿಕ್ ಟ್ರಸ್ಟ್‍ಗಳ `ಗೊಕುಲ’ ಪ್ರಸಿದ್ಧಿ ಶ್ರೀಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡದ ನವೀಕರಣಕ್ಕೆ ನೆರವೇರಿಸಲ್ಪಟ್ಟ ಶಿಲಾನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಸುಬ್ರಹ್ಮಣ್ಯಶ್ರೀ ಮಾತನಾಡಿ ಆಧುನಿಕ ಮಾಧ್ಯಮಗಳ ತವಕಕ್ಕೆ ಪೂರಕವಾದ ಸಂಸ್ಕಾರಕೇಂದ್ರಗಳ ಅವಶ್ಯವಿದ್ದು, ಸರ್ವರ ಸಹಯೋಗ ಮತ್ತು ಮಹೂರ್ತದ ಫಲವಾಗಿ ಏಳು ಮಹಡಿಗಳ ಬೃಹತ್ ಕಟ್ಟಡ ಸುಲಲಿತವಾಗಿ ಶೀಘ್ರವೇ ನಿರ್ಮಾಣ ಆಗಲಿದೆ. ಏಳು ಎನ್ನುವುದೇ ಶುಭಸಂದೇಶ. ಏಳು… ಏಳು… ಎಂದಾಗ ಆಶಯಪಟ್ಟ ಕಟ್ಟಡವೂ ತನ್ನಷ್ಟಕ್ಕೇ ಸುಗಮವಾಗಿ ಏಳುತ್ತದೆ. ಇದು ನಮ್ಮ ಪೂರ್ವಜರಿಂದ ನಾವು ರೂಢಿಸಿಕೊಂಡು ಬಂದ ಸಂಸ್ಕಾರದ ಫಲವಾಗಿದೆ. ಆದರೆ ಹಳೆ ಅನುಭವಗಳನ್ನು ಪ್ರಸಕ್ತ ಪೇಟೆ ಮಕ್ಕಳಿಗೆ ಹೇಳಿದರೆ ಅವರಿಗದು ತಿಳಿಯದು. ಇಂತಹ ಪ್ರೇರಣೆ, ಸಂಸ್ಕಾರಗಳ ಉಳಿವಿಗೆ ಮುಂಬಯಿ ಪ್ರಮುಖ ನೆಲೆಯಾಗಿದೆ. ಮುಂಬಯಿ ಸಂಸ್ಕಾರದ ನೆಲೆಯಾಗಿದೆ. ಇಲ್ಲಿನ ಗೋಕುಲಕ್ಕೆ ಕೃಷ್ಣಾವತಾರದಲ್ಲಿ ಸುರೇಶ್ ರಾವ್ ಸಾರಥ್ಯ ವಹಿಸಿ ಮುನ್ನಡೆಯುತ್ತಿರುವುದು ಅಭಿನಂದನೀಯ. ಶೀಘ್ರವೇ ಗೋಕುಲ ಸರ್ವ ಸಮಾಜದ ಭಕ್ತಿಯನೆಲೆ ಆಗುತ್ತಾ ಸುವರ್ಣ ಸೌಧವಾಗಿ ಬೆಳೆಯಲಿ ಎಂದು ಆಶಯ ವ್ಯಕ್ತ ಪಡಿಸಿದರು.

ಪರ್ಯಾಯದಲ್ಲಿನ ಉಡುಪಿ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಅನುಗ್ರಹÀಗಳೊಂದಿಗೆ ಉಭಯ ಸಂಸ್ಥೆಗಳ ಮುಖಸ್ಥರುಗಳು ಮೆರವಣಿಗೆಯಲ್ಲಿ ಹೊರಕಾಣಿಕೆ ಮೂಲಕ ಶಿಲಾನ್ಯಾಸಕ್ಕೆ ಸಮರ್ಪಿಸಿದರು. ನಂತರ ವಾದ್ಯನಾದ್ಯದ ವೇದಮಂತ್ರಗಳೊಂದಿಗೆ ಹರೇ ಶ್ರೀನಿವಾಸ.. ಗೋವಿಂದ ಹರೇ ಗೋವಿಂದ ಉದ್ಗಾರಗಳೊಂದಿಗೆ ಅಭಿಜಿತ ಮಹೂರ್ತದ ಶುಭಘಳಿಗೆಯಲ್ಲಿ ನಡೆಸಲ್ಪಟ್ಟ ಶಿಲಾನ್ಯಾಸ ಕಾರ್ಯ ಕ್ರಮದಲ್ಲಿ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲು ಇದರÀ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಉಪಸ್ಥಿತರಿದ್ದು ತಮ್ಮ ದಿವ್ಯ ಹಸ್ತಗಳಿಂದ ಶಿಲಾನ್ಯಾಸ ನೆರವೇರಿಸಿ ನೆರೆದ ಸದ್ಭಕ್ತರಿಗೆ ಮಂತ್ರಾಕ್ಷೆಯನ್ನಿ ತ್ತು ಹರಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷ ಹಾಗೂ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಕಾರ್ಯಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಘನಾಧ್ಯಕ್ಷತೆಯಲ್ಲಿ ಜರಗಿದ ಭವ್ಯ ಸಮಾರಂಭಕ್ಕೆ ಪಲಿಮಾರುಶ್ರೀಗಳು ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಗೋಕುಲ ಯೋಜನೆಯ ಪುಸ್ತಿಕೆ ಅನಾವಣಗೊಳಿಸಿದರು.

