ಸರಿಯಾಗಿ  ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ

Spread the love

“ಸರಿಯಾಗಿ  ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ

ಮೂಡಬಿದಿರೆ: ಮನಃಶಾಸ್ತ್ರಜ್ಞರಾಗ ಬಯಸುವವರು ಮೊದಲಿಗೆ ಇತರರ ಮಾತುಗಳನ್ನು ಶಾಂತಚಿತ್ತವಾಗಿ ಕೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. “ಸರಿಯಾಗಿ  ಆಲಿಸುವಿಕೆಯೇ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವ ಅಗತ್ಯತೆ ಎಂದು ಮನಶಾಸ್ತ್ರಜ್ಞ  ಅಕ್ಷರ ದಾಮ್ಲೆ ಅಭಿಪ್ರಾಯ ಪಟ್ಟರು.

ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಒಂದು ದಿನದ  ಉಪನ್ಯಾಸ ಕಾರ್ಯಗಾರವನ್ನು ಆಯೋಗಿಸಲಾಗಿತ್ತು. ಮನಃಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ  ಅಕ್ಷರ ದಾಮ್ಲೆ ಮಾತನಾಡಿ ಮನಃಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಲು ಬಯಸುವವರು ಮೊದಲಿಗೆ ಒಳ್ಳೆಯ ಕೇಳುಗರಾಗಬೇಕು. ಮನೋ ರೋಗಿಗಳ ಮನಸ್ಥಿತಿಯನ್ನು ಅರಿಯುವುದು, ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ ಮುಖೇನವಾಗಿ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಅತಿ ಮುಖ್ಯ ಎಂದರು.

 ರೋಗಿಗಳ ಮನಸ್ಥಿತಿಯನ್ನು ಸರಿಯಾಗಿ ಅರಿತ ನಂತರ ಚಿಕಿತ್ಸೆಗೆ ಮುಂದಾಗಬೇಕು. ರೋಗಿಗಳು ಆಪ್ತವಾಗಿ ಮಾತನಾಡುವಂತಹ ವಾತಾವರಣ ಸೃಷ್ಟಿಸುವುದು ಸಹ ಮನಃಶಾಸ್ತ್ರಜ್ಞನ ಕೆಲಸವಾಗಿರುತ್ತದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ರಾಘವೇಂದ್ರ, ರೋಸ್ ಉಪಸ್ಥಿತರಿದ್ದರು.


Spread the love