ಸಾಮಾಜಿಕ ಪರಿವರ್ತನೆಗೆ ಸಂಗೀತವು ಉತ್ತಮ ಕಲಾಮಾಧ್ಯಮ: -ಜಸ್ಟೀಸ್ ಫಣೀಂದ್ರ
ಉಡುಪಿ: ಸಂಗೀತಕ್ಕೆ ತಲೆಬಾಗದವರೇ ವಿರಳ. ಅಂತಹ ಅದ್ಭುತವಾದ ಶಕ್ತಿ ಸಂಗೀತಕ್ಕಿದೆ. ಜಾಗೃತಿ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸಲು ಸಂಗೀತವು ಉತ್ತಮ ಸಾಧನವಾಗಿದೆ. ಮನಸ್ಸಿನ ವಿಕಾರತೆಗಳನ್ನು ದೂರಮಾಡಿ, ಮಾನಸಿಕ ಸಮತೋಲನವನ್ನು ಕಾಯ್ದುಕೊಂಡು ಹೊಸ ಹೊಸ ವಿಚಾರಧಾರೆಗಳತ್ತ ಮನಸನ್ನು ಹೊರಳಿಸುವಲ್ಲಿ ಸಂಗೀತ ಕಲೆ ಅತ್ಯಂತ ಪ್ರಭಾವಯುತವಾದ ಸ್ಥಾನವಹಿಸುತ್ತದೆ. ತನ್ಮೂಲಕ ಸಾಮಾಜಿಕ ಪರಿವರ್ತನೆಗೆ ಹಾದಿಮಾಡಿಕೊಟ್ಟು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಸಿಗುತ್ತದೆ’ ಎಂದು ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟೀಸ್ ಫಣೀಂದ್ರ ಹೇಳಿದರು.
ಶ್ರೀಯುತರು ರೋಟರಿ ಜಿಲ್ಲೆ 3182 ವಲಯ ನಾಲ್ಕರ ಶ್ರೀಸವಾಸ್ಯಂನಲ್ಲಿ ಜರುಗಿದ ‘ಯುವಧ್ವನಿ’ ಶಾಂತಿ ಸ್ನೇಹ ಸಾಮರಸ್ಯಕ್ಕಾಗಿ ಸಂಗೀತ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಬಿ.ಕೆ. ನಾರಾಯಣ, ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ಉದ್ಯಮಿ ರಾಘವೇಂದ್ರ, ಬೆಂಗಳೂರು, ಸಾಹಿತಿ ಕು.ಗೋ. (ಕೆ ಗೋಪಾಲ ಭಟ್), ಉಡುಪಿ ನೃತ್ಯ ನಿಕೇತನದ ಸಂಸ್ಥಾಪಕ ನಿರ್ದೇಶಕಿ ವಿದುಷಿ ಶ್ರೀಮತಿ ಲಕ್ಷ್ಮಿ ಗುರುರಾಜ, ಕಲಾತೀರ ಒಡಿಸ್ಸಿ ನೃತ್ಯ ಸಂಸ್ಥೆಯ ಸಂಸ್ಥಾಪಕರಾದ ಗುರು ವಿದ್ವಾನ್ ಉದಯಕುಮಾರ್ ಶೆಟ್ಟಿ, ರೋಟರಿ ಉಡುಪಿ ಡಾ| ಸುರೇಶ ಶೆಣೈ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಮಾಜಿ ರೋಟರಿ ಅಸಿಸ್ಟೆಂಟ್ ಗವರ್ನರ್ ಜೈವಿಠಲ್ ಉಪಸ್ಥಿತರಿದ್ದರು.
ಆಹ್ವಾನಿತ ಅನೇಕ ಯುವ ಸಂಗೀತ ಕಲಾವಿದರು ಸಂಗೀತ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿ, ವಿನೂತನ ಪರಿಕಲ್ಪನೆಯ ಯುವಧ್ವನಿಯ ಸಾರ್ಥ್ಯಕ್ಯದ ಸಂತಸವನ್ನು ಹಂಚಿಕೊಂಡರು. ಗಣೇಶ ರಾವ್ ಎಲ್ಲೂರು ವಂದಿಸಿದರು,