ಅತಿಥಿü ಗಣ್ಯರುಗಳಾಗಿ ನಗರಸೇವಕಿ ರಾಜಶ್ರೀ ಶಿರ್ವಾಡ್ಕರ್, ರಾಜಕೀಯ ಧುರೀಣ ಸಂತೋಷ್ ಡಿ.ಶೆಟ್ಟಿ, ಸಮಾಜ ಸೇವಕರುಗಳಾದ ಪ್ರಭಾಕರ ಎಲ್.ಶೆಟ್ಟಿ, ಜಯ ಸಿ.ಸುವರ್ಣ, ವಿಜಯ್ ವಾಧ್ವಾ, ಧರ್ಮಪಾಲ್ ಯು. ದೇವಾಡಿಗ, ವಿರಾರ್ ಶಂಕರ್ ಶೆಟ್ಟಿ, ಬಿ.ಆರ್ ಶೆಟ್ಟಿ, ಜಯರಾಮ ಎನ್.ಶೆಟ್ಟಿ, ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಡಾ| ಎಂ.ಎಸ್.ಆಳ್ವ, ಬಿ.ನಾರಾಯಣ್, ಕೃಷ್ಣ ವೈ.ಶೆಟ್ಟಿ, ಪ್ರಕಾಶ್ ಆಚಾರ್ಯ ರಾಮಕುಂಜ (ಪೇಜಾವರ ಮಠ), ವಿಷ್ಣು ಕಾರಂತ ಚೆಂಬೂರು (ಸುಬ್ರಹ್ಮಣ್ಯ ಮಠ), ಕೈರಬೆಟ್ಟು ವಿಶ್ವನಾಥ ಭಟ್ (ಶ್ರೀಕೃಷ್ಣ ವಿಠಲ ಪ್ರತಿಷ್ಠಾನ), ಸುಧೀರ್ ಆರ್.ಎಲ್ ಶೆಟ್ಟಿ, ಎನ್.ಎನ್ ಪಾಲ್ (ಜಿಎಸ್‍ಬಿ ಸಮಾಜ ವಡಲಾ), ನಿತ್ಯಾನಂದ ಡಿ.ಕೋಟ್ಯಾನ್, ರವಿ ಎಸ್.ದೇವಾಡಿಗ, ಐ.ಜೆ ರಾವ್, ಅಮೃತ ಸೊಮೇಶ್ವರ, ಚಂದ್ರಶೇಖರ ಆರ್.ಬೆಳ್ಚಡ, ಡಾ| ಎಸ್.ಎಂ ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ಜಯಕೃಷ್ಣ ಎ.ಶೆಟ್ಟಿ, ಜಿ.ಎಸ್ ನಾಯಕ್, ಸುಬ್ರಹ್ಮಣ್ಯ ರಾವ್, ಕೆ.ಎಸ್ ರಾವ್, ಡಾ| ಪಿ.ಜಿ ರಾವ್, ಆನಂದ ಶೆಟ್ಟಿ, ಕಮಲಾಕ್ಷ ಜಿ.ಸರಾಫ್ ಸೇರಿದಂತೆ ಅನೇಕ ಮಹಾನೀಯರು ಉಪಸ್ಥಿತರಿದ್ದು ಮನಸ್ಸು ಭಕ್ತಿಪೂರ್ವಕವಾಗಿ ಒಂದೊಂದು ಶಿಲೆಗಳನ್ನು ಗೋಕುಲ ಯೋಜನೆÉಗೆ ಅರ್ಪಿಸಿ ಶುಭಾರೈಸಿದರು.

