ಸಾಮಾಜಿಕ ಜಾಲತಾಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವಹೇಳನ – ಮಾನನಷ್ಟ ಮೊಕದ್ದಮೆ ದಾಖಲು

Spread the love

ಸಾಮಾಜಿಕ ಜಾಲತಾಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವಹೇಳನ – ಮಾನನಷ್ಟ ಮೊಕದ್ದಮೆ ದಾಖಲು

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಮಾನಹರಣ ಮಾಡಲಾಗುತ್ತಿದೆ ಎಂದು ಸುನಿಲ್ ಬಜಿಲಕೇರಿ ಎಂಬುವರ ವಿರುದ್ಧ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು, ನ್ಯಾಯಾಲಯದಲ್ಲಿ 5 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.

ಕೆದಿಲಾಯಸುನಿಲ್ ಬಜಿಲಕೇರಿ ಎಂಬುವರು ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​​ ಮಾಡುತ್ತಿದ್ದರು. ಇತ್ತೀಚೆಗೆ ಈ ಆರೋಪ ಜಾಸ್ತಿಯಾಗಿ ಹರಿದಾಡುತ್ತಿತ್ತು. ಈ ಹಿನ್ನೆಲೆ ಶಾಸಕರು ದ.ಕ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ಮೇಲಿನ ಆರೋಪದಿಂದ ಮನನೊಂದ ಅವರು ಬರೋಬ್ಬರಿ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದು, ಇದಕ್ಕಾಗಿ ₹5 ಲಕ್ಷ ಹಣವನ್ನು ನ್ಯಾಯಾಲಯದಲ್ಲಿ ಕೋರ್ಟ್ ಫೀಸ್ ಕಟ್ಟಿದ್ದಾರೆ.

ಮಾನನಷ್ಟ ಮೊಕದ್ದಮೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸದಂತೆ ತಡೆಯಾಜ್ಞೆ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಂಡ ಫಸ್ಟ್ ಸೀನಿಯರ್ ಸಿವಿಲ್ ನ್ಯಾಯಾಲಯವು, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆಸದಂತೆ ತಡೆಯಾಜ್ಞೆ ನೀಡಿದ್ದು, ಶಾಸಕರ ಪರವಾಗಿ ವಕೀಲ ಎಂ ಚಿದಾನಂದ್ ಕೆದಿಲಾಯ ವಾದಿಸಿದ್ದಾರೆ.


Spread the love