ಸಪ್ಟೆಂಬರ್ 2: ಉಡುಪಿ ಜಿಲ್ಲೆಯಲ್ಲಿ 167 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಒಟ್ಟು 167 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11924 ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಉಡುಪಿಯ 92, ಕುಂದಾಪುರದ 19, ಕಾರ್ಕಳದ 52 ಹಾಗೂ ಇತರೆ ಜಿಲ್ಲೆಗಳ 4 ರೋಗಿಗಳು ಇದ್ದಾರೆ. 112 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 55 ಮಂದಿಗೆ ಲಕ್ಷಣಗಳು ಇಲ್ಲ.
ಪ್ರಾಥಮಿಕ ಸಂಪರ್ಕದಿಂದ 46, ಐಎಲ್ಐ ಲಕ್ಷಣಗಳಿರುವ 61, ‘ಸಾರಿ’ ಲಕ್ಷಣಗಳಿರುವ 2 ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 2 ಮಂದಿಗೆ ಸೋಂಕು ತಗುಲಿದ್ದು, 56 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 971 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬುಧವಾರ 812 ವರದಿಗಳು ನೆಗೆಟಿವ್ ಬಂದಿದ್ದು, 167 ಪಾಸಿಟಿವ್ ಬಂದಿವೆ. 357 ವರದಿಗಳು ಬರುವುದು ಬಾಕಿ ಇದೆ.
ಜಿಲ್ಲೆಯಲ್ಲಿ ಬುಧವಾರ 250 ಮಂದಿ ಗುಣಮುಖರಾಗಿದ್ದು ಇದುವರೆಗೂ 9601 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2221 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 102 ಮಂದಿ ಸಾವನಪ್ಪಿದ್ದಾರೆ.