ಪಲಿಮಾರುಶ್ರೀ ಅನುಗ್ರಹ ವಚನಗಳನ್ನಾಡಿ ಮುಂಬಯಿ ಸರ್ವರ ಆದರ್ಶದ ನಾಡು ಮತ್ತು ಒಗ್ಗಟ್ಟಿನ ಮನೋಭಾವಿಗಳ ಪವರೂರು. ಇಂತಹ ನಾಡಲ್ಲಿ ನಮ್ಮವರ ಏಳು ಉಪ್ಪರಿಗೆಯ ದೊಡ್ಡದಾದ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು ಅದೃಷ್ಟದ ಸಂಕೇತ ಇದಕ್ಕೆ ಖಂಡಿತಾ ಬಾರದು ಸಂಶಯ. ಎಲ್ಲಾ ಸಮುದಾಯಗಳ ಭಕ್ತರಾಗಮಿಸಿ ಶಿಲಾನ್ಯಾಸದಲ್ಲಿ ಪಾಲ್ಗೊಂಡಿದ್ದರೆ ಅಂದಮೇಲೆ ಸುಲಭವಾಗಿಯೇ ಯೋಜನೆ ಕೂಡುವುದು. ಆದುದರಿಂದಲೇ ಇಲ್ಲಿನ ಗೋಕುಲ ಆಧ್ಯಾತ್ಮದ ಬಿಗ್ ಬಜ್ಹಾರ್ ಇದಂತೆ. ಎಲ್ಲಿ ಚಪ್ಪಲಿ ಇಡಲು ಮತ್ತು ಕಾರು ನಿಲ್ಲಿಸುವ ಭಯ ಭಕ್ತರಲ್ಲಿರುವುದು ಸಾಮಾನ್ಯ. ಅಲ್ಲಿ ಭಕ್ತರೇ ವಿರಳವಾಗಿರುತ್ತಾರೆ. ಆದರೆ ಇಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳುಳ್ಳ ಭವ್ಯ ಕಟ್ಟಡ ನಿರ್ಮಾಣವಾದಾಗ ಭಕ್ತರ ಬರ ಕಾಡದು. ಈ ಕಟ್ಟಡ ವರ್ಷದಲ್ಲೇ ನಿರ್ಮಿಸುವ ಶಕ್ತಿ ನಿಮಗಿದೆ. ಆದರೆ ನನ್ನ ನನ್ನ ಪರ್ಯಾಯ ಮುಗಿದ ಬಳಿಕವೇ ಸಿದ್ಧಗೊಳ್ಳುತ್ತಿರುವುದು ನನ್ನ ಪಾಲಿನ ಭಾಗ್ಯಕ್ಕೆ ಶ್ರೀಕೃಷ್ಣನ ಕೃಪೆಯಿದ್ದಂತಿದೆ. ದೇವಸ್ಥಾನ ಎಲ್ಲರ ಆಸ್ತಿ ಇಲ್ಲಿನ ಪೂಜೆಗಳು ಸರ್ವಸ್ವ ಎಂದರು.

ಶ್ರೀ ಗೋಪಾಲಕೃಷ್ಣನನ್ನು ಹೃದಯಗಳಲ್ಲಿರಿಸಿ ನಾವೆಲ್ಲರೂ ಯೋಜನೆಯುದ್ದಕ್ಕೂ ಗೋಪಾಲಕರಾದರೆ ಮಾತ್ರ ಬೇಗನೇ ಗೋಕುಲ ನಿರ್ಮಾಣವಾಗುತ್ತದೆ. ಮುಂಬಯಿಯಲ್ಲಿನ ಕಳೆದ ಎಪ್ಪತ್ತು ವರ್ಷಗಳಿಂದ ಭಕ್ತರಿಗೆ ಎಲ್ಲವನ್ನೂ ಸಿದ್ಧಿಸಿದ ಈ ಗೋಕುಲ ಭವನ ಕಾಮಧೇನುವಿದ್ದಂತೆ. ಸಮಾಜಮುಖಿ ಸೇವೆಗಳು ಕೃಷ್ಣನಿಗೆ ಪ್ರೀತ್ಯಾಧಾರವಾಗಿದ್ದು ಇದನ್ನೇ ಮೈಗೂಡಿಸಿರುವ ಮುಂಬಯಿ ಬಂಧುಗಳು ತುಳುನಾಡ ತವರೂರ ಹೃದಯವಿದ್ದತೆ. ನಿಮ್ಮಲ್ಲಿನ ಧರ್ಮಭಾವನೆ ಇನ್ನಷ್ಟು ಹೆಚ್ಚುತ್ತಾ ಉಚ್ಚಾಯಸ್ಥಿತಿಯನ್ನೇರಲಿ ಎಂದು ಕಮಲಾದೇವಿ ಅಸ್ರಣ್ಣ ಶುಭನುಡಿಗಳನ್ನಾಡಿ ದರು.

