Spread the love
ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ನಿರತರಾಗಿದ್ದ 7 ಮಂದಿಯನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು
ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ನಿರತರಾಗಿದ್ದ 7 ಮಂದಿಯನ್ನು ಗಂಗೊಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರನ್ನು ಪುರುಷೋತ್ತಮ ಖಾರ್ವಿ(42ವರ್ಷ), ದಿನೇಶ್(42 ವರ್ಷ), ವಿನೋದ(43 ವರ್ಷ) ಮಹೇಶ್ ಖಾರ್ವಿ(28 ವರ್ಷ), ಕೃಷ್ಣ(36 ವರ್ಷ), ನಾಗರಾಜ ಖಾರ್ವಿ(44ವ), ಸಂದೇಶ್(31 ವರ್ಷ) ಎಂದು ಗುರುತಿಸಲಾಗಿದೆ.
ಜೂನ್ 3ರಂದು ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಪೇಟೆಯ ಫೆರಿರೋಡ್ ನಲ್ಲಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಠಾಣಾ ಪಿ.ಎಸ್.ಐ ಭೀಮಾಶಂಕರ ಸಿನ್ನೂರ ಸಂಗಣ್ಣ ರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಗಂಟೆಗೆ ದಾಳಿ ನಡೆಸಿ 7 ಜನ ಆಪಾದಿತರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಉಪಯೋಗಿಸಿದ 1360/-ರೂ, ಇಸ್ಪೀಟು ಎಲೆಗಳು – 52, ಪ್ಲಾಸ್ಟಿಕ್ ಚೀಲವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love