ಸಿ.ಎ, ಐಪಿಸಿಸಿ, ಸಿಪಿಟಿ, ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ
ವಿದ್ಯಾಗಿರಿ: ಸಮಾಜ ಬದಲಾಗುತ್ತಿದ್ದಂತೆ ಉದ್ಯೋಗಗಳು ಅನೇಕ ಸುಧಾರಣೆಗಳನ್ನು ಹೊಂದುತ್ತಿವೆ, ಅದಕ್ಕನುಗುಣವಾಗಿ ನಾವು ಹೊಂದಿಕೊಂಡು ಹೋಗಬೇಕು. ಆದ್ದರಿಂದ ಮನುಷ್ಯನ ದೈನಂದಿನ ಬದುಕಿನಲ್ಲಿ ಕಲಿಕೆ ಅಗತ್ಯ ಎಂದು ಅಕಾಡೆಮಿಕ್ ಹೆಡ್ ಫಾರ್ ಸಿ.ಎಫ್.ಒ ನೆಕ್ಷ್ಟ್, ಮೆಂಬರ್ ಆಫ್ ಎಸಿಸಿಐ, ಚಾರ್ಟರ್ಡ ಅಕೌಂಟೆಂಟ್ ಜಯ್ಗೋಯಲ್ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾದ 2018ನೇ ನವೆಂಬರ್ – ಡಿಸೆಂಬರ್ ಸಾಲಿನ ಸಿ.ಎ, ಐಪಿಸಿಸಿ, ಸಿಪಿಟಿ, ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದರು.
ರೂಪಾಯಿ ಅಪಮೌಲಿಕರಣದಿಂದಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಸಿಎ, ಸಿಪಿಟಿ ಉತ್ತೀರ್ಣರಾದವರಿಗೆ ಉದ್ಯೋಗ ಸೃಷ್ಟಿಯಾಗಿದೆ. ಆದ್ದರಿಂದ ಸಿಎ, ಸಿಪಿಟಿಗಳು ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಸ್ತುತ ಭಾರತದಲ್ಲಿ ಐದು ಲಕ್ಷ ಸಿಎ, ಸಿಪಿಟಿ ಉತ್ತೀರ್ಣರಿಗೆ ಉದ್ಯೋಗಾವಕಾಶಇದೆ. ಔದ್ಯೋಗಿಕ ಅರ್ಹತೆಗಳನ್ನು ಹೊಂದುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಯುವಕರಿದ್ದಾಗಲೇ ತಂತ್ರಜ್ಞಾನ ಬಳಕೆಯ ವಿಧಾನವನ್ನು ಸಮರ್ಪಕವಾಗಿ ಅರಿತುಕೊಂಡಿರಬೇಕು ಹಾಗೂ ಅವುಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ಪ್ರಸ್ತುತ ಆರ್ಥಿಕತೆಯಲ್ಲಿ ಹಾಗೂ ಕೈಗಾರಿಕೋದ್ಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ವಿಮರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ್ ಆಳ್ವ ಮಾತನಾಡಿ, ಜಿಎಸ್ಟಿ ಹಾಗೂ ರೂಪಾಯಿ ಅಪಮೌಲೀಕರಣ ಪ್ರಕ್ರಿಯೆ ಚಾರ್ಟರ್ಡ ಅಕೌಂಟೆಂಟ್ಗಳಿಗೆ ಉತ್ತಮ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಯುವಕರು ಎಲ್ಲಾ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದುವುದರ ಜೊತೆಗೆ ಕಾಲಕಾಲಕ್ಕೆ ಉನ್ನತೀಕರಣ ಹೊಂದುವುದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ನಮ್ಮ ಕಾಲೇಜಿನಲ್ಲಿ ಸಿಎ, ಸಿಪಿಟಿ ಕೋರ್ಸ್ಗಳು ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ಈ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ತಂದುಕೊಟ್ಟದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಫ್ಯೂಚರ್ ವರ್ಷನ್ ಎಜುಕೆಷನ್ ಸೊಲ್ಯೂಷನ್ನ ನಿರ್ದೆಶಕ ಡಾನ್ ಆಂಡ್ರ್ಯೂ ಡಿ’ಸೋಜಾ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರೊ.ಕೆ.ಉಮೇಶ್ ಶೆಟ್ಟಿ, ಆಳ್ವಾಸ್ ಪದವಿ ಪೂರ್ವಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್.ಡಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರು ಅನಂತಶಯನ ಸ್ವಾಗತಿಸಿ, ಸಂಯೋಜಕಿ ಅಪರ್ಣಾ ವಂದಿಸಿ, ವಿದ್ಯಾರ್ಥಿನಿ ಸಿಂಧು ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.
2018ನೇ ನವೆಂಬರ್ – ಡಿಸೆಂಬರ್ ಸಾಲಿನ ಸಿಎ ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ಹಳೆ ವಿದ್ಯಾರ್ಥಿಗಳಾದ ಕು.ಪ್ರಿಯಾಂಕ ದೇಶದಲ್ಲಿಯೇ 48ನೇ ರ್ಯಾಂಕ್ ಮತ್ತು ಕು.ಪ್ರತಾಪ್ ಸಿಂಗ್ ಉತ್ತಮ ಫಲಿತಾಂಶದೊದಿಗೆ ಉತ್ತೀರ್ಣರಾಗಿರುತ್ತಾರೆ.
ಸಿಎ ಸಿಪಿಟಿಯಲ್ಲಿ ಅಳ್ವಾಸ್ ಕಾಲೇಜು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಾದ ಶ್ವೇತಾ ಎಂ.ಎನ್, ಸ್ಫೂರ್ತಿ, ಹರ್ಷಾ, ನಿಶಾ, ಶೃತಿಗೌಡ, ಸುಷ್ಮಿತಾ. ಬಿ. ಸಿ, ವಚನ್ ಶೆಟ್ಟಿ, ಯಶಸ್ವಿನಿ, ರಾಯ್ಡನ್ ಮೆನೇಜಸ್, ಸಾಕ್ಷಿ, ಸ್ವಾತಿರಾಯ್ಕರ್, ಹರ್ಷಕುಮರ್, ಮೆಲ್ವಿನ್, ಶಶಿ ಕುಮಾರ್ಉತ್ತಮ ಫಲಿತಾಂಶದೊಂದಿಗೆತೇರ್ಗಡೆ ಹೊಂದಿದ್ದಾರೆ.
ಸಿಎ ಐಪಿಸಿಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಗ್ರೂಪ್-1 ವಿಭಾಗದಲ್ಲಿ 74% ಫಲಿತಾಂಶವನ್ನು ಪಡೆದುಕೊಂಡರೆ, ಗ್ರೂಪ್-2 ವಿಭಾಗದಲ್ಲಿ 66% ಫಲಿತಾಂಶವನ್ನು ಪಡೆದುಕೊಂಡಿದೆ.