ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ 03 ಜನ ಕಾನೂನಿನೊಂದಿಗೆ ಸಂಘರ್ಷಕ್ಕೆ ಇಳಿದ ಬಾಲಕರ ಬಂಧನ
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿ ಅಳಿವೆ ಬಾಗಿಲಿನ ಬಳಿಯಲ್ಲಿ ಹುಡುಗಿಯನ್ನು ಬಲವಂತದಿಂದ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ 7 ಜನ ಆರೋಪಿಗಳ ವಿರುದ್ದ ಠಾಣಾ ಅ.ಕ್ರ 60/2018 ಕಲಂ 376(ಡಿ), 323, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ 04 ಜನ ಆರೋಪಿಗಳ ಬಂಧನವಾಗಿದ್ದು, ಪಣಂಬೂರು ಇನ್ಸ್ಪೆಕ್ಟರ್ ರಫೀಕ್ ಕೆ.ಎಂ ಮತ್ತು ಮಂಗಳೂರು ಉತ್ತರ ಉಪ-ವಿಭಾಗದ ರೌಡಿ ನಿಗ್ರಹ ದಳದ ವಿಶೇಷ ತಂಡದಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂ ಡಿದ್ದ 03 ಜನ ಅಪ್ರಾಪ್ತ ವಯಸ್ಸಿನ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಮಕ್ಕಳನ್ನು ದಸ್ತಗಿರಿ ಮಾಡಿ ಮಾನ್ಯ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿರುತ್ತದೆ.
ಈ ಪ್ರಕರಣದ ಪತ್ತೆಕಾರ್ಯವು ಮಂಗಳೂರು ಸಂಚಾರ ಉಪ-ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಮಂಜುನಾಥ ಶೆಟ್ಟಿ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್.ಕೆ.ಎಮ್, ಮಂಗಳೂರು ಮಹಿಳಾ ಠಾಣಾ ಪಿಐ ಶ್ರೀಮತಿ ಕಲಾವತಿ, ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಶ್ರೀ ಉಮೇಶ್ ಕುಮಾರ್.ಎಂ.ಎನ್ ಹಾಗೂ ಮಂಗಳೂರು ನಗರ ಉತ್ತರ ಉಪ-ವಿಭಾಗ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳಾದ ಎ.ಎಸ್.ಐ ಶ್ರೀ ಮೊಹಮ್ಮದ್, ಶ್ರೀ ಕುಶಲ ಮಣಿಯಾಣಿ, ಶ್ರೀ ವಿಜಯ ಕಾಂಚನ್, ಶ್ರೀ ಸತೀಶ್.ಎಂ, ಶ್ರೀ ಶರಣ್ ಕಾಳಿ, ಠಾಣಾ ಗುಪ್ತವಾರ್ತಾ ಸಿಬ್ಬಂದಿ ಶ್ರೀ ಚಂದ್ರಹಾಸ ಆಳ್ವ ಮತ್ತು ಪಣಂಬೂರು ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.