ಸಚಿವ ಪ್ರಮೋದ್ ರ ಅಭಿವೃದ್ಧಿ ಕೆಲಸಗಳನ್ನು ನೋಡಲಾಗದೆ ಬಿಜೆಪಿಯವರ ಹತಾಶ ಹೇಳಿಕೆ : ಕಾಂಗ್ರೆಸ್

Spread the love

ಸಚಿವ ಪ್ರಮೋದ್ ರ ಅಭಿವೃದ್ಧಿ ಕೆಲಸಗಳನ್ನು ನೋಡಲಾಗದೆ ಬಿಜೆಪಿಯವರ ಹತಾಶ ಹೇಳಿಕೆ : ಕಾಂಗ್ರೆಸ್

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು  ಪ್ರಮೋದ್ ಮಧ್ವರಾಜ್‍ರವರು ಮಂತ್ರಿಯಾದ ನಂತರ ಇಡೀ ರಾಜ್ಯ ಸಂಚರಿಸುತ್ತಿರುವುದರಿಂದ ತನ್ನ ಕ್ಷೇತ್ರದ ಜನರ ಕುಂದುಕೊರತೆಯನ್ನು ಆಲಿಸಲು ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್‍ಗಳಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯ 31 ಗ್ರಾಮಗಳಲ್ಲಿ ಒಟ್ಟು 66 ಜನಸಂಪರ್ಕ ಸಭೆಗಳನ್ನು ಮನೆ ಮನೆಗೆ ಆಹ್ವಾನ ಪತ್ರ ನೀಡಿ ಸರಕಾರದ 34 ಇಲಾಖೆಗಳ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಜನರ ಅಹವಾಲುಗಳನ್ನು ಪಡೆದು ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಮುಖಾಮುಖಿ ಕುಳ್ಳಿರಿಸಿ ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗಿದೆ. ತಾಂತ್ರಿಕ ಯಾ ಕಾನೂನು ತೊಡಕುಗಳಿರುವ ಭೂಮಿ ಹಾಗೂ ಇನ್ನಿತರ ಕೆಲವು ಸಮಸ್ಯೆಗಳ ಅರ್ಜಿಗಳನ್ನು ಮಾತ್ರ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಜನರಿಂದ ಬಂದ ಮೂಲಭೂತ ಸೌಕರ್ಯಗಳ ಬೇಡಿಕೆಗಳಾದ ನೀರು, ದಾರಿದೀಪ , ರಸ್ತೆ ಇನ್ನಿತರ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಇಲಾಖೆಗೆ ಜನರ ಮನವಿಯನ್ನು ಕಳುಹಿಸಿ ಆರ್ಥಿಕ ಸಂಪನ್ಮೂಲ ಲಭ್ಯತೆಯ ಆಧಾರದಲ್ಲಿ ಆದ್ಯತೆ ಮೇರೆಗೆ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ.

ಸಚಿವರ ನೇತೃತ್ವದಲ್ಲಿ ಪಕ್ಷದ ನಾಯಕರೊಂದಿಗೆ ಉಡುಪಿ ವಿಧಾನ ಸಭಾ ಕ್ಷೇತ್ರದ 209 ಬೂತ್ ಗಳಿಗೆ 2 ಬಾರಿ ಭೇಟಿ ನೀಡುವ ಕಾರ್ಯಕ್ರಮ ಮನೆಮನೆಗೆ ಆಹ್ವಾನ ಪತ್ರ ನೀಡಿ ಜನರ ಸವiಸ್ಯೆಗಳನ್ನು ದಾಖಲಿಸಿ ಅದನ್ನು ಪರಿಹರಿಸಲು ಪ್ರತೀ ಬೂತ್ ನಿಂದ ಕನಿಷ್ಠ 5 ಸ್ವಯಂ ಸೇವಕರನ್ನು 2 ನೇ ಸುತ್ತಿನ ಸಭೆಯಲ್ಲಿ ನೇಮಿಸಿ ಎಲ್ಲರಿಗೂ ಗುರುತು ಚೀಟಿ ಪೋಟೋ ತೆಗೆಯುವ ಕಾರ್ಯಕ್ರಮ ದೇಶದಲ್ಲಿಯೇ ಪ್ರಥಮ ಹಾಗೂ ಮಾದರಿ.

ಜನರ ಭಾವಚಿತ್ರಗಳನ್ನು ತೆಗೆದುಕೊಂಡು ಅದರಲ್ಲಿ ಸಚಿವರು ತನ್ನ ಭಾವಚಿತ್ರವನ್ನು ಅಳವಡಿಸಿ ಗುರುತು ಚೀಟಿಯನ್ನು ವಿತರಿಸಿ ಸರಕಾರದ ಯಾವುದೇ ಕಚೇರಿಗಳಲ್ಲಿ ತೆಗೆದುಕೊಂಡು ಹೋದಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸದೆ ಕೆಲಸ ಮಾಡುತ್ತಾರೆ ಎಂಬ ಆಶ್ವಾಸನೆ ನೀಡಿದ್ದಾರೆ ಎಂದು ನಗರ ಬಿಜೆಪಿಯ ಅಧ್ಯಕ್ಷ ಪ್ರಭಾಕರ ಪೂಜಾರಿ ಪತ್ರಿಕಾ ಪ್ರಕಟಣೆ ನೀಡಿದ್ದು ಸತ್ಯಕ್ಕೆ ದೂರವಾದುದು.

ಸಚಿವರ ಜನಸಂಪರ್ಕ ಸಭೆಗಳ ನಂತರ ನಡೆಯುತ್ತಿರುವ ಪ್ರತಿ ಬೂತ್ ಮಟ್ಟದ ಸಭೆಯಲ್ಲಿ ಸೇರುವ ಜನರನ್ನು ಹಾಗೂ ಜನ ಬೆಂಬಲವನ್ನು ನೋಡಿ ಅಲ್ಲದೇ ರೂ.1900 ಕೋಟಿಗೂ ಮಿಕ್ಕಿ ಅನುದಾನವನ್ನು ತಂದು ಸಚಿವರ ಅಭಿವೃದ್ಧಿ ಕೆಲಸಗಳನ್ನು ನೋಡಲಾಗದೆ ಬಿಜೆಪಿಯವರು ಹತಾಶರಾಗಿ ನೀಡುತ್ತಿರುವ ಈ ರೀತಿಯ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸತೀಶ್ ಅಮೀನ್ ಪಡುಕರೆ , ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಿಕಾ ಶೆಟ್ಟಿ , ಜ್ಯೋತಿ ಹೆಬ್ಬಾರ್ , ಸದಾಶಿವ ಅಮೀನ್ ಕಟ್ಟೆಗುಡ್ಡೆ , ಅಮೃತ್ ಶೆಣೈ, ಆರ್.ಕೆ ರಮೇಶ್ ಪೂಜಾರಿ ಹಾಗೂ ಜನಾರ್ಧನ್ ಭಂಡಾರ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love