ನೂತನ ಗೋಕುಲ ಭನವವು ಧಾರ್ಮಿಕ ಮತ್ತು ಶಾಸ್ತ್ರೋಕ್ತವಾದ ಸೇವೆಗೆ ಪ್ರಧಾನ ಆದ್ಯತೆ ನೀಡಲಾಗುತ್ತಿದೆ. ವ್ಯವಹಾರಕ್ಕಿಂತ ಧಾರ್ಮಿಕ ಸೇವೆಗಳಿಗೆ ಪ್ರಧಾನ್ಯತೆಯೇ ನಮ್ಮ ಧ್ಯೇಯವಾಗಿದೆ. ಅಪಾರ ಶ್ರದ್ಧಾ, ಧ್ಯಾನತಾ, ಶ್ರೀಮಂತ ಬುದ್ಧಿವಂತಿಕೆ ಚಿಂತನೆವುಳ್ಳ, ಒಳ್ಳೆಯ ಮನಸ್ಸು, ಸ್ವಚ್ಛ ಹೃದಯ ಹಾಗೂ ಒಳ್ಳೆಯ ಸಾಮಾಜಿಕ ಚಿಂತನೆವುಳ್ಳವರ ಸಹಯೋಗದೊಂದಿಗೆ ಈ ಭವ್ಯಯೋಜನೆ ರೂಪುಗೊಳ್ಳಲಿದೆ ಎನ್ನುತ್ತಾ ಭವನದ ಮುಖದ್ವಾರದಿಂದ ಆರಂಭಗೊಂಡು ಎಲ್ಲಾ ಮಹಡಿಗಳ ಬಗ್ಗೆ ವಿಶ್ಲೇಷಿಸಿದರು. ಎಂದು ಅಧ್ಯಕ್ಷೀಯ ನುಡಿಗಳಲ್ಲಿ ಡಾ| ಸುರೇಶ್ ಎಸ್.ರಾವ್ ತಿಳಿಸಿದರು.

ಬೆಳಿಗ್ಗಿನಿಂದ ರಾಮಚಂದ್ರ ಕೋಟ್ಯಾನ್ ಬಳಗವು ವಾದ್ಯಘೋಷ ನಡೆಸಿದ್ದು, ಗೋಕುಲ ಕಲಾ ವೃಂದ ಸಯಾನ್, ಹರಿಕೃಷ್ಣ ಭಜನಾ ಮಂಡಳಿ ನವಿಮುಂಬಯಿ, ಗೋಪಾಲಕೃಷ್ಣ ಭಜನಾ ಮಂಡಳಿ ಅಂಧೇರಿ, ಗೋಕುಲ ಬಾಲ ಕಲಾವೃಂದ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ ವಿೂರಾರೋಡ್ ಮತ್ತಿತರ ತಂಡಗಳು ಭಜನೆಗೈದವು. ಜಿಪಿಟಿ ವಿಶ್ವಸ್ಥ ಸದಸ್ಯರುಗಳಾದ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್, ವಿದ್ವಾನ್ ಎಸ್.ಎನ್ ಉಡುಪ, ವೇ| ಮೂ| ಗುರುರಾಜ ಉಡುಪ, ವೇ| ಮೂ| ಕೃಷ್ಣರಾಜ ಉಪಾಧ್ಯಾಯ ತಮ್ಮ ಪೌರೋಹಿತ್ಯದಲ್ಲಿ ಭೂವರಹಾ ಯಾಗ ಹಾಗೂ ಇನ್ನಿತರ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಸುರೇಶ್ ರಾವ್, ಬಿಎಸ್‍ಕೆಬಿ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಶೈಲಿನಿ ಎ.ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಜೊತೆ ಕೋಶಾಧಿಕಾರಿ ಅವಿನಾಶ್ ಎಸ್.ಶಾಸ್ತ್ರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಾಣಿ ಆರ್.ಭಟ್, ಗೋಕುಲವಾಣಿ ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ಕಟ್ಟಡ ಸಮಿತಿ ಕಾರ್ಯಧ್ಯಕ್ಷ ಯು.ರವೀಂದ್ರ ರಾವ್, ಜಿಪಿಟಿ ವಿಶ್ವಸ್ಥ ಕಾರ್ಯದರ್ಶಿ ಎ.ಶ್ರೀನಿವಾಸ ರಾವ್, ವಿಶ್ವಸ್ಥರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ಪುರೋಹಿತರ ವೇದಘೋಷದೊಂದಿಗೆ ಸಮಾರಂಭ ಮೊಳಗಿತು. ಬಿಎಸ್‍ಕೆಬಿ ಗೌರವ ಕೋಶಾಧಿಕಾರಿ ಹರಿದಾಸ್ ಭಟ್ ಸ್ವಾಗತಿಸಿ ದಾನಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಉಪಸ್ಥಿತ ಶ್ರೀಗಳು ಅತಿಥಿüಗಳಿಗೆ ಶಾಲು ಹೊದಿಸಿ ಮಂತ್ರಾಕ್ಷೆ ಫಲಗಳನ್ನೀಡಿ ಗೌರವಿಸಿದರು. ವೇ| ಮೂ| ಪೆರ್ಣಂಕಿಲ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love